Advertisement

ನಾರುತ್ತಿದೆ ಹೌಸಿಂಗ್‌ ಬೋರ್ಡ್‌ ಕಾಲೋನಿ

05:25 PM Sep 03, 2017 | |

ಎಚ್‌.ಡಿ.ಕೋಟೆ: ಪಟ್ಟಣದ 11ನೇ ವಾರ್ಡಿನ ಹೌಸಿಂಗ್‌ ಬೋರ್ಡ್‌ ಕಾಲೋನಿ
ಯಲ್ಲಿ ತೆರೆದ ಚರಂಡಿಗಳನ್ನು ಪುರಸಭೆ ಸ್ವತ್ಛಗೊಳಿಸದ ಕಾರಣ ಚರಂಡಿಯ ಕೊಳಚೆ ನೀರು ಮುಂದೆ ಹರಿಯದೇ ನಿಂತಲ್ಲೇ ನಿಂತು ಇಡೀ ಪರಿಸರವೇ ಗಬ್ಬೆದ್ದು ನಾರುತ್ತಿದೆ. ಇನ್ನು ಸ್ಥಳಿಯ ನಿವಾಸಿಗಳಂತೂ ಮುಗು ಮುಚ್ಚಿಕೊಂಡೇ ತಿರುಗಬೇಕಾದ ದುಸ್ಥಿತಿ ಎದುರಾಗಿದೆ.

Advertisement

ಕೊಳಚೆ ನೀರು ಶೇಖರಣೆಯಿಂದಾಗಿ ಸೊಳ್ಳೆಗಳ ಹಾವಳಿ ಹೆಚ್ಚಿದ್ದು, ಈ ಭಾಗದಲ್ಲಿ
ವಾಸವಾಗಿರುವ ನಾಗರೀಕರು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುವ ಸಾಧ್ಯತೆ
ಹೆಚ್ಚಾಗಿದೆ.

ಪುರಸಭಾ ಸದಸ್ಯರ ನಿರ್ಲಕ್ಷ್ಯ: ಮನೆಗಳಿಂದ ಹೊರ ಬರುವ ಗಲೀಜು ನೀರು ರಸ್ತೆ ಬದಿಯ ತೆರೆದ ಚರಂಡಿಯಲ್ಲಿ ನಿಲ್ಲುವ ಪರಿಣಾಮ ದಿನೇ ದಿನೆ ಇಲ್ಲಿನ ವಾತಾವರಣ ಆನೈರ್ಮಲ್ಯ ಗೊಂಡು ದುರ್ನಾತ ಬೀರುತ್ತಿದ್ದರೂ ವಾರ್ಡಿನ ಪುರಸಭಾ ಪ್ರತಿನಿಧಿಯಾಗಲೀ ಪುರಸಭಾ ಅಧಿಕಾರಿಗಳಾಗಲಿ ಸ್ವತ್ಛತೆ ಕೈಗೊಂಡು ಇಲ್ಲಿನ
ನಿವಾಸಿಗಳಿಗೆ ಉತ್ತಮ ವಾತಾವರಣ ಕಲ್ಪಿಸಲು ಮುಂದಾಗದಿರುವುದಕ್ಕೆ ನಿವಾಸಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಡೆಂಘೀ ಭಯದಲ್ಲಿ ನಿವಾಸಿಗಳು: ಈಗ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ
ಡೆಂಘೀ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಈಗಾಗಲೇ ತಾಲೂಕು ಆರೋಗ್ಯ ಅಧಿಕಾರಿಗಳ ಮಾಹಿತಿ ಪ್ರಕಾರ 12 ಜನರಲ್ಲಿ ಡೆಂಘೀ ಸೋಂಕು ಕಾಣಿಸಿಕೊಂಡಿದ್ದು, ಜಿಲ್ಲೆಯಲ್ಲೂ ಡೆಂಘೀ ಪ್ರಕರಣ ಹೆಚ್ಚಾಗುತ್ತಿರುವ ವಾರ್ಡಗಳಲ್ಲಿ ಅನೈರ್ಮಲ್ಯ ಉಂಟಾಗದಂತೆ ಎಚ್ಚರ ವಹಿಸುವಂತೆ ಜಿಲ್ಲಾಡಳಿತ ಕೂಡ ಖಡಕ್‌
ಆದೇಶ ನೀಡಿದ್ದರೂ ಇಲ್ಲಿನ ಅಧಿಕಾರಿಗಳು ಮಾತ್ರ ತೆರೆದ ಚರಂಡಿಗಳನ್ನು ಕಾಲ ಕಾಲಕ್ಕೆ ಸ್ವತ್ಛಗೊಳಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ.

