Advertisement

ಹಸುಳೆ ಸಾವು: ಗ್ರಾಮಸ್ಥರಿಂದ ಪ್ರತಿಭಟನೆ

12:06 PM Dec 31, 2017 | |

ಇಂಚಗೇರಿ: ಜಿಗಜೇವಣಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಸುಳೆಯೊಂದು ಸಾವನ್ನಪ್ಪಿದೆ. ವೈದ್ಯರಿಲ್ಲದ್ದರಿಂದ ಹಸು ಸಾವನ್ನಪ್ಪಿದೆ ಎಂದು ಆರೋಪಿಸಿ ಗ್ರಾಮಸ್ಥರು ಶನಿವಾರ ಪ್ರತಿಭಟನೆ ನಡೆಸಿದರು.

Advertisement

ಗ್ರಾಮದ ಸ್ವಾತಿ ಮಹೇಶ ಮಾದರ ಎಂಬುವವರು ಬೆಳಗ್ಗೆ 8ಕ್ಕೆ ಆಸ್ಪತ್ರೆಗೆ ಹೆರಿಗೆಗಾಗಿ ಆಗಮಿಸಿದ್ದರು. ಈ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಇತರೆ ವೈದ್ಯರಾಗಲಿ, ಹೆರಿಗೆ ಸಿಬ್ಬಂದಿಯಾಗಲಿ ಇರಲಿಲ್ಲ. ಇದೇ ಸಂದರ್ಭದಲ್ಲಿ ತೀವೃ ಹೆರಿಗೆ ನೋವು ಅನುಭವಿಸುತ್ತಿದ್ದ ಮಹಿಳೆ ಜೊತೆಗಾರರಾದ ಸುಮತಾಬಾಯಿ ಯಲ್ಲಿಗಾರ ಹಾಗೂ ಭೌರಮ್ಮ ಮಾದರ ಹೆರಿಗೆ ಮಾಡಿಸಿಕೊಂಡರು. ಅದೃಷ್ಟವಶಾತ್‌ ತಾಯಿ ಬದುಕುಳಿದರಾದರೂ ಮಗು ಮಾತ್ರ ಸಾವನ್ನಪ್ಪಿತ್ತು.

ಸುದ್ದಿ ತಿಳಿಯುತ್ತಿದ್ದಂತೆ ಬಾಣಂತಿ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಆಸ್ಪತ್ರೆಗೆ ದೌಡಾಯಿಸಿ ಪ್ರತಿಭಟನೆಗೆ ಮುಂದಾದರು.  ಈ ವೇಳೆ ಮಹಿಳೆಯ ತಂದೆ ಸಿದ್ದಪ್ಪ ಮಾದರ ಮಾತನಾಡಿ, ವೈದ್ಯರಿಗಾಗಿ ಹಲವಾರು ಬಾರಿ
ದೂರವಾಣಿ ಕರೆ ಮಾಡಿದರೂ ಯಾರೊಬ್ಬ ವೈದ್ಯರು ಆಸ್ಪತ್ರೆಗೆ ಬರಲಿಲ್ಲ. ಸುಮಾರು 2 ಗಂಟೆ ನಂತರ ನನ್ನ ಮಗಳ ಹೆರಿಗೆಯಾಯಿತಾದರೂ ಮಗು ಬದುಕುಳಿಯಲಿಲ್ಲ. ಘಟನೆಗೆ ವೈದ್ಯರ ನಿರ್ಲಕ್ಷéವೇ ಕಾರಣ. ಕೂಡಲೇ ಇವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಮುಖಂಡ ವಿಠ್ಠಲ ಬಿರಾದಾರ ಮಾತನಾಡಿ, ದೂರವಾಣಿ ಮೂಲಕ ಜಿಲ್ಲಾ ವೈದ್ಯಾಧಿಕಾರಿಗೆ ಹಲವಾರು ಬಾರಿ ಕರೆ ಮಾಡಿದರೂ ಕೂಡ ನಮ್ಮ ಕರೆಯನ್ನು ಸ್ವೀಕರಿಸಲಿಲ್ಲ. ಈ ಹಿಂದೆ ಇಂತಹ ಹಲವಾರು ವಿಷಯ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗಲಿಲ್ಲ. ಇದಕ್ಕೆ ಜಿಲ್ಲಾ ವೈದ್ಯಾಧಿಕಾರಿಯೇ ನೇರ ಹೋಣೆ. ಜಿಲ್ಲಾ ವೈದ್ಯಾಧಿಕಾರಿ ಸ್ಥಳಕ್ಕಾಗಮಿಸುವವರೆಗೂ ನಾವು ಶವ ಸಂಸ್ಕಾರ ಮಾಡುವುದಿಲ್ಲ ಎಂದು ಪಟ್ಟು ಹಿಡಿದರು.

ಸ್ಥಳಕ್ಕಾಗಮಿಸಿದ ತಾಲೂಕು ವೈದ್ಯಾಧಿಕಾರಿ ಡಾ| ಈರಣ್ಣ ಧಾರವಾಡಕರ ಪ್ರತಿಭಟನಾ ನಿರತರೊಂದಿಗೆ ಸಮಾಲೋಚನೆ ನಡೆಸಿ ಪರಿಸ್ಥಿತಿ ತಿಳಿಗೊಳಿಸಿದರಾದರೂ ಗ್ರಾಮಸ್ಥರು ಜಿಲ್ಲಾ ವೈದ್ಯಾಧಿಕಾರಿ ಸ್ಥಳಕ್ಕಾಗಿಮಿಸುವವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಸಿಬ್ಬಂದಿ ವಿರುದ್ಧ ಹರಿಹಾಯ್ದರು. ಆದಾಗ್ಯೂ ಸಾಯಂಕಾಲ ತಾಲೂಕು ವೈದ್ಯಾಧಿಕಾರಿ ಪ್ರತಿಭಟನಾಕಾರರ ಮನವೊಲಿಸಿ ಪ್ರತಿಭಟನೆ ಹಿಂಪಡೆಯುವಲ್ಲಿ ಯಶಸ್ವಿಯಾದರು.

Advertisement

ಈ ಸಂದರ್ಭದಲ್ಲಿ ತಾಪಂ ಸದಸ್ಯ ಅಮಸಿದ್ದ ಬಳಗಾನೂರ, ರವಿದಾಸ ಜಾಧವ, ಗ್ರಾಪಂ ಅಧ್ಯಕ್ಷ ಹನುಮಂತರಾಯ ಪಾಟೀಲ, ಪಪ್ಪು ತಾವಸಕರ, ಭಾಷಾಸಾಬ ಮಕಾನದಾರ, ಮಧು ವಾಲೀಕಾರ, ಚಾಂದ ಮುಲ್ಲಾ, ಅಪ್ಪುಗೌಡ ಪಾಟೀಲ, ಕಾಸು ಅಳ್ಳಿಮಳ ಇದ್ದರು 

Advertisement

Udayavani is now on Telegram. Click here to join our channel and stay updated with the latest news.

Next