Advertisement

ರೋಹಿತ್ ಶರ್ಮಾ ಜೊತೆಗೆ ಬರ್ತ್ ಡೇ ಆಚರಿಸಿದ ಪಾಕ್ ನಾಯಕ ಬಾಬರ್ ಅಜಂ

01:21 PM Oct 15, 2022 | Team Udayavani |

ಪರ್ತ್: ಐಸಿಸಿ ಟಿ20 ವಿಶ್ವಕಪ್ ಗಾಗಿ 16 ತಂಡಗಳು ಆಸ್ಟ್ರೇಲಿಯಾದಲ್ಲಿ ಸೇರಿವೆ. ಶುಕ್ರವಾರ ಎಲ್ಲಾ 16 ತಂಡಗಳ ನಾಯಕರು ಫೋಟೋ ಶೂಟ್ ಗಾಗಿ ಸೇರಿದ್ದು, ಇದೇ ವೇಳೆ ಪಾಕಿಸ್ಥಾನ ನಾಯಕ ಬಾಬರ್ ಅಜಂ ಬರ್ತ್ ಡೇ ಆಚರಣೆ ನಡೆದಿದ್ದು ವಿಶೇಷ.

Advertisement

ಎಲ್ಲಾ ನಾಯಕರು ಮಾಧ್ಯಮಗಳೊಂದಿಗೆ ಮಾತನಾಡಿದ ನಂತರ, ಸಂಯೋಜಕ ಮೆಲ್ ಜೋನ್ಸ್ ಅವರು ಇಂದು ಪಾಕಿಸ್ತಾನದ ನಾಯಕನ ಜನ್ಮದಿನ ಎಂದು ಘೋಷಿಸುತ್ತಿದ್ದಂತೆ ಬಾಬರ್‌ ಗಾಗಿ ಆಸ್ಟ್ರೇಲಿಯಾದ ಕ್ಯಾಪ್ಟನ್ ಆರನ್ ಫಿಂಚ್ ಕೇಕ್ ಹಿಡಿದುಕೊಂಡು ಬಂದರು.

ಭಾರತೀಯ ನಾಯಕ ರೋಹಿತ್ ಶರ್ಮಾ ಸೇರಿದಂತೆ ಎಲ್ಲಾ 15 ಮಂದಿ ನಾಯಕರ ಸಮ್ಮುಖದಲ್ಲಿ ಬಾಬರ್ ಅಜಂ ಕೇಕ್ ಕಟ್ ಮಾಡಿ ವಿಶೇಷವಾಗಿ ಹುಟ್ಟುಹಬ್ಬ ಆಚರಿಸಿಕೊಂಡರು.

ಇದನ್ನೂ ಓದಿ:ಶಾಲೆಯಲ್ಲಿ ಬಲವಂತವಾಗಿ ಬಟ್ಟೆ ಬಿಚ್ಚಿಸಿದ ಶಿಕ್ಷಕಿ: ವಿದ್ಯಾರ್ಥಿನಿಯಿಂದ ಆತ್ಮಹತ್ಯೆಗೆ ಯತ್ನ

ಮಾಧ್ಯಮದವರೊಂದಿಗೆ ಮಾತನಾಡಿದ ಬಾಬರ್ ಅಜಂ, ಭಾರತ ವಿರುದ್ಧದ ಹೈವೋಲ್ಟೇಜ್ ಪಂದ್ಯದ ತಯಾರಿಯ ಬಗ್ಗೆ ಹೇಳಿದರು. ಅನುಭವಿ ಫಾಖರ್ ಜಮಾನ್ ಮತ್ತು ವೇಗಿ ಶಹೀನ್ ಅಫ್ರಿದಿ ತಂಡಕ್ಕೆ ಸೇರಿದ್ದು ಬಲ ತಂದಿದ್ದು, ಭಾರತ ವಿರುದ್ಧದ ಪಂದ್ಯದ ಮೊದಲು ಎರಡು ಅಭ್ಯಾಸ ಪಂದ್ಯವಾಡಲಿದ್ದಾರೆ ಎಂದರು.

Advertisement

ರೋಹಿತ್ ಶರ್ಮಾ ಬಗ್ಗೆ ಮಾತನಾಡಿದ ಬಾಬರ್, ನಾನು ಅವರ ಅನುಭವಗಳಿಂದ ಕಲಿಯುತ್ತೇನೆ ಎಂದರು. ಇದೇ ವೇಳೆ ಮಾತನಾಡಿದ ರೋಹಿತ್, ಎರಡು ಕ್ರಿಕೆಟ್ ತಂಡಗಳ ನಡುವೆ ಉತ್ತಮ ಬಾಂಧವ್ಯವಿದೆ. ಆಟಗಾರರು ಒಂದೆಡೆ ಸೇರುವಾಗ ಕ್ರಿಕೆಟ್ ಬಗ್ಗೆ ಮಾತನಾಡುವುದಿಲ್ಲ, ಬದಲಾಗಿ ಪರಸ್ಪರರ ಕುಟುಂಬದ ಯೋಗಕ್ಷೇಮದ ಬಗ್ಗೆ, ಅವರು ಯಾವ ಕಾರನ್ನು ಖರೀದಿಸುತ್ತಿದ್ದಾರೆ ಅಥವಾ ಖರೀದಿಸಲು ಆಸಕ್ತಿ ಹೊಂದಿದ್ದಾರೆ ಎಂಬಂತಹ ಇತರ ವಿವರಗಳ ಬಗ್ಗೆ ಮಾತುಕತೆ ನಡೆಯುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next