ಬೆಂಗಳೂರು: ದೇಶದಲ್ಲಿ ಮೇ.1ರಿಂದ 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ ನೀಡಲಾಗುವುದು ಎಂದು ಸರ್ಕಾರ ಘೋಷಿಸಿತ್ತು. ಆದರೆ ಇದೀಗ ಲಸಿಕೆ ಕೊರತೆಯಿಂದ ಮೇ.1ರಿಂದ ಲಸಿಕೆ ನೀಡಲು ಸಾಧ್ಯವಿಲ್ಲ ಎಂದು ರಾಜ್ಯ ಸರ್ಕಾರ ಹೇಳಿದೆ. ಆದರೆ ಈ ಬಗ್ಗೆ ಮಾಧ್ಯಮದವರು ಸಿಎಂ ಯಡಿಯೂರಪ್ಪ ಬಳಿ ಪ್ರಶ್ನಿಸಿದರೆ, ಸಿಎಂ ಗರಂ ಆಗಿದ್ದಾರೆ.
ಲಸಿಕೆ ವಿಳಂಬ ವಿಚಾರವಾಗು ಪ್ರಶ್ನೆ ಕೇಳುತ್ತಲೇ ಮಾಧ್ಯಮಗಳ ವಿರುದ್ಧ ಸಿಎಂ ಕೆಂಡಮಂಡಲವಾದರು. ಎಲ್ಲವೂ ಸರಿಹೋಗುತ್ತದೆ, ಆದರೆ ಅನವಶ್ಯಕವಾಗಿ ನೀವು ಮೋದಿ ಹೆಸರು ತರಬೇಡಿ ಎಂದ ಯಡಿಯೂರಪ್ಪ ಹೇಳಿದರು.
ಲಸಿಕೆಗಳು ನಮಗೆ ಪೂರೈಕೆಯಾಗಿಲ್ಲ. ಲಸಿಕೆಗಳು ಪೂರೈಕೆಯಾದ ಕೂಡಲೇ ಲಸಿಕೆ ಹಾಕುತ್ತೇವೆ. ಲಸಿಕೆಗಳ ಪೂರೈಕೆ ವಿಳಂಬವಾಗುತ್ತಿದೆ. ಸಮಯದಲ್ಲಿ ಸಿಗುತ್ತದೆ ಎಂದುಕೊಂಡಿದ್ದೆವು ಆದರೆ ಲಸಿಕೆ ಸಿಗುವುದು ವಿಳಂಬವಾಗಿದೆ. ಇದರಲ್ಲಿ ವೈಫಲ್ಯದ ಪ್ರಶ್ನೆ ಬರುವುದಿಲ್ಲ. ಪ್ರಧಾನಿಯವರನ್ನು ಇದರಲ್ಲಿ ಮಧ್ಯೆ ತರಬೇಡಿ. ಕೇಂದ್ರ ಸರ್ಕಾರ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ. ಕೆಲವೇ ದಿನಗಳಲ್ಲಿ ಎಲ್ಲವೂ ಸರಿ ಹೋಗುವ ಭರವಸೆಯಿದೆ ಎಂದರು.
ಇದನ್ನೂ ಓದಿ:ಬಿಜೆಪಿ ಸರ್ಕಾರದ ವಿರುದ್ಧ ಪ್ರಜ್ಞಾವಂತ ಮತದಾರರು ಎದ್ದು ನಿಂತಿದ್ದಾರೆ: ಸಲೀಂ ಅಹಮದ್
ಇಡೀ ದೇಶ ಕೋವಿಡ್ ಎದುರಿಸುತ್ತಿದೆ. ಈ ಸಂದರ್ಭದಲ್ಲಿ ತಂತ್ರಜ್ಞಾನ ಮೂಲಕ ತುರ್ತಾಗಿ ಕೋವಿಡ್ ಔಷಧಿ ತಲುಪಿಸಲು ಡ್ರೋಣ್ ಗಳು ಕಾರ್ಯಾಚರಣೆಗೆ ಇಳಿದಿವೆ. ಸುಮಾರು 45 ಕೆಜಿ ಸಾಮಾಗ್ರಿ ತುಂಬಿ ಹಾರುವ ಡ್ರೋಣ್ ಗಳು ನಮ್ಮ ರಾಜ್ಯದಲ್ಲೂ ಸೇವೆ ಕೊಡುತ್ತಿವೆ. ಗರುಡ ಸಂಸ್ಥೆಯವರು ಈ ಡ್ರೋಣ್ ಸೇವೆ ಉಚಿತವಾಗಿ ಕೊಡುತ್ತಿದಾರೆ. ಸ್ಯಾನಿಟೈಸಿಂಗ್ ಅನ್ನೂ ಡ್ರೋಣ್ ಮೂಲಕ ಮಾಡಬಹುದು ಎಂದು ಸಿಎಂ ಹೇಳಿದರು.