Advertisement
ಈ ಹಿಂದೆ ಸುಪ್ರೀಂಕೋರ್ಟ್ ನೀಡಿದ್ದ ತೀರ್ಪಿನಲ್ಲಿ ಮಸೀದಿ ಧ್ವಂಸ ತಪ್ಪು ಎಂದು ತಿಳಿಸಿತ್ತು. ಸಾಕ್ಷ್ಯದ ಆಧಾರದ ಮೇಲೆಯೇ ವಿಶೇಷ ಕೋರ್ಟ್ ತೀರ್ಪು ನೀಡಬೇಕು ಎಂದು ಹೇಳಿತ್ತು.
Related Articles
Advertisement
ಕೋರ್ಟ್ ಹಾಲ್ ನಲ್ಲಿ 18 ಮಂದಿ ಆರೋಪಿಗಳು ಹಾಜರಾಗಿದ್ದಾರೆ. ನಿನ್ನೆಯೇ ಕೋರ್ಟ್ ಹಾಲ್ ಗೆ ಬಂದು ಅಂತಿಮ ತೀರ್ಪು ಅನ್ನು ನ್ಯಾಯಾಧೀಶರು ಬರೆದಿರುವುದಾಗಿ ವರದಿ ವಿವರಿಸಿದೆ.
ಸುಮಾರು 28 ವರ್ಷಗಳ ಹಿಂದಿನ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ತೀರ್ಪಿನ ಬಗ್ಗೆ ಇಡೀ ದೇಶಾದ್ಯಂತ ಕುತೂಹಲದಿಂದ ಕಾಯುತ್ತಿದ್ದು, ಮುಂದೇನು ಎಂಬುದು ಕೋರ್ಟ್ ತೀರ್ಪಿನ ನಂತರ ತಿಳಿದು ಬರಲಿದೆ.
ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಕೆಲವು ಆರೋಪಿಗಳು ಹಾಜರಾಗಿದ್ದಾರೆ. ಕೋರ್ಟ್ ಗೆ ವಿನಯ್ ಕಟಿಯಾರ್, ಧರ್ಮದಾಸ್, ಲಲ್ಲೂ ಸಿಂಗ್, ಪವನ್ ಪಾಂಡೆ, ಸಾಕ್ಷಿ ಮಹಾರಾಜ್, ರಾಮಮಂದಿರ ಕಾರ್ಯದರ್ಶಿ ಚಂಪತ್ ರಾಯ್ ಆಗಮಿಸಿರುವುದಾಗಿ ವರದಿ ತಿಳಿಸಿದೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗುವುದಾಗಿ ಬಿಜೆಪಿ ಹಿರಿಯ ಮುಖಂಡ ಎಲ್.ಕೆ.ಆಡ್ವಾಣಿ ತಿಳಿಸಿರುವುದಾಗಿ ವರದಿ ಹೇಳಿದೆ.
ಪ್ರಕರಣದ ಪ್ರಮುಖ ಆರೋಪಿಗಳಾದ ಬಿಜೆಪಿ ಹಿರಿಯ ಮುಖಂಡ ಎಲ್ ಕೆ ಆಡ್ವಾಣಿ, ಮುರಳಿ ಮನೋಹರ ಜೋಶಿ, ಉಮಾ ಭಾರತಿ ಸೇರಿದಂತೆ ಹಲವರು ಕೋರ್ಟ್ ಗೆ ಗೈರು ಹಾಜರಾಗಿದ್ದಾರೆ. ಇದರಲ್ಲಿ ಕೋವಿಡ್ 19 ದೃಢಪಟ್ಟಿರುವ ಕಲ್ಯಾಣ್ ಸಿಂಗ್ ಮತ್ತು ಉಮಾ ಭಾರತಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಅಂತಿಮ ತೀರ್ಪು ಘೋಷಣೆ ಹಿನ್ನೆಲೆಯಲ್ಲಿ ಸಿಬಿಐ ವಿಶೇಷ ನ್ಯಾಯಾಲಯದ ಸುತ್ತ=ಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಕೋರ್ಟ್ ಗೆ 600 ದಾಖಲೆಗಳನ್ನು ಸಲ್ಲಿಸಿತ್ತು, 351 ಸಾಕ್ಷಿಗಳ ವಿಚಾರಣೆ ನಡೆಸಿತ್ತು. ಅಲ್ಲದೇ 48 ಮಂದಿ ವಿರುದ್ಧ ದೋಷಾರೋಪ ಹೊರಿಸಿದ್ದು, 28 ವರ್ಷಗಳ ವಿಚಾರಣೆಯ ಅವಧಿಯಲ್ಲಿ 16 ಆರೋಪಿಗಳು ಸಾವನ್ನಪ್ಪಿದ್ದಾರೆ. ಉಳಿದ 32 ಆರೋಪಿಗಳು ಕೋರ್ಟ್ ಗೆ ಹಾಜರಾಗುವಂತೆ ಆದೇಶ ನೀಡಿತ್ತು.