Advertisement

Bad manners: ಮಾಸ್‌ ಮನಸುಗಳಿಗೆ ಬ್ಯಾಡ್‌ ಮ್ಯಾನರ್ಸ್

11:56 AM Nov 16, 2023 | Team Udayavani |

ಸೂರಿ ಸಿನಿಮಾ ಎಂದರೆ ಅಲ್ಲೊಂದು ವಿಚಿತ್ರ ಲೋಕವಿರುತ್ತದೆ, ವಿಭಿನ್ನವಾದ ಪಾತ್ರಗಳು ಬರುತ್ತವೆ, ಆ ಪಾತ್ರಗಳ ಹೆಸರುಗಳನ್ನು ಕೂಡಾ ಹಿಂದೆ ಯಾರೂ ಕೇಳಿರಲ್ಲ, ಅಂತಹ ಹೆಸರಿನ ಪಾತ್ರಗಳು ಸಿನಿಮಾವನ್ನು ಜೀವಿಸುತ್ತವೆ… ಅದೇ ಕಾರಣದಿಂದ ಸೂರಿ ಸಿನಿಮಾ ಬರುತ್ತದೆ ಎಂದಾಗ ಕೊಂಚ ನಿರೀಕ್ಷೆ ಹೆಚ್ಚೇ ಇರುತ್ತದೆ.

Advertisement

ಸದ್ಯ ಬಿಡುಗಡೆಯಾಗಿರುವ “ಬ್ಯಾಡ್‌ ಮ್ಯಾನರ್’ ಚಿತ್ರದ ಟ್ರೇಲರ್‌ ನೋಡಿದಾಗ ಈ ಬಾರಿ ಮಾಸ್‌ ಪ್ರೇಮಿಗಳಿಗೆ ಸೂರಿ ಭರ್ಜರಿ “ಹಬ್ಬದೂಟ’ ರೆಡಿ ಮಾಡಿದಂತಿದೆ. ಡೈಲಾಗ್‌, ಲೊಕೇಶನ್‌, ಪಾತ್ರಗಳ ಶೈಲಿ… ಎಲ್ಲವೂ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿಸುವಂತಿದೆ. ನಾಯಕ ಅಭಿಷೇಕ್‌ ಕೂಡಾ ಸಖತ್‌ ರಗಡ್‌ ಆಗಿ ಕಾಣಿಸಿಕೊಂಡಿದ್ದಾರೆ.

ಇತ್ತೀಚೆಗೆ “ಬ್ಯಾಡ್‌ಮ್ಯಾನರ್’ ಚಿತ್ರದ ಟ್ರೇಲರ್‌ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ನಟ ದರ್ಶನ್‌ ಟ್ರೇಲರ್‌ ರಿಲೀಸ್‌ ಮಾಡಿ ಅಭಿಷೇಕ್‌ ಅವರಿಗೆ ಶುಭ ಕೋರಿದರು.

ಜಿ.ಟಿ.ವರ್ಲ್ಡ್ ಮಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾವಿರಾರು ಸಂಖ್ಯೆಯ ಅಭಿಮಾನಿಗಳು ಸೇರಿದ್ದರು. “ಬ್ಯಾಡ್‌ ಮ್ಯಾನರ್’ ಚಿತ್ರವನ್ನು ಸೂರಿ ನಿರ್ದೇಶಿಸಿದ್ದು, ಸುಧೀರ್‌ ನಿರ್ಮಾಣ ಮಾಡಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಸಿನಿಮಾದ ಹಾಡುಗಳು ಹಿಟ್‌ಲಿಸ್ಟ್‌ ಸೇರಿವೆ. ಈಗ ಟ್ರೇಲರ್‌ ಕೂಡಾ ಅದೇ ಹಾದಿಯಲ್ಲಿ ಮುಂದುವರೆಯುತ್ತಿದೆ. ಚಿತ್ರ ನ.24ರಂದು ತೆರೆಕಾಣುತ್ತಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next