Advertisement

‘ಬಾಂಧವ್ಯ ಸ್ನೇಹಿತರು’ಕಟ್ಟಿದ ‘ನೆರಳು’ ಮನೆ ಫಲಾನುಭವಿ ಕುಟುಂಬಕ್ಕೆ ಹಸ್ತಾಂತರ

09:59 AM Jan 20, 2020 | Hari Prasad |

ಉಡುಪಿ: ಬಾಂಧವ್ಯ ಬ್ಲಡ್ ಕರ್ನಾಟಕ, ಕೋಟ ಜೆಸಿಐ ಹಾಗೂ ಬೈಕಾಡಿಯ ಸಾಂಸ್ಕೃತಿಕ ಹಾಗೂ ಸೇವಾ ಸಂಘಟನೆ ‘ಮಂದಾರ’ ಜಂಟಿಯಾಗಿ ನವೀಕರಣಗೊಳಿಸಿ ನಿರ್ಮಿಸಿದ್ದ ‘ನೆರಳು’ ಮನೆಯನ್ನು ಇಂದು ಫಲಾನುಭವಿಗಳಾದ ಗೀತಾ ಶ್ರಿಯಾನ್ ಕುಟುಂಬಕ್ಕೆ ಹಸ್ತಾಂತರಿಸುವ ಕಾರ್ಯಕ್ರಮ ಇಂದು ನಡೆಯಿತು.

Advertisement

ಸಂತ ಆಂತೋಣಿ ಚರ್ಚ್ ನ ಧರ್ಮಗುರುಗಳಾಗಿರುವ ರೆವರೆಂಡ್ ಫಾದರ್ ಜಾನ್ ವಾಲ್ಟರ್ ಮೆಂಡೊನ್ಸಾ ಹಾಗೂ ಪಾಂಡೇಶ್ವರದ ರಕ್ತೇಶ್ವರಿ ದೇವಸ್ಥಾನದ ಧರ್ಮದರ್ಶಿ ಕೆ.ವಿ. ರಮೇಶ್ ರಾವ್ ಅವರು ಜೊತೆಯಾಗಿ ನೂತನ ಮನೆಯ ಬಾಗಿಲನ್ನು ತೆರಯುವ ಮೂಲಕ ಈ ಗೃಹ ಹಸ್ತಾಂತರ ಕಾರ್ಯಕ್ರಮವನ್ನು ಸಂಪನ್ನಗೊಳಿಸಿದರು.

ಈ ಸಂದರ್ಭದಲ್ಲಿ ಯೋಜನೆಗೆ ಸಹಕರಿಸಿದ ಸ್ವಯಂ ಸೇವಕರನ್ನು ಗೌರವಿಸಲಾಯಿತು. ಬಾಂಧವ್ಯ ಬ್ಲಡ್ ಕರ್ನಾಟಕ, ಮಂದಾರ ಸಂಘಟನೆಯ ಪದಾಧಿಕಾರಿಗಳು ಮತ್ತು ಜೆಸಿಐ ಸಂಘಟನೆಯ ಸದಸ್ಯರ ಸಹಿತ ವಿವಿಧ ಗಣ್ಯರು ಈ ಸಮಾರಂಭಕ್ಕೆ ಸಾಕ್ಷಿಯಾಗಿದ್ದರು.



ಇಲ್ಲಿನ ಮೂಡಹಡು ಪಾಂಡೇಶ್ವರ ಸಾಸ್ತಾನದ ಗೀತಾ ಶ್ರೀಯಾನ್ ಅವರ ಮನೆ ಶಿಥಿಲಾವಸ್ಥೆಯಲ್ಲಿದ್ದು ವಾಸಯೋಗ್ಯ ಸ್ಥಿತಿಯಲ್ಲಿ ಇರಲಿಲ್ಲ. ಇದರ ಕುರಿತಾಗಿ ಮಾಹಿತಿ ಪಡೆದ ಬಾಂಧವ್ಯ ಬ್ಲಡ್ ಕರ್ನಾಟಕದ ದಿನೇಶ್ ಬಾಂಧವ್ಯ ಮತ್ತು ಇತರರು ಮನೆ ನವೀಕರಣದ ಅಂದಾಜು ವೆಚ್ಚ ಸಿದ್ಧಗೊಳಿಸಿ ಸ್ವಯಂಸೇವಕರ ಸಹಾಯದಿಂದ ಕಾಮಗಾರಿ ಪ್ರಾರಂಭಿಸಿದ್ದರು. ಇವರಿಗೆ ಕೋಟ ಜೆಸಿಐ ಘಟಕದ ಸದಸ್ಯರು ಹಾಗೂ ಬೈಕಾಡಿಯ ಮಂದಾರ ಸಾಂಸ್ಕೃತಿಕ ಸಂಘನೆಯ ಸಮಾನಮನಸ್ಕ ಗೆಳೆಯರು ಸಹಕಾರ ನೀಡಿದ್ದರು. ಸಾಮಾಜಿಕ ಜಾಲತಾಣದ ಮೂಲಕ ದಾನಿಗಳಿಂದ ಸಂಗ್ರಹಿಸಿದ ಹಣದಲ್ಲಿ ಈ ಕಾಮಗಾರಿಯನ್ನು ನಡೆಸಲಾಗಿದೆ.



Advertisement

Udayavani is now on Telegram. Click here to join our channel and stay updated with the latest news.

Next