ನವದೆಹಲಿ: ಜಮ್ಮು-ಕಾಶ್ಮೀರದಲ್ಲಿ ಬರೋಬ್ಬರಿ ಎರಡು ವರ್ಷಗಳ ಬಳಿಕ ಶಾಲಾ, ಕಾಲೇಜುಗಳು ಬುಧವಾರ(ಮಾರ್ಚ್ 02)ದಿಂದ ಪುನರಾರಂಭಗೊಂಡಿದ್ದು, ಇದರಿಂದ ವಿದ್ಯಾರ್ಥಿಗಳು ಮತ್ತು ಪೋಷಕರು ಸಂತಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:6,000 ರಷ್ಯನ್ ಯೋಧರನ್ನು ಹತ್ಯೆಗೈಯ್ಯಲಾಗಿದೆ : ಉಕ್ರೇನ್ ಅಧ್ಯಕ್ಷ
ಶಿಕ್ಷಣ ತಜ್ಞರ ಅಭಿಪ್ರಾಯದ ಪ್ರಕಾರ, ದೀರ್ಘಕಾಲದ ನಂತರ ಶಾಲೆಗಳು ಪುನರಾರಂಭಗೊಂಡಿದ್ದರಿಂದ ವಿದ್ಯಾರ್ಥಿಗಳು ದೈನಂದಿನ ಚಟುವಟಿಕೆಗಳಿಗೆ ಹೊಂದಿಕೊಳ್ಳಲು ಕನಿಷ್ಠ ಆರು ತಿಂಗಳ ಕಾಲ ಬೇಕಾಗಬಹುದು ಎಂದು ತಿಳಿಸಿದ್ದಾರೆ.
ಸುಮಾರು ಎರಡು ವರ್ಷಗಳ ಕಾಲ ತರಗತಿಯಿಂದ ದೂರವಿದ್ದು ಆನ್ ಲೈನ್ ಕಲಿಕೆಯಲ್ಲಿ ತೊಡಗಿದ್ದರಿಂದ ಇದೀಗ ಭೌತಿಕ ತರಗತಿಗಳು ಆರಂಭಗೊಂಡಿದೆ. ಇದರಿಂದಾಗಿ ಮಕ್ಕಳುಶಾಲಾ ಸಮಯಕ್ಕೆ ಸರಿಯಾಗಿ ಏಳುವುದು, ಸ್ಕೂಲ್ ತಲುಪುವ ಸಮಯ ಮತ್ತೆ ರೂಢಿಸಿಕೊಳ್ಳಬೇಕಾಗಿದೆ.
ಮುಖ್ಯವಾಗಿ ಪ್ರಾಥಮಿಕ ಶಾಲಾ ಮಕ್ಕಳು ಈಗ ಹೊರ ಹೋಗಲು ಹೆದರುತ್ತಿದ್ದಾರೆ. ಕೋವಿಡ್ ಸೋಂಕಿನ ಭೀತಿಯಿಂದ ಶಾಲಾ, ಕಾಲೇಜು ಬಂದ್ ಆಗಿದ್ದವು. ಎರಡು ವರ್ಷದ ಬಳಿಕ ಶಾಲಾ, ಕಾಲೇಜು ಆರಂಭವಾಗಿದ್ದರಿಂದ ಮಕ್ಕಳಲ್ಲಿ ಸಂವಹನ ಕೊರತೆ ಕಾಣಿಸಲಿದೆ ಎಂದು ಶಿಕ್ಷಣ ತಜ್ಞರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಕೋವಿಡ್ ಸೋಂಕಿನ ಭೀತಿಯಿಂದ ವಿದ್ಯಾರ್ಥಿಗಳ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಿದೆ. ಆನ್ ಲೈನ್ ಶಿಕ್ಷಣದಿಂದ ವಿದ್ಯಾರ್ಥಿಗಳ ಸಾಮಾಜಿಕ ಕೌಶಲ್ಯದ ಮೇಲೆ ಗಂಭೀರ ಪರಿಣಾಮ ಬೀರಿದೆ. ಇದರಿಂದಾಗಿ ವಿದ್ಯಾರ್ಥಿಗಳು ಭೌತಿಕ ತರಗತಿಯಲ್ಲಿ ಕೆಲವೊಂದು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಎಂಆರ್ ಜಿ ಶಾಲೆಯ ಅಕಾಡೆಮಿಕ್ ಕೋ ಆರ್ಡಿನೇಟರ್ ಪಲ್ಲವಿ ಜೈನ್ ತಿಳಿಸಿದ್ದಾರೆ.