Advertisement

ಮುಂದಿನ ಬಾರಿ ಕುಷ್ಟಗಿಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲುವುದು ಖಚಿತ ಬಿ.ವೈ.ವಿಜಯೇಂದ್ರ

07:19 PM Jul 25, 2022 | Team Udayavani |

ಕುಷ್ಟಗಿ: ಕುಷ್ಟಗಿ ಕ್ಷೇತ್ರದಲ್ಲಿ 2023 ರ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಯಾರೇ ಸ್ಪರ್ಧಿಸಿದರೂ ಗೆಲ್ಲುವುದು ಬಿಜೆಪಿ ಅಭ್ಯರ್ಥಿಯೇ ಎಂದು ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.

Advertisement

ಕುಷ್ಟಗಿ ಮಾರ್ಗವಾಗಿ ಇಲಕಲ್ ಗೆ ಹೊರಟಿದ್ದ ವೇಳೆ ಸುದ್ದಿಗಾರರೊಂದಿಗೆ‌ ಮಾತನಾಡಿದ ಅವರು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಾದಾಮಿ ಕ್ಷೇತ್ರದ ಫಲಿತಾಂಶ ಬಿಜೆಪಿಗೆ ಏನೋ ಹೆಚ್ಚು ಕಡಿಮೆಯಾಗಿದೆ. ಕುಷ್ಟಗಿ ಕ್ಷೇತ್ರದಲ್ಲಿ ಹಿನ್ನೆಡೆಯಾಗಿದೆ. ಆದರೆ 2023 ರ ಚುನಾವಣೆಯಲ್ಲಿ ಜಯಬೇರಿ ಸಾಧಿಸಲಿದ್ದು, ಬಿಜೆಪಿ‌ ಮತ್ತೊಮ್ಮೆ ಆಡಳಿತ ನಡೆಸುವುದು ಖಚಿತವಾಗಿದೆ ಎಂದರು.

ಜು.‌23 ರಂದು ಕುಷ್ಟಗಿಯಲ್ಲಿ ಯಡಿಯೂರಪ್ಪ ಅವರ ಬಗ್ಗೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರ ಹೇಳಿಕೆಗೆ ಪ್ರತಿಕ್ರಿಸಿದ ಅವರು, ಸಿಎಂ‌ ಇಬ್ರಾಹಿಂ ಅವರು ಕಾಂಗ್ರೆಸ್ ನಿಂದ ಜೆಡಿಎಸ್, ಜೆಡಿಎಸ್ ನಿಂದ ಕಾಂಗ್ರೆಸ್ ನಲ್ಲಿರುವ ಅವರು ಯಾವ ಪಕ್ಷದಲ್ಲಿದ್ದಾರೆ ಅನ್ನೋದು ಅವರಿಗೆ ಗೊತ್ತಿಲ್ಲ. ಚುನಾವಣೆ ಇನ್ನೂ ಏಳೆಂಟು ತಿಂಗಳ ಇದ್ದು ಅಷ್ಟೋತ್ತಿಗೆ ಯಾವ ಪಕ್ಷದಲ್ಲಿರುತ್ತಾರೋ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.

ಯಡಿಯೂರಪ್ಪ ಅವರ ಶಕ್ತಿ ಏನೇಂಬುದು ರಾಜ್ಯದ ಜನತೆಗೆ ಗೊತ್ತಿರುವ ವಿಚಾರ ಆದರೆ  ಸಿಎಂ ಇಬ್ರಾಹಿಂರಿಂದ ಯಡಿಯೂರಪ್ಪ ಅವರಾಗಲಿ, ನಾನಾಗಲಿ, ಬಿಜೆಪಿಯಾಗಲಿ ಕಲಿಯಬೇಕಿಲ್ಲ‌ ಎಂದು ಟಾಂಗ್ ನೀಡಿದರು.

ಸಿಎಂ ಇಬ್ರಾಹಿಂ ಉಢಾಫೆ ರಾಜಕಾರಣಿ:

Advertisement

ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಪ್ರಭುದ್ದ ರಾಜಕಾರಣಿ ಅಂದುಕೊಂಡಿದ್ದೆ. ಆದರೆ ಅವರ ಅಸಂಬದ್ದ ಹೇಳಿಕೆಯಿಂದ ಉಢಾಫೆ ರಾಜಕಾರಣಿ ಎಂದು ಮಾಜಿ ಶಾಸಕ, ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡನಗೌಡ ಪಾಟೀಲ‌ ತಿರುಗೇಟು ನೀಡಿದರು.

ನನ್ನ ರಾಜಕೀಯ ಜೀವನದಲ್ಲಿ ಸಿ.ಎಂ.ಇಬ್ರಾಹಿಂ ಅವರನ್ನು ಭೇಟಿ ಮಾಡಿಲ್ಲ. ರಾಜ್ಯಾಧ್ಯಕ್ಷರಾಗಿ ಈ ರೀತಿಯಾಗಿ ಬಾಲಿಶ ಹೇಳಿಕೆ ನನಗೂ ಅಶ್ಚರಿಯಾಗಿದೆ. ನಾನು ಬಿಜೆಪಿಯಲ್ಲಿ ಪಕ್ಷವಹಿಸಿರುವ ಜವಾಬ್ದಾರಿಯನ್ನು ನಿರ್ವಹಿಸುತ್ತಾ ಚನ್ನಾಗಿರುವೆ. ಬಿಜೆಪಿ ಬಿಡುವ ಪ್ರಶ್ನೆಯೇ ಇಲ್ಲ. ಇಲ್ಲಿ ( ಬಿಜೆಪಿ) ಚನ್ನಾಗಿರುವೆ..ಅಲ್ಲಿಗೆ (ಜೆಡಿಎಸ್) ಹೋಗಿ ಏನ್ ಮಾಡಲಿ ಎಂದರು.

ಬಿಜೆಪಿ ಚುನಾವಣೆಗಾಗಿ ಸಂಘಟನೆ ಎಂದೂ ಮಾಡಿಲ್ಲ. ಬಿಜೆಪಿ‌‌ ಮೂಲತಃ ಸಂಘಟನೆ ಆಧಾರಿತ ಪಕ್ಷವಾಗಿದೆ. ಬಿಜೆಪಿಗೆ ಕಾರ್ಯಕರ್ತರ ಪಡೆ ಇದ್ದು ಬಿಜೆಪಿಗೆ ಕಾರ್ಯಕರ್ತರೇ ಆತ್ಮಶಕ್ತಿ ಎಂದರು.‌

ಕುರಿ‌‌ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಶರಣು ತಳ್ಳೀಕೇರಿ, ಅಮರೇಶ ಕರಡಿ, ನವೀನ್ ಗುಳಗಣ್ಣನವರ್, ಪುರಸಭೆ ಅಧ್ಯಕ್ಷ ಗಂಗಾಧರಸ್ವಾಮಿ ಹಿರೇಮಠ, ಪ್ರಭುಶಂಕರಗೌಡ ಪಾಟೀಲ, ಕಲ್ಲೇಶ ತಾಳದ್ ಮತ್ತೀತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next