Advertisement

ಸ್ನಾತಕ ಕೋರ್ಸ್‌ಗಳಲ್ಲಿ ಸಮುದಾಯ ಸೇವೆ

02:21 PM Feb 21, 2017 | Team Udayavani |

ಧಾರವಾಡ: ರಾಷ್ಟ್ರೀಯತೆ ಮತ್ತು ಸಮಗ್ರತೆ  ಪರಿಕಲ್ಪನೆಗಳು ಸಮುದಾಯ ಸೇವೆಯನ್ನು ಬಿಂಬಿಸುವ ಪ್ರಮುಖ ಅಂಶಗಳಾಗಿವೆ. ಈ ನಿಟ್ಟಿನಲ್ಲಿ ಸಮುದಾಯ ಸೇವೆಯನ್ನು ವಿವಿಧ ವಿಶ್ವವಿದ್ಯಾಲಯಗಳ ಸ್ನಾತಕ ಕೋರ್ಸ್‌ ಗಳಲ್ಲಿ ಐಚ್ಚಿಕ ವಿಷಯವನ್ನಾಗಿ ಸೇರಿಸಲು ಉದ್ದೇಶಿಸಲಾಗಿದೆ ಎಂದು ಬೆಂಗಳೂರು ಎನ್‌ಎಸ್‌ಎಸ್‌ ಪ್ರಾಂತೀಯ ಕೇಂದ್ರ ನಿರ್ದೇಶಕ ಅರುಣ ಪೂಜಾರ ಹೇಳಿದರು.

Advertisement

ಕೃಷಿ ವಿಶ್ವವಿದ್ಯಾಲಯದ ಗ್ರಾಮೀಣ ಗೃಹ ವಿಜ್ಞಾನ ಮಹಾವಿದ್ಯಾಲಯ, ಕರ್ನಾಟಕ ರಾಜ್ಯ ಎನ್‌ಎಸ್‌ಎಸ್‌ ಕೋಶ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಸೋಮವಾರದಿಂದ ಹಮ್ಮಿಕೊಂಡ ರಾಷ್ಟ್ರೀಯ ಭಾವೈಕ್ಯತಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಶಿಸ್ತು ಬದ್ಧ ಜೀವನ, ಗುಣಾತ್ಮಕತೆ ಇವುಗಳು ಯುವಕರಲ್ಲಿ ಹಾಗೂ ಸಮಾಜದಲ್ಲಿ ಪ್ರಮುಖ ಬದಲಾವಣೆ ತರಬಹುದಾಗಿದೆ. ಈ ನಿಟ್ಟಿನಲ್ಲಿ ತಾಯ್ನಾಡಿನ ಏಳ್ಗೆಗೆ ದೇಶದ ಶೇ.65ರಷ್ಟು ಜನಸಂಖ್ಯೆಯಲ್ಲಿ ಪ್ರತಿನಿಧಿಧಿಸುವ ಯುವಶಕ್ತಿಯಲ್ಲಿ ಸೇವಾ ಮನೋಭಾವ, ಕನಸುಗಾರಿಕೆ, ಕೆಲಸಗಾರಿಕೆ ಹಾಗೂ ದೂರದೃಷ್ಟಿತ್ವಗಳನ್ನು ಮೇಳೈಸಬೇಕಿದೆ ಎಂದರು. 

ಭಾರತೀಯ ಸ್ಟೇಟ್‌ ಬ್ಯಾಂಕ್‌ನ ಪ್ರಬಂಧಕ ಪುವನೇಶನ್‌ ಮಾತನಾಡಿ, ಭಾಷೆ, ಸಂಸ್ಕೃತಿ ಎಲ್ಲೆಗಳನ್ನು ಮೀರಿಸುವ ಇಂತಹ ಶಿಬಿರಗಳು ಇಂದಿನ ಅಗತ್ಯಗಳಾಗಿದ್ದು, ಗ್ರಾಮೀಣ ಸೇವೆಯಲ್ಲಿ ಯುವಕರನ್ನು ಹುರಿದುಂಬಿಸಲು ಸ್ಟೇಟ್‌ಬ್ಯಾಂಕ್‌ ಅಗತ್ಯ ನೆರವು ಒದಗಿಸಲಿದೆ. 

