Advertisement
ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮಾಜಿ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಅಧಿಕಾರವಧಿಯಲ್ಲಿ ಮಾಡಿದ ಕೆಲಸಗಳನ್ನು ಮಾಜಿ ಸಂಸದರು ಗಮನಿಸಬೇಕು. ಎಸ್ಸಿ, ಎಸ್ಟಿ ಸಮುದಾಯಕ್ಕೆ ಬಜೆಟ್‌ನಲ್ಲಿ 29 ಸಾವಿರ ಕೋಟಿ ರೂ.ಗಳನ್ನು ಕಲ್ಪಿಸಲು ವಿಶೇಷ ಕಾನೂನು ಜಾರಿಗೆ ತಂದರು. 371ಜೆ ಕಲಂ ಜಾರಿಯ ಮೂಲಕ ಹಿಂದುಳಿದ ಪ್ರದೇಶದ ಎಲ್ಲ ವರ್ಗ, ಜಾತಿಯ ಜನರಿಗೆ ಅನುಕೂಲ ಕಲ್ಪಿಸಿದರು. ಅನೇಕರು ಇಂದು ಉದ್ಯೋಗಸ್ಥರಾಗಿರುವುದರ ಹಿಂದೆ ಅವರ ಶ್ರಮದ ಫಲವಿದೆ ಎಂದರು.
Related Articles
Advertisement
ವೀರಶೈವ ಲಿಂಗಾಯತರ ಭೀತಿಯಿದ್ದರೆ, ಸಿದ್ದರಾಮಯ್ಯ ಅವರು 6 ಕೋಟಿ ಜನರ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಸ್ಥಿತಿಗತಿ ಆಧರಿಸಿ ವರದಿ ನೀಡಲು ಆದೇಶ ಹೊರಡಿಸುತ್ತಿರಲಿಲ್ಲ. ಅವರ ವಿರುದ್ಧ ಲಿಂಗಾಯತರು ಕೋಪಗೊಂಡಿಲ್ಲ. ನಾವೆಲ್ಲ ಲಿಂಗಾಯತರಲ್ಲವೇ? ಅಮರೇಗೌಡ ಬಯ್ನಾಪುರ, ದರ್ಶನಾಪುರ, ನಾನು ಸೇರಿ ಅನೇಕರು ಅವರನ್ನು ಮೆಚ್ಚಿದ್ದೇವೆ. ಸಿದ್ದರಾಮಯ್ಯ ಅವರ ವ್ಯಕ್ತಿತ್ವ ದೊಡ್ಡದು. ದೇವರಾಜು ಅರಸು ಮಾದರಿಯಲ್ಲೇ ಎಲ್ಲ ವರ್ಗಕ್ಕೆ ಸೌಲಭ್ಯ ಕಲ್ಪಿಸಿದ ಕೀರ್ತಿ ಅವರಿಗೆ ದಕ್ಕುತ್ತದೆ. ರಾಜಕೀಯಕ್ಕಾಗಿ ಟೀಕಿಸಲು ಕೆಟ್ಟ ಶಬ್ದ ಬಳಸುವುದನ್ನು ನಾವು ಖಂಡಿಸಬೇಕಾಗುತ್ತದೆ ಎಂದರು.
ವಕೀಲರಾದ ಎಂ.ಕಾಳಿಂಗಪ್ಪ, ನಿರುಪಾದೆಪ್ಪ ಗುಡಿಹಾಳ, ನಗರ ಕಾಂಗ್ರೆಸ್ ಅಧ್ಯಕ್ಷ ಖಾಜಿಮಲಿಕ್, ಮಸ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನುಮಂತಪ್ಪ ಮುದ್ದಾಪುರ, ನಗರಸಭೆ ಮಾಜಿ ಅಧ್ಯಕ್ಷ ಜಾಫರ್ ಜಾಹಗೀರದಾರ್ ಇದ್ದರು.