Advertisement

ಸ್ವಾಮಿನಾಥನ್‌ ಆಯೋಗದ ವರದಿ ಜಾರಿಗೆ ಬಾಬಾಗೌಡ ಆಗ್ರಹ

01:14 PM Jul 19, 2017 | |

ವಿಜಯಪುರ: ಪ್ರಸಕ್ತ ಸಂದರ್ಭದಲ್ಲಿ ಭಾರತದ ಕೃಷಿ ಹಾಗೂ ರೈತರು ಅನುಭವಿಸುತ್ತಿರುವ ಸಂಕಷ್ಟಗಳ ಪರಿಹಾರಕ್ಕೆ ಸ್ವಾಮಿನಾಥನ್‌ ಆಯೋಗ ನೀಡಿರುವ ವರದಿ ಅನುಷ್ಠಾನಕ್ಕೆ ತರಬೇಕು ಎಂದು ಕೇಂದ್ರದ ಮಾಜಿ ಸಚಿವ, ಅಖಂಡ ಕರ್ನಾಟಕ ರಾಜ್ಯಾಧ್ಯಕ್ಷ 
ಬಾಬಾಗೌಡ ಪಾಟೀಲ ಆಗ್ರಹಿಸಿದರು.

Advertisement

ವಿಜಯಪುರದಲ್ಲಿ ತಮ್ಮ ಸಂಘಟನೆ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ರೈತ ಚಿಂತನಾ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರೈತರು ಬೆಳೆದ ಬೆಳೆಗೆ ಯೋಗ್ಯ ವೈಜ್ಞಾನಿಕ ಬೆಲೆ ದೊರೆಯದೇ ರೈತರು ಅನಗತ್ಯವಾಗಿ ನಷ್ಟ ಅನುಭವಿಸುತ್ತಿದ್ದಾರೆ. ಈ
ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಇರುವ ಏಕೈಕ ಮಾರ್ಗ ಸ್ವಾಮಿನಾಥನ್‌ ಆಯೋಗದ ಕೃಷಿ ನೀತಿ ಜಾರಿಗೆ ತರಬೇಕು ಎಂದರು.

ಮಾನವೀಯತೆಯಿಂದ ದುಡಿದು ದೇಶಕ್ಕೆ ಅನ್ನ ಹಾಕುವುದು ರೈತನ ಸಂಸ್ಕೃತಿ. ಆದರೆ ಪ್ರಸಕ್ತ ಸಂದರ್ಭದಲ್ಲಿ ರೈತನ ಹೊಟ್ಟೆ ಬರಿದಾಗಿ, ಬೆನ್ನುಮೂಳೆಯೇ ಮುರಿದಿದೆ. ಇಂಥ ಸಂಸರ್ಭದಲ್ಲಿ ರೈತನಿಗೆ ಆತ್ಮಬಲದ ಅವಶ್ಯಕತೆ ಇದೆ. ಮತ್ತೂಂದೆಡೆ ಬೆಳೆಗಳಲ್ಲಿ ಪೌಷ್ಟಿಕಾಂಶ ಕಡಿಮೆಯಾಗಿ ಅಪೌಷ್ಟಿಕತೆಯಿಂದ ಜನ ಬಳಲುತ್ತಿದ್ದಾರೆ. ಈ ಗಂಭೀರ ಸಂಗತಿಯನ್ನೂ ರೈತರು ಪರಿಗಣಿಸಿ ಕೃಷಿ 
ಮಾಡಬೇಕಿದೆ ಎಂದರು.

ಎಲ್ಲ ರೀತಿಯ ಬೆಳೆ ಬೆಳೆಯುವ ಭಾರತ ದೇಶ ವಿಶ್ವದ ಸ್ವರ್ಗವಾಗಿದೆ ಎಂದು ಮ್ಯಾಕ್ಸ್‌ ಮುಲ್ಲರ್‌ ಹೇಳಿದ್ದರೂ, ಭಾರತದಲ್ಲಿ ರೈತರಿಗೆ ನೆಮ್ಮದಿಯ ಬದುಕು ಇಲ್ಲವಾಗಿದೆ. ಲಂಚಕೋರ ಆಡಳಿತಾರೂಢ ರೈತರ ಜೀವನವನ್ನೇ ಬಲಿ ಪಡೆಯುತ್ತಿದೆ. ಸರಕಾರಗಳು ಬಹು ರಾಷ್ಟ್ರೀಯ ಕಂಪನಿಗಳ ಹೈಬ್ರಿಡ್‌ ಬೀಜ ಮಾರಾಟವೇ ಇದಕ್ಕೆಲ್ಲ ಪ್ರಮುಖ ಕಾರಣವಾಗಿದ್ದು, ಕೂಡಲೇ ಬಹುರಾಷ್ಟ್ರೀಯ ಕಂಪನಿಗಳ ಬೀಜ ಮಾರಾಟ ನಿಲ್ಲಿಸಬೇಕು. ಕಳೆದ ಹತ್ತು ವರ್ಷದಲ್ಲಿ ಇಡಿ ಕೃಷಿಗೆ ನೀಡಿದ ಅನುದಾನ 2.5 ಲಕ್ಷ ಕೋಟಿ ರೂ. ನೀಡಿದ್ದರೆ, ಉದ್ಯಮಿಗಳಿಗೆ ನೀಡಿದ ತೆರಿಗೆ ವಿನಾಯ್ತಿಯೇ 45 ಲಕ್ಷ ಕೋಟಿ ರೂ. ಆಗಿದೆ. ಇದು ನಮ್ಮ ಸರ್ಕಾರಗಳ ಆದ್ಯತೆ ಹೇಗಿದೆ 
ಎಂಬುವುದಕ್ಕೆ ನಿದರ್ಶನ ಎಂದರು.

