Advertisement
ಕುಷ್ಟಗಿ ಮಾರ್ಗವಾಗಿ ಇಲಕಲ್ ಗೆ ಹೊರಟಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಾದಾಮಿ ಕ್ಷೇತ್ರದ ಫಲಿತಾಂಶ ಬಿಜೆಪಿಗೆ ಏನೋ ಹೆಚ್ಚು ಕಡಿಮೆಯಾಗಿದೆ. ಕುಷ್ಟಗಿ ಕ್ಷೇತ್ರದಲ್ಲಿ ಹಿನ್ನೆಡೆಯಾಗಿದೆ. ಆದರೆ 2023 ರ ಚುನಾವಣೆಯಲ್ಲಿ ಜಯಬೇರಿ ಸಾಧಿಸಲಿದ್ದು, ಬಿಜೆಪಿ ಮತ್ತೊಮ್ಮೆ ಆಡಳಿತ ನಡೆಸುವುದು ಖಚಿತವಾಗಿದೆ ಎಂದರು.
Related Articles
Advertisement
ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಪ್ರಭುದ್ದ ರಾಜಕಾರಣಿ ಅಂದುಕೊಂಡಿದ್ದೆ. ಆದರೆ ಅವರ ಅಸಂಬದ್ದ ಹೇಳಿಕೆಯಿಂದ ಉಢಾಫೆ ರಾಜಕಾರಣಿ ಎಂದು ಮಾಜಿ ಶಾಸಕ, ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡನಗೌಡ ಪಾಟೀಲ ತಿರುಗೇಟು ನೀಡಿದರು.
ನನ್ನ ರಾಜಕೀಯ ಜೀವನದಲ್ಲಿ ಸಿ.ಎಂ.ಇಬ್ರಾಹಿಂ ಅವರನ್ನು ಭೇಟಿ ಮಾಡಿಲ್ಲ. ರಾಜ್ಯಾಧ್ಯಕ್ಷರಾಗಿ ಈ ರೀತಿಯಾಗಿ ಬಾಲಿಶ ಹೇಳಿಕೆ ನನಗೂ ಅಶ್ಚರಿಯಾಗಿದೆ. ನಾನು ಬಿಜೆಪಿಯಲ್ಲಿ ಪಕ್ಷವಹಿಸಿರುವ ಜವಾಬ್ದಾರಿಯನ್ನು ನಿರ್ವಹಿಸುತ್ತಾ ಚನ್ನಾಗಿರುವೆ. ಬಿಜೆಪಿ ಬಿಡುವ ಪ್ರಶ್ನೆಯೇ ಇಲ್ಲ. ಇಲ್ಲಿ ( ಬಿಜೆಪಿ) ಚನ್ನಾಗಿರುವೆ..ಅಲ್ಲಿಗೆ (ಜೆಡಿಎಸ್) ಹೋಗಿ ಏನ್ ಮಾಡಲಿ ಎಂದರು.
ಬಿಜೆಪಿ ಚುನಾವಣೆಗಾಗಿ ಸಂಘಟನೆ ಎಂದೂ ಮಾಡಿಲ್ಲ. ಬಿಜೆಪಿ ಮೂಲತಃ ಸಂಘಟನೆ ಆಧಾರಿತ ಪಕ್ಷವಾಗಿದೆ. ಬಿಜೆಪಿಗೆ ಕಾರ್ಯಕರ್ತರ ಪಡೆ ಇದ್ದು ಬಿಜೆಪಿಗೆ ಕಾರ್ಯಕರ್ತರೇ ಆತ್ಮಶಕ್ತಿ ಎಂದರು.
ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಶರಣು ತಳ್ಳೀಕೇರಿ, ಅಮರೇಶ ಕರಡಿ, ನವೀನ್ ಗುಳಗಣ್ಣನವರ್, ಪುರಸಭೆ ಅಧ್ಯಕ್ಷ ಗಂಗಾಧರಸ್ವಾಮಿ ಹಿರೇಮಠ, ಪ್ರಭುಶಂಕರಗೌಡ ಪಾಟೀಲ, ಕಲ್ಲೇಶ ತಾಳದ್ ಮತ್ತೀತರಿದ್ದರು.