ಈ ಶಿಬಿರದ ವ್ಯವಸ್ಥೆಯಲ್ಲಿ ಟಿ-ಶರ್ಟ್‌ ಹಾಗೂ ಟೊಪ್ಪಿಗೆಗಳನ್ನು ಸ್ಟೇಟ್‌ ಬ್ಯಾಂಕ್‌ ಒದಗಿಸಿದ್ದು, ಮುಂದಿನ ಪೀಳಿಗೆಯ ಮಾನವೀಯ ಮೌಲ್ಯಗಳನ್ನು ಹೊಂದಿರುವ ಯಶಸ್ವಿ ನೇತಾರರನ್ನು ರೂಪಿಸಲು ಇಂತಹ ಶಿಬಿರಗಳು ಸಹಾಯಕವಾಗಲಿವೆ ಎಂದರು. ಅಧ್ಯಕ್ಷತೆ ವಹಿಸಿದ್ದ ಕೃವಿವಿ ಕುಲಪತಿ ಡಾ| ಡಿ.ಪಿ. ಬಿರಾದಾರ ಮಾತನಾಡಿ, ಯುವ ಶಕ್ತಿಯು ಅತ್ಯಂತ ಸೂಕ್ಷ್ಮಮತಿಯಾಗಿದ್ದು, ಬಾಹ್ಯ ಶಕ್ತಿಗಳಿಂದ ಆಕರ್ಷಿತವಾಗುವ ಸಾಧ್ಯತೆ ಇದೆ.

Advertisement

ಧನಾತ್ಮಕ ವಿಚಾರಗಳನ್ನು ಮಾತ್ರ ಅಳವಡಿಸಕೊಳ್ಳಬೇಕಲ್ಲದೇ ಋಣಾತ್ಮಕ ವಿಚಾರಗಳಿಗೆ ಕಿವಿಗೊಡದೆ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು. ಡಾ| ಎಸ್‌.ಕೆ.ಗಾಳಿ ಇದ್ದರು. ವಿನುತಾ ಪ್ರಾರ್ಥಿಸಿದರು. ವಿಜಯಲಕೀತಂಡದವರು ಎನ್‌ಎಸ್‌ಎಸ್‌ ಗೀತೆ ಪ್ರಸ್ತುತಪಡಿಸಿದರು. ಡಾ| ಛಾಯಾ ಬಡಿಗೇರ ಸ್ವಾಗತಿಸಿದರು.

ಡಾ|ಜೆ.ಎಸ್‌. ಸೊನ್ನದ ಪ್ರಾಸ್ತಾವಿಕ ಮಾತನಾಡಿದರು. ಸುರೇಖಾ ಸಂಕನಗೌಡರ ನಿರೂಪಿಸಿದರು. ಡಾ|ಮಂಜುಳಾ ಪಾಟೀಲ ವಂದಿಸಿದರು. ಆರು ರಾಜ್ಯಗಳನ್ನು ಪ್ರತಿನಿಧಿಧಿಸುವ 150 ಕ್ಕೂ ಹೆಚ್ಚು ಎನ್‌ಎಸ್‌ಎಸ್‌ ಸ್ವಯಂ ಸೇವಕರು, ಕಾರ್ಯಕ್ರಮ ಅಧಿಧಿಕಾರಿಗಳು ಮತ್ತು ವಿಶ್ವವಿದ್ಯಾಲಯದ ಅಧಿಕಾರಿಗಳು, ಶಿಕ್ಷಕರು, ಶಿಕ್ಷಕೇತರರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ.  

Advertisement

Udayavani is now on Telegram. Click here to join our channel and stay updated with the latest news.

Next