Advertisement

ಸಂಕಲಕರಿಯ ಶಾಂಭವಿ ನದಿ ಅಣೆಕಟ್ಟಿಗೆ ಮತ್ತೆ ಕಾಯಕಲ್ಪ

10:01 PM Dec 21, 2019 | mahesh |

ಬೆಳ್ಮಣ್‌: ಸಂಕಲಕರಿಯ, ಏಳಿಂಜೆ ಐಕಳ, ಮುಂಡ್ಕೂರು, ಕಡಂದಲೆ, ಸಚ್ಚೇರಿಪೇಟೆ, ಕೊಟ್ರಪಾಡಿ, ಪೊಸ್ರಾಲು ಭಾಗದ ಜನರ ಜಲಮೂಲ ಎನಿಸಿರುವ ಶಾಂಭವಿ ನದಿಯ ಸಂಕಲಕರಿಯ ಶಾಂಭವಿ ನದಿ ಅಣೆಕಟ್ಟಿಗೆ ಗುರುವಾರ ಹಲಗೆ ಹಾಕುವ ಕಾರ್ಯ ಪೂರ್ತಿಗೊಂಡಿದೆ. ಈ ನದಿಯ ಅಕ್ಕಪಕ್ಕದ ಊರಿನ ಮನೆಗಳ ಬಾವಿಗಳಲ್ಲಿಯೂ ನೀರಿನ ಒರತೆ ಹೆಚ್ಚಾಗಿದೆ.

Advertisement

ನಿರ್ವಹಣೆ ಕೊರತೆ
ಕಳೆದ ಕೆಲ ವರ್ಷಗಳಿಂದ ಸಮರ್ಪಕ ನಿರ್ವಹಣೆ ಕೊರತೆಯಿಂದ ಸಂಕಲಕರಿಯ ಅಣೆಕಟ್ಟು ಬತ್ತಿಹೋಗಿ ಇಲಾಖೆಯಿಂದಲೂ ನಿರ್ಲಕ್ಷ್ಯಕ್ಕೊಳಗಾಗಿದ್ದು ಕಳೆದೆರಡು ವರ್ಷ ಗಳಿಂದ ಗ್ರಾಮಸ್ಥರಿಂದ ನಿರ್ವಹಿಸ ಲ್ಪಡುತ್ತಿದ್ದು ಈ ಬಾರಿಯೂ ಅದೇ ಮಾದರಿಯಲ್ಲಿ ಹಲಗೆ ಹಾಕಲಾಗಿದೆ. ಈ ಪ್ರಕ್ರಿಯೆಗೆ ಸಣ್ಣ ನೀರಾವರಿ ಇಲಾಖೆಯ ಎಂಜಿನಿಯರ್‌ ರಾಕೇಶ್‌ ಅವರೂ ಸ್ಪಂದಿಸಿದ್ದು ಇಲಾಖೆಯಿಂದ ಸಿಗುವ ನೆರವನ್ನು ಸಕಾಲದಲ್ಲಿ ಪೂರೈಸುವುದಾಗಿ ತಿಳಿಸಿದ್ದಾರೆ.

ಕಳೆದ 10 ವರ್ಷಗಳ ಹಿಂದೆ ಅಂದಿನ ಶಾಸಕ, ಮಾಜಿ ಸಚಿವ ಅಭಯಚಂದ್ರ ಜೈನ್‌ ಅವರ ಮುತುವರ್ಜಿಯಿಂದ ನಿರ್ಮಾಣಗೊಂಡ ಈ ಅಣೆಕಟ್ಟು ಸಂಕಲಕರಿಯ, ಏಳಿಂಜೆ, ಪೊಸ್ರಾಲು, ಕೊಟ್ರಪಾಡಿ, ಪಟ್ಟೆ ಕ್ರಾಸ್‌ ಪರಿಸರದ ಕೃಷಿಕರು, ಗ್ರಾಮಸ್ಥರು ಕಳೆದೆರಡು ವರ್ಷದಿಂದ ಹಲಗೆಗಳನ್ನು ಜೋಡಿಸಿ ನದಿಯಲ್ಲಿ ನೀರು ಸಂಗ್ರಹವಾಗುವಂತೆ ಮಾಡಿದ್ದರು.

ಈ ಅಣೆಕಟ್ಟು ಮುಂಡ್ಕೂರು ಹಾಗೂ ಐಕಳ ಪಂಚಾಯತ್‌ನ ಹೆಚ್ಚಿನ ಭಾಗದ ಜನರಿಗೆ ಪ್ರಯೋಜನವಾಗಲಿರುವುದರಿಂದ ಇದರ ನಿರ್ವಹಣೆಗೆ ಐಕಳ, ಮುಂಡ್ಕೂರು ಪಂಚಾಯತ್‌ ಎಚ್ಚೆದ್ದು ಕೃಷಿಕರ ಹಿತ ಕಾಪಾಡಬೇಕಾಗಿದೆ. ಶ್ರಮದಾನದಲ್ಲಿ ಸ್ಥಳೀಯರ ಜತೆ ಹಲವು ಕೃಷಿಕರು ಸಹಕರಿಸಿದ್ದು ಕೆಲ ಕೃಷಿಕರು ಧನಸಹಾಯ ನೀಡಿದ್ದಾರೆ.

ಕೃಷಿಕರಿಗೆ ಪ್ರಯೋಜನ
ಎರಡು ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಬರುವ ಈ ನದಿ ಅಣೆಕಟ್ಟಿಗೆ ಹಲಗೆ ಹಾಕುವುದರಿಂದ ಸುತ್ತ ಮುತ್ತಲಿನ ಹಲವು ಕೃಷಿಕರಿಗೆ ಪ್ರಯೋಜನ ವಾಗಲಿದೆ.
-ಸುಧಾಕರ್‌ ಸಾಲ್ಯಾನ್‌ , ಸಂಕಲಕರಿಯ, ಐಕಳ ಪಂಚಾಯತ್‌ ಸದಸ್ಯರು

Advertisement

ನೀರಿನ ಒರತೆ ಹೆಚ್ಚಳ
ಈ ಅಣೆಕಟ್ಟಿನಿಂದ ಸಂಕಲಕರಿಯದಿಂದ ಕಡಂದಲೆ , ಪಶ್ಚಿಮ ಭಾಗದ ಎಲ್ಲ ಪರಿಸರದ ಕೃಷಿ ಭೂಮಿ, ಮುಂಡ್ಕೂರು, ಕಡಂದಲೆ, ಪೊಸ್ರಾಲು, ಪಟ್ಟೆ , ಏಳಿಂಜೆ, ದಾಮಸ್ಕಟ್ಟೆ ಭಾಗಗಳಲ್ಲಿ ನೀರಿನ ಒರತೆ ಹೆಚ್ಚಾಗಿದೆ.
-ಸುಧೀರ್‌ ಶೆಟ್ಟಿ ಹೊಗೆ ಮಾರು, ಕೃಷಿಕರು

Advertisement

Udayavani is now on Telegram. Click here to join our channel and stay updated with the latest news.

Next