Advertisement
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯದ ಕೋವಿಡ್ ನಿರ್ವಹಣೆಯ ಕುರಿತಂತೆ ಮಾಹಿತಿ ನೀಡಿದರು.
Related Articles
Advertisement
ರಾಜ್ಯದಲ್ಲಿ ಆಕ್ಸಿಜನ್ ಪೂರೈಕೆಗಾಗಿ ಕಾರ್ಯತಂತ್ರ ಮಾಡಿದ್ದೇವೆ. ಕೇಂದ್ರ ಸರ್ಕಾರವು ರಾಜ್ಯಕ್ಕೆ ಆಮ್ಲಜನಕ ಪೂರೈಕೆಯನ್ನು 965 ಮೆಟ್ರಿಕ್ ಟನ್ ನಿಂದ 1018 ಮೆಟ್ರಿಕ್ ಟನ್ ಗೆ ಹೆಚ್ಚಿಸಿದೆ. ರಾಜ್ಯದಲ್ಲಿಯೇ 750 ಮೆ. ಟನ್. ದೊರೆಯತ್ತಿದೆ. ವಿಶಾಖಪಟ್ಟಣದಿಂದ 30 ಮೆ.ಟನ್ ದೊರೆಯತ್ತಿದೆ. ಇತರ ರಾಜ್ಯಗಳಿಂದ ದೊರೆಯುವ ಆಮ್ಲಜನಕ ಪಡೆಯಲಾಗಿದೆ. ಬಹರೇನ್ ನಿಂದ 40, ಕುವೈತ್‌ನಿಂದ 100, ಜಮ್ಶೆಡ್ ಪುರದಿಂದ ಟ್ರೇನ್ ಮೂಲಕ 120 ಮೆ.ಟನ್ ಆಮ್ಲಜನಕ ತರಲಾಗಿದೆ. ರಾಜ್ಯದಲ್ಲಿಯೂ ಆಮ್ಲಜನಕ ಉತ್ಪಾದನಾ ಸಾಮರ್ಥ್ಯ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಿಎಂ ಹೇಳಿದರು.
ಸಂಚಾರಿ ಆಕ್ಸಿಲೇಟರ್ ಸೂಕ್ತವಾಗಿ ನೆರವಾಗುತ್ತಿವೆ. 10 ಸಾವಿರದವರೆಗೆ ಆಕ್ಸಿಜನ್ ಸಿಲಿಂಡರ್ ಪಡೆಯಲು ತೀರ್ಮಾನಿಸಲಾಗಿದೆ. 730 ಸಿಲಿಂಡರ್ ಕಳೆದ 10 ದಿನದಲ್ಲಿ ಪಡೆಯಲಾಗಿದೆ. 380 ಕೇಂದ್ರ ಸರ್ಕಾರ ಉಳಿದವರು ವಿದೇಶಗಳಿಂದ ಪಡೆಯಲಾಗಿದೆ. 3000 ಆಕ್ಸಿಜನ್ ಕಾನ್ಸಂಟ್ರೇಟರ್‌ಗಳನ್ನು ಈಗಾಗಲೇ ಹಂಚಿಕೆ ಮಾಡಲಾಗಿದೆ. ಇನ್ನೂ 7 ಸಾವಿರ ಕಾನ್ಸಂಟ್ರೇಟರ್ ಹಂಚಿಕೆ ಮಾಡಲಾಗುವುದು ಎಂದರು.
ಎರಡನೇ ಡೋಸ್ ಗೆ ಆದ್ಯತೆ: ರಾಜ್ಯದಿಂದ ಮೂರು ಕೋಟಿ ಲಸಿಕೆಗೆ ಆದೇಶ ನೀಡಲಾಗಿದೆ. ಎರಡು ಕೋಟಿ ಕೋವಿಶೀಲ್ಡ್ ಮತ್ತು ಒಂದು ಕೋಟಿ ಕೋವ್ಯಾಕ್ಸಿನ್ ಖರೀದಿಗೆ ಆದೇಶ ನೀಡಲಾಗಿದೆ. ಎರಡನೇ ಡೋಸ್ ಪಡೆಯುವವರಿಗೆ ಮೊದಲ ಆದ್ಯತೆ ನೀಡಲಾಗಿದೆ. ಹಾಗಾಗಿ 18ರಿಂದ 44 ವರ್ಷದವರಿಗೆ ಲಸಿಕೆ ನೀಡುವುದನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ಸಿಎಂ ಯಡಿಯೂರಪ್ಪ ಹೇಳಿದರು.