Advertisement

ಪುಟಾಣಿ ನ್ಯೂಸ್‌ ಆ್ಯಂಕರ್‌ಗಳು!

06:20 AM Nov 16, 2017 | Harsha Rao |

ಪುಟಾಣಿ ಮಕ್ಕಳು ಸಮಸ್ಯೆಗಳ ಕುರಿತು ಪ್ಯಾನಲ್‌ ಡಿಸ್ಕಶನ್‌ ನಡೆಸಿದರೆ ಹೇಗಿರುತ್ತೆ? ಹಾಂ, ಇಂಥ ವಿಭಿನ್ನ ಐಡಿಯಾದ ಶೋ ಒಂದು ಸಿದ್ಧವಾಗಿದೆ. “ದ ಚಿಲ್ಡ್ರನ್ಸ್‌ scrappy ನ್ಯೂಸ್‌ ಸರ್ವಿಸ್‌’  ಹೆಸರಿನ ಇಂಡಿಯನ್‌ ಶೋನ ಸಂಪೂರ್ಣ ಜವಾಬ್ದಾರಿ ಮಕ್ಕಳದ್ದೇ ಆಗಿದೆ. ಇಬ್ಬರು ಪುಟಾಣಿ ನಿರೂಪಕರು ಈ ಶೋ ನಡೆಸಿಕೊಡಲಿದ್ದಾರೆ. ಕಾರ್ಯಕ್ರಮದಲ್ಲಿ ಕರ್ನಾಟಕ ಸೇರಿದಂತೆ ಭಾರತದ ಆಯ್ದ ನಗರಗಳಿಂದ ಪುಟಾಣಿ ವರದಿಗಾರರು ತಮಗೆ ಕುತೂಹಲವೆನಿಸಿದ ಸಂಗತಿಗಳನ್ನು, ಸಮಸ್ಯೆಗಳನ್ನು ಚಿತ್ರೀಕರಣ ನಡೆಸಿ ವರದಿ ಮಾಡುತ್ತಾರೆ. ಅದರ ಕುರಿತು ಕೇಂದ್ರ ಕಚೇರಿ ಮುಂಬೈನ ಸ್ಟುಡಿಯೋನಲ್ಲಿ ಮಕ್ಕಳು ಕಾರ್ಯಕ್ರಮವನ್ನು ನಡೆಸಿಕೊಡುತ್ತಾರೆ.

Advertisement

ಒಂದು ಗಂಟೆಯ ಅವಧಿಯ ಶೋ ಇದಾಗಿದ್ದು, ಆಟದ ಮೈದಾನಕ್ಕೆ ಜಾಗದ ಕೊರತೆ, ಸಮುದ್ರವನ್ನು ಸೇರುತ್ತಿರುವ ಪ್ಲಾಸ್ಟಿಕ್‌ ಇವೇ ಮುಂತಾದ ಸಮಸ್ಯೆಗಳ ಬಗ್ಗೆ ಚರ್ಚಿಸಲು ದೊಡ್ಡವರನ್ನೂ ನ್ಯೂಸ್‌ರೂಂಗೆ ಆಹ್ವಾನಿಸಲಾಗುತ್ತದೆ. ಸದ್ಯ ಈ ತಂಡದವರು ಬೆಂಗಳೂರಿನಲ್ಲಿ ಈ ವಾರವಿಡೀ ಸ್ಥಳೀಯ ಸಮಸ್ಯೆಗಳ ಕುರಿತು ಜನರನ್ನು ಮಾತನಾಡಿಸಿ ಶೂಟಿಂಗ್‌ ನಡೆಸುತ್ತಿದ್ದಾರೆ. ಈ ಕಾರ್ಯಕ್ರಮವನ್ನು ಅವರದೇ ವೆಬ್‌ಸೈಟಿನಲ್ಲಿ, ಅಂದರೆ “www.scrappynews.com’ನಲ್ಲಿ ವೀಕ್ಷಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next