ಇದು ನಮ್ಮ ದೇಶದ ಒಂದು ಅದ್ಭುತವಾದ ಹಬ್ಬ. ಹೋಳಿ ಹುಣ್ಣಿಮೆ ಅಂದರೆ ಬಣ್ಣದ ಓಕುಳಿ ಎಂಬ ಅರ್ಥ ಇದೆ. ಹೋಳಿ ಹಬ್ಬದ ದಿನ ಸ್ನೇಹಿತರ ಜತೆಗೂಡಿ ಹಾಡು ಹರಟೆ ಮಾಡಿ ಬಣ್ಣದಲ್ಲಿ ಚೆನ್ನಾಗಿ ಆಟವಾಡಿದೆ. ಬಳಿಕ ಪಿಜಿ ಗೆ ಬಂದಾಗ ಅಮ್ಮನ ನೆನಪಾಗಿ ಫೋನ್ ಮಾಡಿದೆ. ಅಮ್ಮ ಎಂದಿನಂತೆ ನನ್ನ ಕುಶಲೋಪರಿ ವಿಚಾರಿಸಿ ಹೋಳಿ ಆಟ ಹೇಗಾಯ್ತು ಎಂದು ಕೇಳಿದ್ದರು ಆಗ ನಾನು ತುಂಬಾ ಖುಷಿ ಪಟ್ಟೆ ಆದರೆ ಬಣ್ಣ ಮಾತ್ರ ಮೈಗಂಟಿದೆ ಹೋಗುತ್ತಿಲ್ಲ ಎಂದೆ. ಬಳಿಕ ನನಗೆ ನಮ್ಮ ಅಮ್ಮನ ಕಾಲದಲ್ಲಿ ಹೇಗೆ ಹೋಳಿ ಆಚರಣೆ ಮಾಡುತ್ತಿದ್ದರು ಎಂಬ ಕುತೂಹಲ ಮೂಡಿ ಈ ಬಗ್ಗೆ ಅಮ್ಮನಲ್ಲಿ ಪ್ರಸ್ತಾಪಿಸಿದೆ.
ಅದಕ್ಕೆ ಉತ್ತರಿಸಿದ್ದ ನನ್ನ ಅಮ್ಮ ನಮ್ಮ ಕಾಲದಲ್ಲಿ ನಿಮ್ಮಂತೆ ಇರಲಿಲ್ಲ ಡಿಜೆ , ಪಾರ್ಟಿ ಅನ್ನೊದೆಲ್ಲ ಇಲ್ಲವೇ ಇಲ್ಲ. ಅಂದಿನ ಕಾಲದಲ್ಲಿ ನಾವೆಲ್ಲ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡುವ ಪದ್ಧತಿ ಅನುಸರಿಸುತ್ತಿದ್ದೆವು ಎಂದರು. ಹೋಳಿ ಆಚರಣೆಯ ಹಿಂದೆ ಅನೇಕ ಆಚರಣೆಯ ಕ್ರಮ ಕಾಣಬಹುದು.ಹಿಂದೆ ಶಿವನ ತಪಸ್ಸನ್ನು ಭಂಗ ಮಾಡಿದ್ದಕ್ಕಾಗಿ ಕಾಮದೇವನನ್ನು ತನ್ನ ಮೂರನೇ ಕಣ್ಣಿಂದ ಭಸ್ಮ ಮಾಡುತ್ತಾನೆ ದೇವಿ ಭಕ್ತೆಯಾದ ರತಿಯು ತನ್ನ ಪತಿಗೆ ಮರಳಿ ಜೀವದಾನ ವಿತ್ತಬೇಕೆಂದು ಕೇಳುತ್ತಾಳೆ ಆಗ ಶಿವ ರತಿಗೆ ಮಾತ್ರ ಕಾಣುವ ಕಾಮದೇವ (ಮನ್ಮಥ) ಹಾಗೆ ವರ ಕೊಡುತ್ತಾನೆ. ಕಾಮದೇವನು ಶಿವನ ಮೂರನೇ ಕಣ್ಣಿಗೆ ಗುರಿಯಾಗಿ ಸುಟ್ಟಿದ್ದರಿಂದ ಈ ದಿನವನ್ನೇ ಕಾಮನ ಹಬ್ಬ ಎಂದು ಆಚರಣೆ ಆರಂಭ ಮಾಡಲಾಗಿದೆ.
ನಮ್ಮ ಅಮ್ಮನ ಕಾಲದಲ್ಲಿ ಈ ದಿನದಂದು ಪೂಜೆ ಪುನಸ್ಕಾರ ಮಾಡಿ, ಜಾನಪದ ಹಾಡ ಹಾಡಿ, ಕುಣಿತ್ತಿದ್ದರು. ಹಬ್ಬದ ಊಟ ತಯಾರಿ ಮಾಡಿ ಮನೆ ಮಂದಿ ಒಟ್ಟಾಗಿ ಕೂತು ಸವಿಯುತ್ತಿದ್ದರು. ಕಾಮಣ್ಣನ ಸುಟ್ಟಿ ಜಾಗ ಎಂದು ಮಾಡುತ್ತಿದ್ದು ಅಲ್ಲಿಗೆ ಹೋಗಿ ಕಡ್ಲೆ ಕಾಳು ಹಾಕುತ್ತಿದ್ದರು. ಅಲ್ಲಿ ಸುಟ್ಟಿದ ಕೆಂಡದಿಂದ ಕಡ್ಲೆಕಾಳು ಸುಟ್ಟು ಕೊಂಡ ಕಾಮಣ್ಣನ ಪ್ರಸಾದ ಅನ್ಕೊಂಡ ಎಲ್ಲ ಮಕ್ಕಳು ತಿನ್ನುತ್ತಿದ್ದರಂತೆ ಆದರೆ ಈಗ ಆ ಎಲ್ಲ ಸಂಪ್ರದಾಯ ಸಂಸ್ಕೃತಿಗಳು ಮರೆಯಾಗುತ್ತಿವೆ. ಮಥುರ, ಬೃಂದಾವನದ ಭಾಗದಲ್ಲಿ ಈ ಹಬ್ಬವನ್ನು ರಾಧಾ ಕೃಷ್ಣ ದೇವರ ಪ್ರೇಮದ ದಿನವೆಂದು ಆಚರಿಸುತ್ತಾರೆ, ಹೀಗೆ ನಾನಾ ಭಾಗದಲ್ಲಿ ಆಚರಣೆಯ ಕ್ರಮ ಬೇರೆ ಆದರೂ ಸಾಂಪ್ರದಾಯ ಬದ್ಧ ಆಚರಣೆ ಹಿಂದಿನಿಂದಲೂ ಇತ್ತು ಎಂಬುದನ್ನು ನಾವು ಕಾಣಬಹುದು. ಆದರೆ ಈಗ ಮಾತ್ರ ಇದು ಡಿಜೆ ಕುಣಿತಕ್ಕೆ ಮಾತ್ರ ಸೀಮಿತವಾಗಿದ್ದು ಬೇಸರದ ಸಂಗತಿಯಗಿದೆ.
-ಮಂದಾರ ನಾಗಮ್ಮನವರ
ಧಾರವಾಡ