Advertisement

ತುಳು ರಾಜ್ಯ ಭಾಷೆಯಾಗಲು ಪರಿಶೀಲಿಸಿ ಕ್ರಮ: ಸಿಎಂ ಯಡಿಯೂರಪ್ಪ

12:27 PM Jan 05, 2021 | Team Udayavani |

ಹಳೆಯಂಗಡಿ: ತುಳು ರಾಜ್ಯ ಭಾಷೆಯಾಗಲು ಸೂಕ್ತವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಎಲ್ಲರ ಅಭಿಪ್ರಾಯ ಸಂಗ್ರಹಿಸಿ, ಅಕಾಡೆಮಿಯ ಮನವಿಯನ್ನು ಅಭ್ಯಸಿಸಿ ಸೂಕ್ತ ನಿರ್ಧಾರವನ್ನು ಪ್ರಕಟಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

Advertisement

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಜಿ. ಕತ್ತಲ್‌ಸಾರ್ ಅವರು ಮಂಗಳವಾರ ಬೆಳಿಗ್ಗೆ ಮುಖ್ಯಮಂತ್ರಿಯವರನ್ನು ಭೇಟಿಯಾಗಿ ತುಳು ಭಾಷೆಯನ್ನು ರಾಜ್ಯ ಭಾಷೆಯನ್ನಾಗಿಸುವ ಮನವಿ ಸಲ್ಲಿಸಿದರು.

ಗಡಿ ಅಭಿವೃದ್ಧಿ ಪ್ರಾಧಿಕಾರದಿಂದ 3.6 ಕೋ.ರೂ. ಬಿಡುಗಡೆಯಾಗಿರುವ ಬಗ್ಗೆಯೂ ಪರಿಶೀಲನೆ ನಡೆಸಲಾಗುವುದು ಎಂದು ಸಿಎಂ ತಿಳಿಸಿದರು.

ಇದನ್ನೂ ಓದಿ:ಕೊಚ್ಚಿ- ಮಂಗಳೂರು ನ್ಯಾಚುರಲ್ ಗ್ಯಾಸ್ ಪೈಪ್ ಲೈನ್ ಗೆ ಪ್ರಧಾನಿಯಿಂದ ಚಾಲನೆ

ಈ ಬಗ್ಗೆ “ಉದಯವಾಣಿ”ಯೊಂದಿಗೆ ದಯನಂದ ಜಿ. ಕತ್ತಲ್‌ಸಾರ್ ಮಾತನಾಡಿ, ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರನ್ನು ಭೇಟಿ ಮಾಡಿ, ತುಳುನಾಡಿನ ಸಮಸ್ತ ಜನರ ಬೇಡಿಕೆಯನ್ನು ಮನದಟ್ಟು ಮಾಡಲಾಗಿದೆ. ಆಶಾದಾಯಕ ಪ್ರತಿಕ್ರಿಯೆ ಸಿಕ್ಕಿದ್ದು, ನಮ್ಮ ಮನವಿಯನ್ನು ಸರಕಾರವು ಪುರಸ್ಕರಿಸಿದ್ದು ಭೇಟಿ ಫಲಪ್ರದವಾಗಿದೆ. ಅಲ್ಲದೇ ತುಳು ಭವನಕ್ಕೆ ಬಿಡುಗಡೆಯಾಗಿರುವ 3.6 ಕೋ.ರೂ.ಗೆ ಆಡಳಿತಾತ್ಮಕ ಅನುಮೋದನೆ ಶೀಘ್ರವಾಗಿ ನೀಡಲಾಗುವುದು ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next