Advertisement

ಪತಂಜಲಿ ಉತ್ಪನ್ನಗಳು ಇನ್ಮುಂದೆ ಫ್ಲಿಪ್ ಕಾರ್ಟ್, ಅಮೆಜಾನ್ ನಲ್ಲೂ ಲಭ್ಯ

02:59 PM Jan 16, 2018 | Sharanya Alva |

ನವದೆಹಲಿ: ಯೋಗ ಗುರು ಬಾಬಾ ರಾಮ್ ದೇವ್ ಅವರ ಪತಂಜಲಿ ಆಯುರ್ವೇದ ಉತ್ಪನ್ನಗಳು ಇನ್ಮುಂದೆ ಗ್ರಾಹಕರಿಗೆ ಇ ಕಾಮರ್ಸ್ ದಿಗ್ಗಜ ಕಂಪನಿಗಳಾದ ಫ್ಲಿಪ್ ಕಾರ್ಟ್, ಅಮೆಜಾನ್ ಹಾಗೂ ಪೇಟಿಎಂ ಮಾಲ್ ನಲ್ಲೂ ಲಭ್ಯವಾಗಲಿದೆ.

Advertisement

ಬಾಬಾ ರಾಮ್ ದೇವ್ ಒಡೆತನದ ಪತಂಜಲಿ ಆಯುರ್ವೇದ ಕಂಪನಿಯ ದೇಶೀಯ ಉತ್ಪನ್ನಗಳನ್ನು ಆನ್ ಲೈನ್ ನಲ್ಲಿಯೇ ಶಾಪಿಂಗ್ ಮಾಡಬಹುದಾಗಿದೆ ಎಂದು ಮಂಗಳವಾರ ಬಾಬಾ ರಾಮ್ ದೇವ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಬಾಬಾ ರಾಮ್ ದೇವ್ ಪತಂಜಲಿ ಉತ್ಪನ್ನಗಳು ಈವರೆಗೂ ಪತಂಜಲಿ ಅಂಗಡಿಗಳು, ಸಣ್ಣ ಮಳಿಗೆಗಳು, ಪತಂಜಲಿಆಯುರ್ವೇಧ ಡಾಟ್ ನೆಟ್ ನಲ್ಲಿ ಲಭ್ಯವಾಗುತ್ತಿತ್ತು, ಇನ್ಮುಂದೆ ಪತಂಜಲಿಯ ಎಲ್ಲಾ ಉತ್ಪನ್ನಗಳು ಆನ್ ಲೈನ್ ನಲ್ಲಿಯೂ ದೊರೆಯಲಿದೆ ಎಂದು ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next