Advertisement
ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಗಿದೆ. 2020ರಲ್ಲಿ ಟಿ.ಜೆ. ಅಬ್ರಹಾಂ ಅವರು ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಅನ್ವಯ ಯಡಿಯೂರಪ್ಪ ವಿರುದ್ಧ ತನಿಖೆಗೆ ಅನುಮತಿ ನೀಡುವಂತೆ ಸಲ್ಲಿಸಿದ್ದ ಮನವಿಯನ್ನು ರಾಜ್ಯಪಾಲರು ತಿರಸ್ಕರಿಸಿದ್ದರು. ಆದರೆ ಪ್ರಕರಣದಲ್ಲಿ ಸಹ ಆರೋಪಿಯಾಗಿದ್ದ ಅಂದಿನ ಬಿಡಿಎ ಆಯುಕ್ತ ಜಿ.ಸಿ. ಪ್ರಕಾಶ್ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ 17 (ಎ) ಅನ್ವಯ ತನಿಖೆಗೆ ಅನುಮತಿ ನೀಡಲಾಗಿದೆ. ಈ ಪ್ರಕರಣದ ವಿಚಾರಣೆ ಶುಕ್ರವಾರ ವಿಚಾರಣೆಗೆ ಲಿಸ್ಟ್ ಆಗಿದೆ. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರನ್ನೂ ತನಿಖೆಗೆ ಒಳಪಡಿಸಲು 17 (ಎ) ಅನ್ವಯ ಪೂರ್ವಾನುಮತಿ ನೀಡಬೇಕೆಂದು ಕೋರಲು ಸಚಿವ ಸಂಪುಟ ನಿರ್ಣಯಿಸಿದೆ.
ಬಿಡಿಎ ವ್ಯಾಪ್ತಿಯ ಬಿದರಹಳ್ಳಿ ಹೋಬಳಿ, ಕೊಡಸಪುರದಲ್ಲಿ 1 ಹಾಗೂ 3 ಮಹಡಿ ವಸತಿ ಸಮುತ್ಛಯವನ್ನು 567 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ನಿರ್ಧಾರ
Related Articles
Advertisement
ಅಂದಿನ ಸಿಎಂ ಯಡಿಯೂರಪ್ಪ ನೇಮಕ ಮಾಡಿದ ಬಿಡಿಎ ಆಯುಕ್ತ ಜಿ.ಸಿ. ಪ್ರಕಾಶ್ ರಾಮಲಿಂಗಂ ಕಂಪೆನಿಯಿಂದ 12 ಕೋಟಿ ರೂ. ಲಂಚ ಕೇಳಿದ ಆರೋಪ
ಯಡಿಯೂರಪ್ಪ ಅವರ ಪುತ್ರ ಬಿ.ವೈ. ವಿಜಯೇಂದ್ರ 2ನೇ ಆರೋಪಿ, ಅಳಿಯ ವಿರೂಪಾಕ್ಷಪ್ಪ ಯಮಕನಮರಡಿ, ಮೊಮ್ಮಗ ಶಶಿಧರ್ ಹೆಸರು ದೂರಿನಲ್ಲಿ ಉಲ್ಲೇಖ
ತೀರ್ಮಾನಕ್ಕೆ ಕಾರಣ?ರಾಜ್ಯಪಾಲರು ಈ ಪ್ರಕರಣದಲ್ಲಿ ತಮ್ಮ ವಿವೇಚನೆ ಬಳಸದೆ ಪ್ರಸ್ತಾವವನ್ನು ತಿರಸ್ಕರಿಸಿದ್ದಾರೆ. 19-11-2020ರಲ್ಲಿ ದಾಖಲಾದ ದೂರಿನ ಆಧಾರದ ಮೇಲೆ 24-6-2021ರಂದು ರಾಜ್ಯಪಾಲರು ತನಿಖೆ ನಿರಾಕರಿಸಿರುವುದರ ಹಿಂದೆ ಅಂದಿನ ಸಿಎಂರನ್ನು ರಕ್ಷಿಸುವ ರಾಜಕೀಯ ಉದ್ದೇಶವಿರಬಹುದು. ರಾಜ್ಯಪಾಲರ ಪೂರ್ವಾನುಮತಿ ಇಲ್ಲದಿರುವುದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಈ ಪ್ರಕರಣದ ವಿಚಾರಣೆ ನಡೆಸುವುದಕ್ಕೆ ಅಡ್ಡಿಯಾಗಿದೆ. ಬಿಎಸ್ವೈ, ವಿಜಯೇಂದ್ರ ಹಾಗೂ ಕುಟುಂಬ ಸದಸ್ಯರು ಭಾಗಿಯಾಗಿರುವ ಆಡಿಯೋ ದಾಖಲೆಗಳಿದ್ದು, ವಿವೇಚನೆ ಇಲ್ಲದೆ ನಿರಾಕರಣೆ ಮಾಡಲಾಗಿದೆ; ಹೀಗಾಗಿ ಮರುಪರಿಶೀಲನೆ ಸೂಕ್ತ ಎಂದು ಪರಿಗಣನೆ. ಅಧಿಕಾರಿಗಳು ಮತ್ತಿತರ ಆರೋಪಿಗಳ ವಿರುದ್ಧ ತನಿಖೆ ನಡೆಯುತ್ತಿರುವಾಗ ಬಿಎಸ್ವೈ ಅವರನ್ನು ಮಾತ್ರ ರಕ್ಷಿಸುವುದು ಅರ್ಥಹೀನ.