Advertisement

ಬ್ಯಾಕ್‌ ಟು ಬ್ಯಾಕ್‌ ಆಶಿಕಾ: ಈ ವಾರ ಒಂದು ಮುಂದಿನ ವಾರ ಮತ್ತೂಂದು ರಿಲೀಸ್‌

04:05 PM Dec 03, 2021 | Team Udayavani |

ನಟಿ ಆಶಿಕಾ ಕುತೂಹಲದಿಂದ ಎದುರು ನೋಡುತ್ತಿದ್ದಾರೆ. ಅವರ ಕುತೂಹಲ ಕೇವಲ ಒಂದು ವಾರಕ್ಕೆ ಸೀಮಿತವಾಗಿಲ್ಲ. ಡಿಸೆಂಬರ್‌ ಮೊದಲ ವಾರದಿಂದ ಆರಂಭವಾಗಿ ಜನವರಿವರೆಗೂ ಮುಂದುವರೆಯಲಿದೆ! ಹೀಗೆಂದರೆ ನಿಮಗೆ ಆಶ್ಚರ್ಯವಾಗಬಹುದು.

Advertisement

ನಾವು ಹೇಳುತ್ತಿರೋದು ನಟಿ ಆಶಿಕಾ ಕೈಯಲ್ಲಿರುವ ಸಿನಿಮಾಗಳ ಬಗ್ಗೆ. ಸದ್ಯ ಆಶಿಕಾ ಕನ್ನಡದ ಬಿಝಿ ನಟಿ. ಕಳೆದ ಒಂದೆರಡು ವಾರದಲ್ಲಿ ನಾಲ್ಕು ಬಾರಿ ಸಿನಿಮಾ ಪತ್ರಿಕಾಗೋಷ್ಠಿ ಎದುರಿಸಿದ ನಟಿ. ಅದಕ್ಕೆ ಕಾರಣ ಬಿಡುಗಡೆಗೆ ಸಿದ್ಧವಾಗಿರುವ ಆಶಿಕಾ ಚಿತ್ರಗಳು.

ಸದ್ಯ ಆಶಿಕಾ ನಟಿಸಿರುವ ಮೂರು ಚಿತ್ರಗಳು ಒಂದರ ಹಿಂದೊಂದರಂತೆ ಬಿಡುಗಡೆಯಾಗುತ್ತಿದೆ. ಆಶಿಕಾ ನಾಯಕಿಯಾಗಿ ನಟಿಸಿರುವ “ಮದಗಜ’ ಚಿತ್ರ ಇಂದು ಬಿಡುಗಡೆಯಾಗುತ್ತಿದೆ. ಈ ಚಿತ್ರದಲ್ಲಿ ಆಶಿಕಾ ಸಖತ್‌ ವಿಭಿನ್ನ ಪಾತ್ರದಲ್ಲಿ ನಟಿಸಿದ್ದಾರಂತೆ. ಪಲ್ಲವಿ ಎಂಬ ಸಖತ್‌ ಬೋಲ್ಡ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ. ಇದು ಈ ವಾರದ ಕಥೆಯಾದರೆ, ಮುಂದಿನ ವಾರ ಮತ್ತೂಂದು. ಶರಣ್‌ ನಾಯಕರಾಗಿರುವ “ಅವತಾರ್‌ ಪುರುಷ’ ಚಿತ್ರ ಡಿಸೆಂಬರ್‌ 10ರಂದು ತೆರೆಗೆ ಬರುತ್ತಿದೆ. ಈ ಚಿತ್ರದಲ್ಲೂ ಆಶಿಕಾ ನಾಯಕಿ. ಸುನಿ ನಿರ್ದೇಶನದ ಈ ಚಿತ್ರದಲ್ಲೂ ಹೊಸ ಬಗೆಯ ಪಾತ್ರದಲ್ಲಿ ಆಶಿಕಾ ಕಾಣಿಸಿಕೊಂಡಿದ್ದಾರೆ.

ಇದು ಡಿಸೆಂಬರ್‌ನಲ್ಲಿ ಬಿಡುಗಡೆಯಾಗುತ್ತಿರುವ ಸಿನಿಮಾಗಳ ಸಂಖ್ಯೆಯಾದರೆ ಜನವರಿಯಲ್ಲಿ ಆಶಿಕಾ ನಟನೆಯ ಮತ್ತೂಂದು ಚಿತ್ರ ಬಿಡುಗಡೆಯಾಗುತ್ತಿದೆ. ಅದು “ರೆಮೋ’. ಪವನ್‌ ಒಡೆಯರ್‌ ನಿರ್ದೇಶನದ ಅಪ್ಪಟ ಲವ್‌ಸ್ಟೋರಿಯಾಗಿರುವ ಈ ಚಿತ್ರದಲ್ಲಿ ಆಶಿಕಾ ನಾಯಕಿಯಾಗಿ ನಟಿಸಿದ್ದಾರೆ. ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ಆಶಿಕಾ ಬಿಝಿಯಾಗಿದ್ದಾರೆ. ಇದರ ಜೊತೆಗೆ ಒಂದಷ್ಟು ಸಿನಿಮಾಗಳ ಚಿತ್ರೀಕರಣ ಕೂಡಾ ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next