Advertisement
ಪಟ್ಟಣದಲ್ಲಿ ಪತ್ರಿಕೆಯೊಂದಿಗೆ ಮಾತನಾಡಿ 13 ಜಿಲ್ಲೆಗಳ ಪಂಚಾಯ್ತಿ ಅಭಿವೃದ್ದಿ ಅಧಿಕಾರಿಗಳು ತಾವು ಮಾಡದ ತಪ್ಪಿನಿಂದ್ದಾಗಿ ಸರ್ಕಾರವು ಕರ್ನಾಟಕ ಆಡಳಿತ ನ್ಯಾಯ ಮಂಡಲಿಯ ಮಧ್ಯ ಪ್ರವೇಶದಿಂದ್ದಾಗಿ ವಿವಿಧ ದಿನಾಂಕಗಳಂದು ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸಿದ ಪರಿಣಾಮವಾಗಿ ಸೇವೆಗೆ ಸೇರದ ದಿನಾಂಕವನ್ನು ಪರಿಗಣಿಸಿ ಪಂಚಾಯ್ತಿ ಅಭಿವೃದ್ದಿ ಅಧಿಕಾರಿಗಳ ಜ್ಯೇಷ್ಠತಾ ಪಟ್ಟಿಯನ್ನು ಆರ್‌ಡಿಪಿಆರ್ ಇಲಾಖೆ ಪ್ರಕಟಿಸಿರುವರಿಂದ 13 ಜಿಲ್ಲೆಗಳ ಪಿಡಿಓ, ಕೆಳ ಹಂತದ ಗ್ರೇಡ್ 1 ಕಾರ್ಯದರ್ಶಿ, ಗ್ರೇಡ್ -2 ಕಾರ್ಯದರ್ಶಿ, ಬಿಲ್ ಕಲೆಕ್ಟರ್‌ಗಳಿಗೆ ಮುಂದಿನ 20 ವರ್ಷದ ಅವದಿಯಲ್ಲಿ ಮುಂಬಡ್ತಿ ಇಲ್ಲದಂತ್ತಾಗುತ್ತದೆ, ಪಿಡಿಓ ಹುದ್ದೆಗಳನ್ನು ಹೊಸದಾಗಿ ಸೃಜನೆ ಮಾಡಿ 2009 ರಲ್ಲಿ ಹುದ್ದೆಗಳ ಭರ್ತಿಗೆ ಅರ್ಜಿ ಅಹ್ವಾನಿಸಲಾಗಿತ್ತು ಪರೀಕ್ಷೆ ಎಲ್ಲರೂ ಒಂದೇ ಬಾರಿ ಬರೆದಿದ್ದರು, ತಾತ್ಕಾಲಿಕ ಆಯ್ಕೆ ಪಟ್ಟಿಯೂ ಒಂದೇ ಭಾರಿ ಬಿಡುಗಡೆ ಮಾಡಲಾಗಿತ್ತು, ಅಂತಿಮ ಆಯ್ಕೆ ಪಟ್ಟಿಯು ಬಿಡುಗಡೆ ಆಗುವ ಸಂದರ್ಭದಲ್ಲಿ ಕೆಲವು ಆಯ್ಕೆಯಾಗದಂತೆ ಅಭ್ಯರ್ಥಿಗಳು ನ್ಯಾಯಾಲಯದ ಮೊರೆ ಹೊದ ಪರಿಣಾಮವಾಗಿ ಕರ್ನಾಟಕ ಆಡಳಿತ ನ್ಯಾಯ ಮಂಡಲಿಯು ಮೊದಲು ಎಲ್ಲ ಜಿಲ್ಲೆಗಳ ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸಲು ತಡೆಯಾಜ್ಞೆ ನೀಡಲಾಗಿತ್ತು ನ್ಯಾಯಾಲಯವು 30 ಜಿಲ್ಲೆಗಳ ಪೈಕಿ 17 ಜಿಲ್ಲೆಗಳಿಗೆ ಮೊದಲ ಹಂತದಲ್ಲಿ ತಡೆಯಾಜ್ಞೆಯನ್ನು ತೆರವುಗೊಳಿಸಿ ನಂತರ ಇನ್ನೂ 13 