ಪೋರ್ಟಲೆಝಾ (ಬ್ರೆಜಿಲ್): ಸುಮಾರು 12 ಸೆಂ.ಮೀ. ಉದ್ದದ ಬಾಲವಿರುವ ಮಗುವೊಂದು ಬ್ರೆಜಿಲ್‌ನಲ್ಲಿ ಇತ್ತೀಚೆಗೆ ಜನಿಸಿರುವ ಪ್ರಕರಣ ವರದಿಯಾಗಿದೆ.
ಫೋರ್ಟಲೆಝಾ ನಗರದಲ್ಲಿನ ಅಲ್ಬರ್ಟ್ ಸಬಿನ್ ಮಕ್ಕಳ ಆಸ್ಪತ್ರೆಯಲ್ಲಿ ಈ ಮಗು ಇತ್ತೀಚೆಗೆ ಜನನವಾಗಿದೆ.
ಇದೊಂದು ಅವಧಿಪೂರ್ವ ಜನನ ಪ್ರಕರಣವಾಗಿದ್ದು, ಮಗುವಿನ ತಾಯಿ 6 ತಿಂಗಳ ಗರ್ಭಿಣಿಯಾಗಿದ್ದಾಗಲೇ ಜನಿಸಿದ್ದು, ಇದರ ಸೊಂಟದ ಹಿಂಬದಿಯ ಭಾಗದಿಂದ ಬಾಲ ಬೆಳೆದಿತ್ತು. ಬಾಲದ ತುದಿಯಲ್ಲಿ ಪುಟ್ಟದಾದ ಚೆಂಡಿನಾಕಾರವೂ ಇತ್ತು.
ವಿಜ್ಞಾನಿಗಳು ಈ ಮಗುವಿನ ಪರೀಕ್ಷೆ ನಡೆಸಿ, ಇದೊಂದು ಮಾನವರಲ್ಲಿ ಅಪರೂಪವಾಗಿ ಇರಬಹುದಾದ ನೈಜ ಬಾಲ ಎಂದಿದ್ದರು. ಆನಂತರ, ವೈದ್ಯರ ತಂಡವೊಂದು ಶಸ್ತ್ರಚಿಕಿತ್ಸೆ ನಡೆಸಿ ಈ ಬಾಲವನ್ನು ದೇಹದಿಂದ ಬೇರ್ಪಡಿಸಿದ್ದಾರೆ.
ಇದನ್ನೂ ಓದಿ:ಕೇದಾರನಾಥ ಪ್ರತಿಮೆ ಅನಾವರಣ: ಮೋದಿಗೆ ದೇವೇಗೌಡರ ಪ್ರಶಂಸೆ