ರೈತರ ಜಮೀನುಗಳಿಗೆ ಹೋಗುವ ದಾರಿ ಸಮಸ್ಯೆ ಸಲುವಾಗಿ ವಿಜಯಪುರ ಜಿಲ್ಲೆಯ ಅನಿರ್ದಿಷ್ಟ ಧರಣಿ ಹಮ್ಮಿಕೊಳ್ಳಲಾಗಿತ್ತು. ಆಗ ಧರಣಿ ಸ್ಥಳಕ್ಕೆ ಬಂದಿದ್ದ ಜಿಲ್ಲಾ ಉಸ್ತುವಾರಿ ಸಚಿವ ಡಾ| ಎಂ.ಬಿ. ಪಾಟೀಲ ಜಮೀನಿನ ದಾರಿ ಸಮಸ್ಯೆ ಕುರಿತು ಅಧಿವೇಶನದಲ್ಲಿ 
ಚರ್ಚಿಸುವುದಾಗಿ ಭರವಸೆ ನೀಡಿದ್ದರು. ನಗರಕ್ಕೆ ಆಗಮಿಸಿದ್ದ ಸಿಎಂ ಸಿದ್ದರಾಮಯ್ಯ ಅವರು ಕೂಡ ಕಾನೂನು ತಜ್ಞರೊಂ ದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರೂ ಅಧಿವೇಶನದಲ್ಲಿ ಚರ್ಚೆ ಆಗಲೇ ಇಲ್ಲ ಎಂದು ಟೀಕಿಸಿದರು.

Advertisement

ಮಾಜಿ ಶಾಸಕ ಎನ್‌.ಎಸ್‌. ಖೇಡ, ನಿರ್ಮಲಾಕಾಂತ ಪಾಟೀಲ, ಸಂಘಟನೆ ಜಿಲ್ಲಾಧ್ಯಕ್ಷ ಸಿದ್ರಾಮಪ್ಪ ರಂಜಣಗಿ ಮಾತನಾಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಪ್ರಾಸ್ತಾವಿಕ ಮಾತನಾಡಿದರು. ಶ್ರೀಮಂತ ಕಾಪ್ಸೆ, ನಗರ ಘಟಕ ಅಧ್ಯಕ್ಷ ಬಿ.ಆರ್‌. ಪವಾರ, ಗೌಡಪ್ಪಗೌಡ ಮೈಗೂರ, ಬಾಪುಗೌಡ ಬಿರಾದಾರ, ಪಾಂಡು ಹ್ಯಾಟಿ, ಡಾ| ಎಂ.ರಾಮಚಂದ್ರ ಬಮ್ಮನಜೋಗಿ, ಈರಣಗೌಡ ಪಾಟೀಲ, ಶ್ರೀಶೈಲ ಪಾಟೀಲ, ಮಲ್ಲಿಕಾರ್ಜುನ ಶಹಾಪೇಟಿ, ಸುನೀಲ ಭೋಸ್ಲೆ, ಗಜಾನನ ಚವ್ಹಾಣ, ಶಂಕ್ರಪ್ಪ ಶಹಾಪೇಟಿ, ಶಂಕರ ಕನಸೆ, ಬಾಬು ಜಗತಾಪ, ಜಯಶ್ರೀ ಜಂಗಮಶೆಟ್ಟಿ, ಕಮಲಾಬಾಯಿ ಕೋಟ್ಯಾಳ ಇದ್ದರು. ರವೀಂದ್ರ ಕರ್ಪೂರಮಠ ಸ್ವಾಗತಿಸಿದರು. ಈರಣ್ಣ ಸಜ್ಜನ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next