Advertisement

ಬಾಚಹಳ್ಳಿ ವೀರಾಂಜನೇಯ ಬ್ರಹ್ಮರಥೋತ್ಸವ

07:30 AM Feb 25, 2019 | |

ಹುಣಸೂರು: ನಗರಕ್ಕೆ ಸಮೀಪದ ಆಸ್ಪತ್ರೆ ಕಾವಲ್‌ ಗ್ರಾಪಂ ವ್ಯಾಪ್ತಿಯ ಬಾಚಹಳ್ಳಿ ಇತಿಹಾಸ ಪ್ರಸಿದ್ಧ ವೀರಾಂಜನೇಯಸ್ವಾಮಿ 68ನೇ ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ಜರುಗಿತು.

Advertisement

ಭಾನುವಾರ ಮಧ್ಯಾಹ್ನ 1.30ಕ್ಕೆ ವೀರಾಂಜನೇಯಸ್ವಾಮಿ ಬೆಳ್ಳಿ ವಿಗ್ರಹ ಹಾಗೂ ರಾಮ ಲಕ್ಷ್ಮಣ ಸೀತೆಯ ಉತ್ಸವಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಿ, ನಂತರ ಪೂಜೆ ಸಲ್ಲಿಸಿ, ಜಾತ್ರಾಮಾಳದಿಂದ ಸಹಸ್ರಾರು ಭಕ್ತರು ಭಕ್ತಿ-ಭಾವದಿಂದ ರಥವನ್ನು ಎಳೆದು ದೇವಸ್ಥಾನದ ಹಿಂಭಾಗಕ್ಕೆ ತಂದು ನಿಲ್ಲಿಸಿದರು.

ಸಂಜೆ ಹನುಮ ಭಕ್ತರು ರಥವನ್ನು ಸ್ವಸ್ಥಾನಕ್ಕೆ ತಂದು ನಿಲ್ಲಿಸಿದರು. ಶನಿವಾರದಿಂದಲೇ ದೇವಸ್ಥಾನದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ನಡೆದವು. ವಧುವರರು ಹಾಗೂ ನೆರೆದಿದ್ದ ಭಕ್ತ ಸಮೂಹ ರಥಕ್ಕೆ ಹಣ್ಣು ಹವನ ಎಸೆದು ಭಕ್ತಿ ಮೆರೆದರು.

ಜಾತ್ರೆಯಲ್ಲಿ ಬಾಚಳ್ಳಿಬಯಲಿನ ರೈತರು ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಎತ್ತಿನಗಾಡಿಯಲ್ಲಿ ಕುಟುಂಬ ಸಮೇತರಾಗಿ ಬುತ್ತಿಯೊಂದಿಗೆ ತಂಡೋಪತಂಡವಾಗಿ ಆಗಮಿಸಿ ಪೂಜೆ ಸಲ್ಲಿಸಿ ತಂದಿದ್ದ ಬುತ್ತಿಯನ್ನು ಹಂಚಿ ತಿನ್ನುವುದು ಇಲ್ಲಿನ ವಾಡಿಕೆ.

10 ಸಾವಿರಕ್ಕೂ ಹೆಚ್ಚು ಮಂದಿ ಆಂಜನೇಯಸ್ವಾಮಿ ದರ್ಶನ ಪಡೆದರು. ವಿವಿಧ ಭಜನಾ ತಂಡಗಳವರು ನಿರಂತರ ಭಜನೆ ನಡೆಸಿಕೊಟ್ಟರು. ಜಾತ್ರೆಗೆ ನೂರಕ್ಕೂ ಹೆಚ್ಚು ಜೋಡೆತ್ತುಗಳು, ಹೋರಿಗಳನ್ನು ಕಟ್ಟಲಾಗಿತ್ತು.  ಭರ್ಜರಿ ವ್ಯಾಪಾರ, ವಹಿವಾಟು ನಡೆಯಿತು. 

Advertisement

ಇಂದು ತೆಪ್ಪೋತ್ಸವ: ಸೋಮವಾರ ಬೆಳಗ್ಗೆ 10ಗಂಟೆಗೆ ಗ್ರಾಮದ ಬಳಿಯ ಉದ್ದೂರು ನಾಲೆಯಲ್ಲಿ ವೀರಾಂಜನೇಯಸ್ವಾಮಿ ತೆಪ್ಪೋತ್ಸವ ನಡೆಯಲಿದೆ. ಭಕ್ತರಿಗೆ ನಗರದ ಹನುಮ ಭಕ್ತರು ಮಧ್ಯಾಹ್ನ ಊಟದ ವ್ಯವಸ್ಥೆ ಕಲ್ಪಿಸಿದ್ದರೆ, ನಂದಿ ಟ್ರೇಡರ್ ಹಾಗೂ ಬಾಚಳ್ಳಿಯ ಜನರು ಚಿಕ್ಕಹುಣಸೂರಿನಿಂದ ಜಾತ್ರಾಮಾಳದವರೆಗೆ ಅಲ್ಲಲ್ಲಿ ಮಜ್ಜಿಗೆ-ಪಾನಕ ವಿತರಿಸಿದರು. 

ಈ ವೇಳೆ ನಗರಸಭಾಧ್ಯಕ್ಷ ಎಚ್‌.ವೈ.ಮಹದೇವ್‌, ಮಾಜಿ ಶಾಸಕ ಎಚ್‌.ಪಿ.ಮಂಜುನಾಥ್‌, ಮಾಜಿ ಸಚಿವ ವಿಜಯಶಂಕರ್‌, ಜಾತ್ರೆ ಸಮಿತಿಯ ಲಕ್ಷ್ಮೀನಾರಾಯಣ, ಕಿಟ್ಟಪ್ಪ, ಸುಂದ್ರಣ್ಣ, ವೃತ್ತ ನಿರೀಕ್ಷಕ ಪೂವಯ್ಯ, ಎಸ್‌ಐ ಶಿವಪ್ರಕಾಶ್‌ ಇತರರಿದ್ದರು,.

Advertisement

Udayavani is now on Telegram. Click here to join our channel and stay updated with the latest news.

Next