ಹೈದರಾಬಾದ್: ನಾಲ್ವರು ಟಿಆರ್‌ಎಸ್ ಶಾಸಕರ ಖರೀದಿ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರಿಗೆ ವಿಶೇಷ ತನಿಖಾ ತಂಡ(ಎಸ್‌ಐಟಿ) ನೀಡಿರುವ ನೋಟಿಸ್‌ಗೆ ನೀಡಿದ್ದ ತಡೆಯನ್ನು ಡಿ.13ರವರೆಗೆ ತೆಲಂಗಾಣ ಹೈಕೋರ್ಟ್ ವಿಸ್ತರಿಸಿದೆ.
ಈ ಹಿಂದೆ ನ.25ರಂದು ನ್ಯಾ. ಕೆ.ಸುರೇಂದ್ರ ಅವರಿದ್ದ ನ್ಯಾಯಪೀಠ, ನೋಟಿಸ್‌ಗೆ ಡಿ.5ರವರೆಗೆ ತಡೆ ನೀಡಿತ್ತು. ