Advertisement

Shimoga; ರಾಷ್ಟ್ರಕವಿ ಕುವೆಂಪು ನೀಡಿದ್ದ ಸ್ಲೋಗನ್ ತಿರುಚುವ ಕೆಲಸವಾಗಿದೆ: ಬಿ.ವೈ.ರಾಘವೇಂದ್ರ

01:16 PM Feb 19, 2024 | keerthan |

ಶಿವಮೊಗ್ಗ: ರಾಷ್ಟ್ರ ಕವಿ ಕುವೆಂಪು ಅವರು ಕೊಟ್ಟಿದ್ದ ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ ಸ್ಲೋಗನ್ ತಿರುಚುವ ಕೆಲಸವಾಗಿದೆ. ಸಣ್ಣತನದ ಪರಮಾವಧಿ ಇದು ಒಳ್ಳೆಯದಲ್ಲ. ಅಲ್ಲದೆ ಒಬ್ಬ ಸರಕಾರಿ ನೌಕರ ಸಾವರ್ಕರ್ ಕುರಿತು ನಾಟಕ ಮಾಡಲು ಹೋಗಿದ್ದಕ್ಕೆ ವರ್ಗಾವಣೆ ಆಗಿದೆ. ಶಿಕಾರಿಪುರದಿಂದ ಶೃಂಗೇರಿಗೆ ವರ್ಗಾವಣೆ ಮಾಡಿದ್ದಾರೆ ಎಂದು ಶಿವಮೊಗ್ಗದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರದಲ್ಲಿ ಮೋದಿ ಸರಕಾರ ರಾಷ್ಟ್ರದ ಅಭಿವೃದ್ಧಿಗೆ ಸಾಕಷ್ಟು ಆದ್ಯತೆ ಕೊಟ್ಟಿದೆ. ರಾಷ್ಟ್ರೀಯ ಹೆದ್ದಾರಿಗೆ ಹೆಚ್ಚಿನ ಒತ್ತು ನೀಡಿದೆ. ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಕೊಟ್ಟಿದ್ದಾರೆ ಎಂದರು.

ಇದೇ ಫೆ.22 ರ ಗುರುವಾರ ಮಧ್ಯಾಹ್ನ ಕೇಂದ್ರದ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಶಿವಮೊಗ್ಗಕ್ಕೆ ಆಗಮಿಸುತ್ತಿದ್ದಾರೆ. ಶಿವಮೊಗ್ಗದಲ್ಲಿ 18 ಕಾಮಗಾರಿಗಳ ಲೋಕಾರ್ಪಣೆ, ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಭಾರತ ಸ್ವಾತಂತ್ರ್ಯ ನಂತರ 91287 ಕಿ.ಮೀ. ರಾಷ್ಟ್ರೀಯ ಹೆದ್ದಾರಿಯಾಗಿದೆ. 54858 ಕಿ.ಮೀ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಈ 10 ವರ್ಷದಲ್ಲಿಯಾಗಿದೆ. ಮೋದಿ ಸರಕಾರ ಅಧಿಕಾರಕ್ಕೆ ಬಂದ ನಂತರ ಹೆದ್ದಾರಿ ಅಭಿವೃದ್ಧಿ ಸಾಕಷ್ಟಾಗಿದೆ. ಶಿವಮೊಗ್ಗ, ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ ಸೇರಿದಂತೆ ಒಟ್ಟು 6 ಜಿಲ್ಲೆಯ ಕಾಮಗಾರಿ ಉದ್ಘಾಟನೆಯಾಗಲಿದೆ. 6168 ಕೋಟಿ ಮೊತ್ತದ ಹೆದ್ದಾರಿ ಕಾಮಗಾರಿ ಲೋಕಾರ್ಪಣೆ, ಶಂಕುಸ್ಥಾಪನೆ ಆಗಲಿದೆ ಎಂದು ರಾಘವೇಂದ್ರ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next