ಅಯೋಧ್ಯೆ: ಬಾಬ್ರಿ ಮಸೀದಿ ಕ್ರಿಯಾ ಸಮಿತಿಯ ಸಂಚಾಲಕ ಹಾಗೂ ರಾಮಜನ್ಮಭೂಮಿ ಅಯೋಧ್ಯೆ ಪ್ರಕರಣದಲ್ಲಿ ಮುಸ್ಲಿಮರ ಪರ ವಾದ ನಡೆಸಿದ್ದ ಹಿರಿಯ ನ್ಯಾಯವಾದಿ ಜಫರ್ಯಾಬ್ ಜಿಲಾನಿ (73) ಬುಧವಾರ ನಿಧನ ಹೊಂದಿ ದ್ದಾರೆ. ಅಖೀಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡ ಳಿಯ ಕಾರ್ಯದರ್ಶಿಯಾಗಿದ್ದ ಜಿಲಾನಿ ಅವರು ಉತ್ತರ ಪ್ರದೇಶದ ಲಕ್ನೋ ನಗರದಲ್ಲಿರುವ ನಿಶಾತ್‌ಗಂಜ್ ಆಸ್ಪತ್ರೆ ಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬದ ಮೂಲ ಗಳು ತಿಳಿಸಿವೆ. 2021ರಲ್ಲಿ ಬ್ರೇನ್ ಸ್ಟ್ರೋಕ್‌ಗೆ ಒಳಗಾಗಿದ್ದ ಅವರು, ಕಳೆದ ಎರಡು ವರ್ಷಗಳಿಂದ ಅನಾರೋಗ್ಯ ಪೀಡಿತರಾಗಿದ್ದರು. 1986ರ ಫೆಬ್ರವರಿಯಲ್ಲಿ ಫೈಜಲಾಬಾದ್ ಜಿಲ್ಲಾ ನ್ಯಾಯಾಲಯ ಬಾಬ್ರಿ ಮಸೀದಿಯ ಬಾಗಿಲುಗಳನ್ನು ತೆರೆಯುವಂತೆ ಆದೇಶ ನೀಡಿತು. ಮಸೀದಿಯ ಪರವಾಗಿ ಅಭಿಯಾನ ಆರಂಭಿಸಲು ಆ ಸಮಯದಲ್ಲಿ ಬಾಬ್ರಿ ಮಸೀದಿ ಕ್ರಿಯಾ ಸಮಿತಿ ರಚಿಸಲಾಗಿತ್ತು. ಅಲ್ಲದೇ ಜಿಲಾನಿ ಅವರನ್ನು ಅದರ ಸಂಚಾಲಕರನ್ನಾಗಿ ನೇಮಿಸಲಾಗಿತ್ತು.