Advertisement
ಕಿತ್ತಗಾನಹಳ್ಳಿ ಗ್ರಾಮದ ಶ್ರೀನಿವಾಸಸ್ವಾಮಿ ದೇವಾಲಯದಲ್ಲಿ ಬೆಳಗ್ಗೆಯಿಂದ ಪೂಜಾ ಧಾರ್ಮಿಕ ಕಾರ್ಯಕ್ರಮಗಳು ವಿಧಿ ವಿಧಾನಗಳಿಂದ ಜರುಗಿತು. 12 ಗಂಟೆಗೆ ರಥೋತ್ಸವ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಸ್ವಾಮಿಯನ್ನು ಹೊತ್ತ ರಥವು ಮಂಗಳ ವಾದ್ಯಗಳೊಂದಿಗೆ ಸಾಗಿತು. ರಾಜ್ಯದ ವಿವಿಧೆಡೆಗಳಿಂದ ಸಾವಿರಾರು ಭಕ್ತರು ಉರಿಬಿಸಿಲಿನ ನಡುವೆಯೂ ರಥೋತ್ಸವದಲ್ಲಿ ಪಾಲ್ಗೊಂಡು ಭಕ್ತಿ ಸಮರ್ಪಿಸಿದರು.
ಅನ್ನದಾಸೋಹ ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಕಿತ್ತಗಾನಹಳ್ಳಿ ಗ್ರಾಮಸ್ಥರು ಬೀದಿಯುದ್ದಕ್ಕೂ ಉರಳು
ಸೇವೆ ನಡೆಸಿದರು. ದೇವಾಲಯದ ಅರ್ಚಕ ಸೂರ್ಯನಾರಾಯಣ ದೀಕ್ಷಿತ್‌ರವರ ನೇತೃತ್ವದಲ್ಲಿ ದೇವತಾ
ಕಾರ್ಯಕ್ರಮಗಳು ನಡೆದವು. ಕಿತ್ತಗಾನಹಳ್ಳಿ ಗ್ರಾಮದ ಮುಖಂಡರಾದ ವಿ.ಶ್ರೀನಿವಾಸ್ ರೆಡ್ಡಿ, ಶಿವಪ್ಪರೆಡ್ಡಿ, ಮಂಜುನಾಥ್, ಸಂತೋಷ್, ಚೇತನ್,
ಸುಬ್ರಮಣಿ, ವಸಂತ್, ಮಂಜುನಾಥ್ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.