ಹುಬ್ಬಳ್ಳಿ: ನಾನು ಕೆಜೆಪಿ ಕಟ್ಟಿ ದೊಡ್ಡ ಅಪರಾಧ ಮಾಡಿದ್ದೆ. ಈ ಬಗ್ಗೆ ರಾಜ್ಯದ ಜನತೆ ಹತ್ತಿರ ಕ್ಷಮೆ ಸಹ ಕೇಳಿದ್ದೆ. ಆದರೆ ಶೆಟ್ಟರ ತರಹ ಕಾಂಗ್ರೆಸ್ ಸೇರಿರಲಿಲ್ಲ ಎಂದು ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಸದಸ್ಯ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಕುಟುಕಿದರು.
Advertisement
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಗದೀಶ ಶೆಟ್ಟರ ಸೋಲಿಸುವಲ್ಲಿ ನಾವು ಯಶಸ್ವಿಯಾಗುತ್ತೇವೆ. ವಿಶ್ವಾಸದ್ರೋಹ ಮಾಡಿದವರನ್ನು ಯಾವುದೇ ಕಾರಣಕ್ಕೂ ಕ್ಷಮಿಸುವುದಿಲ್ಲ. ಅವರು ನಮ್ಮ ಪಕ್ಷಕ್ಕೆ ದ್ರೋಹ ಮಾಡಿದ್ದಾರೆ. ಶೆಟ್ಟರ ವಾಪಸ್ಸು ಬಿಜೆಪಿಗೆ ಬರುವ ಪ್ರಶ್ನೆಯೆ ಉದ್ಭವಿಸಲ್ಲ ಎಂದರು.