ಇಲ್ಲಿನ ಕಲುಷಿತ ವಾತಾವರಣದಿಂದ ಸೊಳ್ಳೆಗಳ ಹಾವಳಿ ಮಿತಿಮೀರಿದ್ದು, ಮಕ್ಕಳು
ವಯೋವೃದ್ಧರು ಡೆಂಘೀ ಜ್ವರ, ಹೆಚ್‌1ಎನ್‌1, ಮಲೇರಿಯಾ, ಮೆದುಳು ಜ್ವರದಂತಹ ಇನ್ನಿತರ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುವ ಸಾಧ್ಯತೆ ಇರುವುದರಿಂದ ನಿವಾಸಿಗಳು ಭಯಭೀತರಾಗಿದ್ದಾರೆ.

Advertisement

ಜಾಣ ಕುರುಡು: ಇಲ್ಲಿ ನಿರ್ಮಾಣವಾಗಿರುವ ಅನೈರ್ಮಲ್ಯ ವಾತಾವರಣದಲ್ಲೇ ಪುರಸಭೆ ಹಾಲಿ ಸದಸ್ಯೆ ಸುಹಾಸಿನಿ ಹಾಗೂ ಪುರಸಭೆ ಕಿರಿಯ ಆರೋಗ್ಯ ನಿರೀಕ್ಷಕ ಅವರು ವಾಸವಾಗಿದ್ದಾರೆ. ಅದರೂ ಅನೈರ್ಮಲ್ಯ ಉಂಟಾಗಿರುವುದನ್ನು ತಿಳಿದಿದ್ದರೂ ಸ್ವತ್ಛಗೊಳಿಸಿ ಉತ್ತಮ ಪರಿಸರ ಕಲ್ಪಿಸಲು ಮುಂದಾಗದೆ ಕಂಡರೂ ಕಾಣದಂತೆ ಜಾಣ ಕುರುಡರಂತೆ ವರ್ತಿಸುತ್ತಿರುವುದಕ್ಕೆ ಜನರು ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನಾದರೂ ಪುರಸಭೆ ಅಧಿಕಾರಿಗಳು ಬಡಾವಣೆಯಲ್ಲಿ
ಕೂಡಲೇ ಸ್ವತ್ಛತೆ ಕೈಗೊಂಡು ಉಂಟಾಗಿರುವ ಅನೈರ್ಮಲ್ಯ ವಾತಾವರಣವನ್ನು ತಿಳಿಗೊಳಿಸಿ ಜನರಿಗೆ ಉತ್ತಮ ವಾತಾವರಣ ನಿರ್ಮಾಣ ಮಾಡಲು ಶ್ರಮಿಬೇಕಿದೆ. ಆ ನಿಟ್ಟಿನಲ್ಲಿ ಇಲ್ಲಿನ ಅಧಿಕಾರಿಗಳು ಮುಂದಾಗುವರೇ ಕಾದುನೋಡ ಬೇಕು.
 
ಬಿ.ನಿಂಗಣ್ಣ ಕೋಟೆ

Advertisement

Udayavani is now on Telegram. Click here to join our channel and stay updated with the latest news.

Next