Advertisement

ಜಗಜೀವನರಾಂ ಆದರ್ಶ ಯುವಕರಿಗೆ ಪ್ರೇರಣೆ

04:17 PM Apr 06, 2021 | Team Udayavani |

ಬೀಳಗಿ: ಹಸಿರುಕ್ರಾಂತಿಯ ಹರಿಕಾರ ಮಾಜಿ ಉಪಪ್ರಧಾನಿ ಡಾ| ಬಾಬುಜಗಜೀವನರಾಂ ಅವರ ಆದರ್ಶಎಲ್ಲ ಯುವಸಮುದಾಯಕ್ಕೆ ಪ್ರೇರಣೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರಗೇಶ ನಿರಾಣಿ ಹೇಳಿದರು.

Advertisement

ಪಟ್ಟಣದಲ್ಲಿ ತಾಲೂಕು ಆಡಳಿತಆಶ್ರಯದಲ್ಲಿ ಡಾ| ಬಾಬು ಜಗಜೀವನರಾಂ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ದೇಶದ ಮಕ್ಕಳು ವಿದ್ಯಾವಂತರಾಗಬೇಕು ಎಂಬ ಮಹಾದಾಸೆ ಹೊಂದಿದ್ದ ಜಗಜೀವನರಾಂ ಅಪರೂಪದ ವ್ಯಕ್ತಿತ್ವ ಅವರದಾಗಿತ್ತು.ಜಾತಿ ತಾರತಮ್ಯ ಹೋಗಲಾಡಿಸಲುಶ್ರಮಿಸಿದ್ದರು. ರಾಜ್ಯದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಬೀಳಗಿ ತಾಲೂಕು ಮುಂಚೂಣಿಯಲ್ಲಿದೆ ಎಂದರು.

ತಾಯಂದಿರು ತಮ್ಮ ಮಕ್ಕಳನ್ನು ಕೆಲಸಕ್ಕೆ ಕಳುಹಿಸದೇ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಶಿಕ್ಷಣ ಮುಖ್ಯ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ. ಪ್ರತಿಭೆಗೆ ತಕ್ಕಂತೆ ಬದುಕು ರೂಪಿಸಿಕೊಳ್ಳುವಸಾಮರ್ಥ್ಯ ನಮ್ಮ ಮಕ್ಕಳಿಗಿದೆ. ಆದರೆ,ಅವರ ಪ್ರತಿಭೆ ಗುರುತಿಸಿಕೊಳ್ಳಲುಶಿಕ್ಷಕರು ಮತ್ತು ಪಾಲಕರ ಪಾತ್ರ ಮುಖ್ಯ ಎಂದರು.

ಈಗಾಗಲೇ ವಿಶೇಷ ಅನುದಾನದಲ್ಲಿ ಪಟ್ಟಣ ಪಂಚಾಯಿತಿಗೆ 5 ಕೋಟಿ ಮಂಜೂರಾಗಿದೆ. 250 ಕೋಟಿ ವೆಚ್ಚದಲ್ಲಿ ಪ್ರತಿ ಒಂದು ಜಿಪಂಕ್ಷೇತ್ರದಲ್ಲಿ ವಿದ್ಯುತ್‌ ಘಟಕ ನಿರ್ಮಾಣಮಾಡಲಾಗುವುದು. ತಾಲೂಕಿನಲ್ಲಿಸಂಪೂರ್ಣ ಕುಡಿಯುವ ನೀರಿನಸಮಸ್ಯೆ ಹೋಗಲಾಡಿಸಲು 65 ಕೋಟಿಮಂಜೂರು ಮಾಡಲಾಗಿದೆ ಎಂದು ಹೇಳಿದರು.

ರೈತರಿಗೆ ವ್ಯವಸಾಯ ಮಾಡಲು ಅನುಕೂಲವಾಗಲೆಂದು ಕಲಾದಗಿಮತ್ತು ಹೇರಕಲ್‌ ಬ್ರಿàಜ್‌ ಕಂ ಬ್ಯಾರೇಜ್‌ನಿರ್ಮಾಣ ಮಾಡಲಾಗಿದೆ ಎಂದುಸಚಿವ ಮುರಗೇಶ ನಿರಾಣಿ ಹೇಳಿದರು.

Advertisement

ಇದೇ ವೇಳೆ ಉಪನ್ಯಾಸ ನೀಡಿದಸೋಮಲಿಂಗ ಮುತ್ತಲದಿನ್ನಿ, ಪಪಂ ಅಧ್ಯಕ್ಷ ಸಿದ್ದಲಿಂಗೇಶ ನಾಗರಾಳ,ಉಪಾಧ್ಯಕ್ಷ ಕಾಮೇಶ ದಂಧರಗಿ, ತಾಪಂ ಅಧ್ಯಕ್ಷ ರಾಮಣ್ಣ ಬಿರಾದಾರ,ಉಪಾಧ್ಯಕ್ಷ ಶರೀಫಾಬೇಗಂ ಬಾವಾಖಾನವರ, ಜಿಪಂ ಸದಸ್ಯ ಹನಮಂತ ಕಾಖಂಡಕಿ, ಕಸ್ತೂರಿ ಲಿಂಗಣ್ಣವರ, ಮಗಿಯಪ್ಪ ದೇವನಾಳ, ಪಪಂ ಮುಖ್ಯಾಧಿಕಾರಿ ಐ.ಕೆ.ಗುಡದಾರಿ, ಸಮಾಜ ಕಲ್ಯಾಣಸಹಾಯಕ ನಿರ್ದೇಶಕ ಎಚ್‌.ಎಂ. ಪಾಟೀಲ, ಆರೋಗ್ಯಾಧಿಕಾರಿ ಡಾ| ದಯಾನಂದ ಕರೆನ್ನವರ, ಸಿಪಿಐ ಸಂಜಯ ಬಳೆಗಾರ, ಸಚಿವರವಿಶೇಷಾಧಿಕಾರಿ ಬಿ.ಪಿ. ಅಜೂರ, ಕ್ಷೇತ್ರಶಿಕ್ಷಣಾಧಿಕಾರಿ ಎ.ಜಿ.ಮಿರ್ಜಿ ಇದ್ದರು. ತಹಶೀಲ್ದಾರ್‌ ಶಂಕರ ಗೌಡಿ ಸ್ವಾಗತಿಸಿದರು. ವಿ.ಆರ್‌. ಹಿರೇನಿಂಗಪ್ಪನವರ ನಿರೂಪಿಸಿದರು. ತಾಪಂ ಸಿಇಒ ಎಂ.ಕೆ. ತೊದಲಬಾಗಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next