Advertisement

ಲಕ್ಷಕ್ಕೂ ಅಧಿಕ ಜನರ ಯೋಗ:ಬಾಬಾ ರಾಮ್‌ ದೇವ್‌ ಗಿನ್ನಿಸ್‌ ರೆಕಾರ್ಡ್‌!

11:48 AM Jun 21, 2018 | Team Udayavani |

ಕೋಟಾ: 4 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯಂದು ರಾಜಸ್ಥಾನದಲ್ಲಿ  ಯೋಗ ಗುರು ಬಾಬಾ ರಾಮ್‌ ದೇವ್‌ ಅವರ ಮಾರ್ಗದರ್ಶನದಲ್ಲಿ ಒಂದು ಲಕ್ಷಕ್ಕೂ ಅಧಿಕ ಜನರು ಏಕಕಾಲಕ್ಕೆ ಯೋಗಾಸನಗಳನ್ನು ಪ್ರದರ್ಶಿಸಿದ್ದು,ಗಿನ್ನಿಸ್‌ ರೆಕಾರ್ಡ್‌ ಪುಟಕ್ಕೆ ಸೇರ್ಪಡೆಯಾಗಿದೆ. ಕಾರ್ಯಕ್ರಮದಲ್ಲಿ ರಾಜಸ್ಥಾನ ಮುಖ್ಯಮಂತ್ರಿ  ವಸುಂಧರಾ ರಾಜೆ ಅವರು ಭಾಗಿಯಾಗಿದ್ದರು. 

Advertisement

ಕಳೆದ ವರ್ಷ ಪತಂಜಲಿ ಯೋಗ ಪೀಠ ಹಲವು ದಾಖಲೆಗಳನ್ನ ನಿರ್ಮಾಣ ಮಾಡಿತ್ತು. 51 ಗಂಟೆಗಳ ಕಾಲ ಅತೀ ದೊಡ್ಡ ಯೋಗ ಮ್ಯಾರಥಾನ್‌,ಉದ್ದನೆಯ ಶಿರ್ಶಾಸನ ವನ್ನು ಮಾಡಿರುವುದು ದಾಖಲೆ ಪುಟದಲ್ಲಿ ಸೇರಿತ್ತು.

ಕೋಟಾದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ 1 ಲಕ್ಷ  5ಸಾವಿರ ಸಂಖ್ಯೆಯ ಉತ್ಸಾಹಿಗಳನ್ನು ಲೆಕ್ಕಹಾಕಲಾಗಿದ್ದು,ಇನ್ನೂ ಹೆಚ್ಚಿನ ಜನರು ಆಗಮಿಸಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಆಸನಗಳನ್ನು ಮಾಡುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next