Advertisement
ಸೋಮವಾರ ವಿಧಾನಸೌಧದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ಸಂಸದ ಉಮೇಶ್ ಜಾಧವ್, ಶಾಸಕ ರಾಜ್ ಕುಮಾರ್ ಪಾಟೀಲ್ ತೇಳ್ಕೂರ್, ಪರಿಷತ್ ಸದಸ್ಯರಾದ ಎನ್.ರವಿಕುಮಾರ್, ಕೇಶವ್ ಪ್ರಸಾದ್ ಉಪಸ್ಥಿತರಿದ್ದರು.
ಬಿಜೆಪಿಯಲ್ಲಿ 75 ವರ್ಷ ವಯಸ್ಸು ಮೇಲ್ಪಟ್ಟವರಿಗೆ ಟಿಕೆಟ್ ನೀಡುವುದಿಲ್ಲ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಬಿಜೆಪಿ ಅಭ್ಯರ್ಥಿ ಬಾಬುರಾವ್ ಚಿಂಚನಸೂರ್, ನಾನು ಇನ್ನೂ ಹೊಸ ಮದುವೆ ಗಂಡು ತರ ಇದ್ದೇನೆ. ನನಗೆ ಯಾರು ವಯಸ್ಸಾಗಿದೆ ಅಂತಾ ಹೇಳಿದವರು? ಮುಂದೆ 2023ಕ್ಕೆ ಗುರುಮಿಟ್ಕಲ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆಲ್ಲಲು ಓಡಾಡುತ್ತಿದ್ದೇನೆ. ಮಾಲಿಕಯ್ಯ ಗುತ್ತೆದಾರ್ ನಾನು ಇಬ್ಬರು ಜೋಡೆತ್ತುಗಳು ಇದ್ದಂತೆ ಎಂದು ತಿಳಿಸಿದರು.