Advertisement

ರೈಲ್ವೇ ನಿಲ್ದಾಣದಲ್ಲೇ ಮಗುವಿಗೆ ಜನ್ಮ

12:25 PM Apr 28, 2019 | Vishnu Das |

ಥಾಣೆ: ಗರ್ಭಿಣಿಯೊಬ್ಬರು ರೈಲ್ವೇ ನಿಲ್ದಾಣದಲ್ಲೇ ಮಗುವಿಗೆ ಜನ್ಮ ನೀಡಿದ ಘಟನೆ ಶನಿವಾರ ಮುಂಜಾನೆ ನಡೆದಿದೆ. ಥಾಣೆ ರೈಲ್ವೇ ನಿಲ್ದಾಣದಲ್ಲಿ ಮುಂಜಾನೆ 5.40ರ ಸುಮಾರಿಗೆ ಈ ಘಟನೆ ನಡೆದಿದ್ದು, ಪೂಜಾ ಮುನ್ನ ಚೌವಾಣ್‌ (20) ಎಂಬವರು ಕೊಂಕಣ ಕನ್ಯಾ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಹೆರಿಗೆ ನೋವು ಪ್ರಾರಂಭಗೊಂಡಿತು.

Advertisement

ತತ್‌ಕ್ಷಣ ರೈಲು ಥಾಣೆ ನಿಲ್ದಾಣದಲ್ಲಿ ನಿಲುಗಡೆಗೊಂಡಿದ್ದು, ನಿಲ್ದಾಣದ ವನ್‌ ರೂಪಿ ಕ್ಲಿನಿಕ್‌ನ ಸಿಬಂದಿಗಳು ಕ್ಲಿನಿಕ್‌ಗೆ ಕರೆದುಕೊಂಡು ಹೋಗಿದ್ದು, ಪೂಜಾ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಆನಂತರ ತಾಯಿ-ಮಗುವನ್ನು ಸ್ಥಳೀಯ ಸಿವಿಲ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next