Advertisement

ಕೇಂದ್ರದಿಂದ ಪರಿಹಾರ ತರಲಾಗದ ಯಡಿಯೂರಪ್ಪ ದುರ್ಬಲ ಸಿಎಂ: ಎಚ್.ಡಿ. ಕುಮಾರಸ್ವಾಮಿ ಆರೋಪ

09:47 AM Jan 03, 2020 | Hari Prasad |

ಬೆಂಗಳೂರು: ಕೇಂದ್ರದಿಂದ ಬರ ಪರಿಹಾರ , ಅನುದಾನ ದಿಟ್ಟತನದಿಂದ ಕೇಳುವ ಶಕ್ತಿ ಇಲ್ಲದ ಯಡಿಯೂರಪ್ಪ ಅವರು ದುರ್ಬಲ ಮುಖ್ಯಮಂತ್ರಿ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

Advertisement

ಈ ಕುರಿತು ಟ್ವೀಟ್‌ ಮಾಡಿರುವ ಅವರು, ‘ಪ್ರಮಾಣ ವಚನ ಸ್ವೀಕರಿಸಿದ ಮರುದಿನ ರಾಜ್ಯದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿದೆ ಎಂದಿದ್ದರು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಆದರೀಗ ಪರಿಸ್ಥಿತಿ ವಿಷಮವಾಗಿದೆ.

ರಾಜ್ಯದ ಕೇಂದ್ರದಿಂದ ಬರಬೇಕಾದ ಬರ ಪರಿಹಾರ, ಅನುದಾನ, ತೆರಿಗೆ ಹಂಚಿಕೆಗಳನ್ನು ದಿಟ್ಟತನದಿಂದ ಕೇಳುವ ಶಕ್ತಿ ಯಡಿಯೂರಪ್ಪ ಅವರಗಿಲ್ಲ. ನ್ಯಾಯವಾಗಿ ಬರಬೇಕಾದ್ದನ್ನೂ ಪಡೆಯಲಾಗದ ಯಡಿಯೂರಪ್ಪ ಆವರು ದುರ್ಬಲ ಮುಖ್ಯಮಂತ್ರಿ.

ರಾಜ್ಯದಿಂದ 25 ಸಂಸದರನ್ನು ಪಡೆದಿರುವ ನರೇಂದ್ರ ಮೋದಿಯವರು ಕೇಂದ್ರದ ಚಂದಮಾಮನನ್ನು ತೋರಿಸುತ್ತಿದ್ದಾರೆ. ‘ಅನರ್ಹ ಸರ್ಕಾರ’ ರಚಿಸಿಕೊಂಡ ಬಿ.ಎಸ್‌.ಯಡಿಯುರಪ್ಪ ಅವರು ಶಿವಕುಮಾರ ಸ್ವಾಮೀಜಿಗಳು ಐಕ್ಯರಾಗಿರುವ ತುಮಕೂರಿನ ನೆಲದಲ್ಲಿ ನಿಂತು ಇವೆಲ್ಲಕ್ಕೂ ಉತ್ತರ ಕೊಡುವರೇ? ಎಂದು ಪ್ರಶ್ನಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next