Advertisement
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘2013ರಲ್ಲಿ ಹಿಂದುಗಳಿದ ವರ್ಗಗಳ ಜಾತಿಗಣತಿಗೆ ಆದೇಶಿಸಿದರು. 1931ರ ನಂತರ ಮೊದಲ ಬಾರಿಗೆ ಜಾತಿ ಗಣತಿ ಎಂದು ಬಿಂಬಿಸಿಕೊಂಡಿದ್ದರು. 2015 ರಲ್ಲಿ ವರದಿ ಸಿದ್ದವಾಯಿತು. ಆದರೆ ಆಯೋಗದಿಂದ ವರದಿಯನ್ನು ಸರಕಾರ ಪಡೆಯಲಿಲ್ಲ. ಬಿಡುಗಡೆಗೆ ತಮ್ಮ ಪಕ್ಷದಲ್ಲಿ ಸಾಕಷ್ಟು ವಿರೋಧಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಬಿಡುಗಡೆ ಮಾಡಲಿಲ್ಲ. ಹಿಂದೆ ಸಮ್ಮಿಶ್ರ ಸರಕಾರದ ಸಂದರ್ಭದಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಒತ್ತಾಯ ಮಾಡಲಿಲ್ಲ. ಇದೀಗ ಟ್ವೀಟ್‌ಗಳ ಮೂಲಕ ಹಿಂದುಗಳಿದ ವರ್ಗಗಳ ಬಗ್ಗೆ ಡೋಂಗಿ ಕಾಳಜಿ ತೋರುತ್ತಿದ್ದಾರೆ. ಅಲ್ಲದೆ ಮುಖ್ಯಮಂತ್ರಿ ಚಂದ್ರು ಅವರ ಮೂಲಕ ಪಿಐಎಲ್ ಹಾಕಿಸಿದ್ದು, ಅದರಲ್ಲಿ 2015 ರಲ್ಲಿ ಪೂರ್ಣಗೊಂಡ ವರದಿ ಬಿಡುಗಡೆ ಆದೇಶ ಮಾಡುವಂತೆ ಕೋರ್ಟ್‌ನ್ನು ಕೋರಿದ್ದಾರೆ. ಸುಳ್ಳುಗಳನ್ನು ಹೇಳುವುದರಲ್ಲಿ ಸಿದ್ದರಾಮಯ್ಯ ನಿಸ್ಸೀಮರಾಗಿದ್ದಾರೆ’ಎಂದರು.
‘ಹಿಂದುಳಿದ ವರ್ಗಗಳ ವರದಿ ಬಿಡುಗಡೆ ಬಗ್ಗೆ ಸುಳ್ಳು ಹೇಳುತ್ತಿರುವ ಸಿದ್ದರಾಮಯ್ಯ ಅವರ ಬಣ್ಣ ಬಯಲು ಮಾಡಬೇಕಿತ್ತು. ಆದರೆ ವರದಿ ಬಿಡುಗಡೆ ಮಾಡುವುದು ಸರಕಾರಕ್ಕೆ ಹಾಗೂ ಮುಖ್ಯಮಂತ್ರಿಗಳಿಗೆ ಬಿಟ್ಟ ವಿಚಾರ. ವರದಿಯಲ್ಲಿ ಏನಿದೆ ಎನ್ನುವುದರ ಕುರಿತಾಗಿ ನನಗೆ ಯಾವುದೇ ಮಾಹಿತಿಯಿಲ್ಲ. ಮುಖ್ಯಮಂತ್ರಿಗಳು, ಹಿಂದುಳಿದ ವರ್ಗಗಳ ಆಯೋಗ ಅಧ್ಯಕ್ಷರು ಇದರ ಬಗ್ಗೆ ಚಿಂತನೆ ಮಾಡಿ ನಿರ್ಧಾರ ತೆಗೆದುಕೊಳ್ಳಬೇಕು. ಸರಕಾರದ ಯಾವ ಹುದ್ದೆಯಲ್ಲಿ ನಾನು ಇಲ್ಲದಿರುವುದರಿಂದ ನಾನು ಈ ಬಗ್ಗೆ ಉತ್ತರಿಸುವುದು ಸೂಕ್ತವಲ್ಲ. ವರದಿ ಬಗ್ಗೆ ಪಕ್ಷದೊಳಗೆ ಯಾವುದೇ ಚರ್ಚೆಗಳು ಆಗಿಲ್ಲ. ಸಿದ್ದಾಮಯ್ಯ ಅವರು ಸುಳ್ಳು ಹೇಳಿದ್ದಾರೆ ಎನ್ನುವುದನ್ನು ಹೊರಹಾಕುವುದಷ್ಟೇ ನಮ್ಮ ಉದ್ದೇಶ’ ಎಂದರು.