Advertisement
2012ರ ಅಕ್ಟೋಬರ್‌ನಲ್ಲಿ ಅಂಧೇರಿಯಲ್ಲಿ ದ್ವಿಚಕ್ರವಾಹನದಿಂದ ಬಂದ ಇಬ್ಬರು ದುಷ್ಕರ್ಮಿಗಳು ಶೆಟ್ಟಿ ಅವರ ಮೇಲೆ ನಾಲ್ಕು ಸುತ್ತಿನ ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದರು. ಈ ದಾಳಿಯಲ್ಲಿ ಶೆಟ್ಟಿ ಅವರ ಭುಜದ ಮೇಲೆ ಗಾಯಗಳಾಗಿದ್ದರೂ ಅವರು ಆಗ ಹತ್ತಿರದ ಪೊಲೀಸ್ ಠಾಣೆಗೆ ಕಾಲಿಡಲು ಯಶಸ್ವಿಯಾಗಿದ್ದರು. ಅನಂತರ ಅವರನ್ನು ಅಲ್ಲಿಂದ ಆಸ್ಪತ್ರೆಗೆ ಕರೆದೊಯ್ಯಲಾಯಿತು. 2014ರ ಜನವರಿಯಲ್ಲಿ ಮುಂಬಯಿ ಪೊಲೀಸರು ಈ ಪ್ರಕರಣದಲ್ಲಿ 1,332 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿದ್ದರು. ಅದರಲ್ಲಿ ಛೋಟಾ ರಾಜನ್ ಶೆಟ್ಟಿ ಅವರ ಮೇಲೆ ಗುಂಡು ಹಾರಿಸಲು ಆದೇಶಿಸಿರುವುದು ದೃಢಪಟ್ಟಿದೆ. ರಾಜನ್ ಸಹಚರ ಸತೀಶ್ ತಂಕಪ್ಪನ್ ಅಲಿಯಾಸ್ ಕಾಲಿಯಾ ಶೂಟಿಂಗ್‌ಗೆ ಸೂಚನೆಗಳನ್ನು ನೀಡಿದ್ದ ಎಂದು ಚಾರ್ಜ್ ಶೀಟ್ ಹೇಳಿದೆ.
Advertisement
ಬಿ. ಆರ್. ಶೆಟ್ಟಿ ಕೊಲೆ ಯತ್ನ ಪ್ರಕರಣದಲ್ಲಿ ಛೋಟಾ ರಾಜನ್‌ಗೆ 8 ವರ್ಷ ಜೈಲು ಶಿಕ್ಷೆ
09:10 AM Aug 22, 2019 | sudhir |
Advertisement
Udayavani is now on Telegram. Click here to join our channel and stay updated with the latest news.