Advertisement

ವಿಡಿಯೋ ವೈರಲ್: ಆನೆ ಮೇಲೆ ಯೋಗ: ದಿಢೀರ್ ಕೆಳಗೆ ಬಿದ್ದ ಬಾಬಾರಾಮ್ ದೇವ್

11:39 AM Oct 14, 2020 | Nagendra Trasi |

ಮಥುರಾ: ಆನೆ ಮೇಲೆ ಯೋಗ ಮಾಡಲು ಹೋದ ಯೋಗ ಗುರು ಬಾಬಾ ರಾಮ್‌ದೇವ್‌ ಅವರು ಕೆಳಗೆ ಬಿದ್ದಿರುವ ವಿಡಿಯೋ ವೈರಲ್‌ ಆಗಿದೆ. ಈ ಘಟನೆ ಸೋಮವಾರ ಮಥುರಾದ ಗುರುಶರಣ್‌ ಅವರ ರಾಮನಾರಥಿ ಆಶ್ರಮದ ಮುಂದೆ ನಡೆದಿದೆ.

Advertisement

ಒಟ್ಟು22 ಸೆಕೆಂಡ್‌ಗಳ ವಿಡಿಯೋ ಬಹಿರಂಗವಾಗಿದ್ದು, ಆನೆ ಮೇಲೆಯೇ ಯೋಗ ಮಾಡುತ್ತಿದ್ದ ರಾಮ್‌ದೇವ್‌ ಅವರು ಆಯತಪ್ಪಿ ಬಿದ್ದಿರುವ ದೃಶ್ಯ ಸೆರೆಯಾಗಿದೆ. ಯೋಗ ಮಾಡುವಾಗ ಸುಮ್ಮನೆ ನಿಂತಿದ್ದ ಆನೆ, ಬಳಿಕ ದಿಢೀರನೇ ಮುಂದಕ್ಕೆ ಸಾಗಿದೆ. ಈ ವೇಳೆ ಅವರುಕೆಳಗೆ ಬಿದ್ದಿದ್ದಾರೆ.

ಕೆಳಗೆ ಬಿದ್ದ ರಾಮದೇವ್ ಅವರು ಕೂಡಲೇ ಮೇಲಕ್ಕೆ ಎದ್ದು ನಗುತ್ತ ಮುಂದೆ ಸಾಗುತ್ತಿರುವ ದೃಶ್ಯ ವೀಡಿಯೋದಲ್ಲಿ ಸೆರೆಯಾಗಿದೆ. ಬಾಬಾ ರಾಮ್ ದೇವ್ ಅವರ ದೇಹದ ಭಾಗಕ್ಕೆ ಯಾವುದೇ ರೀತಿಯ ಹಾನಿಯಾಗಿಲ್ಲ ಎಂದು ವರದಿ ತಿಳಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next