ಜಿಲ್ಲೆಗಳ ತಡೆಯಾಜ್ಞೆಯನ್ನು ವಿವಿಧ ದಿನಾಂಕದಂದು ತೆರವುಗೊಳಿಸಿತ್ತು, ಜ್ಯೇಷ್ಠತಾ ಪಟ್ಟಿಯ ನಿಯಮಗಳ ಬಗ್ಗೆ ಸರ್ಕಾರಕ್ಕೆ ಸ್ಪಷ್ಟ ನಿಲುವು ಇದ್ದರೂ ಕೂಡ ಕರ್ನಾಟಕ ಆಡಳಿತ ನ್ಯಾಯ ಮಂಡಲಿಯು ತಡೆಯುವ ಹೆಜ್ಜೆಯನ್ನು ತೆರವುಗೊಳಿಸಿದಂತೆ ಆಯಾ ಜಿಲ್ಲೆಗಳ ಅಂತಿಮ ಆಯ್ಕೆ ಪಟ್ಟಿಯನ್ನು ಸರ್ಕಾರವು ಬಿಡುಗಡೆಗೊಳಿಸಿದ್ದು, ಸರ್ಕಾರದ ತಪ್ಪಗಿರುತ್ತದೆ, ಸರ್ಕಾರವು ಆ ಹಂತದಲ್ಲೇ ನ್ಯಾಯಾಲಯದಲ್ಲಿ ಬಾಕಿ ಇದ್ದ ಎಲ್ಲಾ ಪ್ರಕರಣಗಳು ತಿರುವಳಿ ಆಗುವವರೆಗೂ ಅಥವಾ ತಿರುಗುಗೊಳಿಸುವ ವರೆಗೂ ಕಾಯ್ದೆಯು 30 ಜಿಲ್ಲೆಗಳ ಎಲ್ಲಾ ಪಂಚಾಯ್ತಿಗಳ ಎಲ್ಲಾ ಪಂಚಾಯ್ತಿ ಅಭಿವೃದ್ದಿ ಅಧಿಕಾರಿಗಳ ಅಂತಿಮ ಆಯ್ಕೆ ಪಟ್ಟಿಯನ್ನು ಒಂದೇ ಸಾರಿ ಬಿಡುಗಡೆಗೊಳಿಸಿದರೇ ಈ ಸಮಸ್ಯೆ ಉದ್ಬವವಾಗುತ್ತಿರಲಿಲ್ಲ, ಆದರೆ ಸರ್ಕಾರವು ಈ ನಿಯಮವನ್ನು ಪಾಲಿಸಿರುವುದಿಲ್ಲ, ಇದರಿಂದ ನ್ಯಾಯಾಲಯದ ಪ್ರಕರಣಗಳಿಂದ ನೇಮಕಾತಿ ಪ್ರಕ್ರಿಯೆ ತಡವಾದರಿಂದ ಹಲವು ಜಿಲ್ಲೆಗಳ ಪಿಡಿಓಗಳು ಬಡ್ತಿಯ ಅವಕಾಶ ಇಲ್ಲದೆ ಜೀವನ ಪರಿಯಂತ ತೊಂದರೆ ಅನುಭವಿಸುವ ವಾತಾವರಣ ನಿರ್ಮಾಣವಾಗಿದೆ ಹಾಗಾಗಿ 2009 ರ ಅಧಿ ಸೂಚನೆಯಲ್ಲಿ ನೇಮಕಗೊಂಡ ಪಿಡಿಓಗಳಿಗೆ ಒಂದೇ ದಿನ ಸೇವೆ ಪರಿಗಣಿಸಿ ಜ್ಯೇಷ್ಠತಾ ಪಟ್ಟಿ ಪ್ರಕಟಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
Advertisement
PDOಗಳಿಗೆ ಒಂದೇ ದಿನ ಸೇವೆ ಪರಿಗಣಿಸಿ ಜ್ಯೇಷ್ಠತಾ ಪಟ್ಟಿ ಪ್ರಕಟಿಸಲು ಬಿ.ಸುರೇಶ್ ಆಗ್ರಹ
11:23 PM Jun 19, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.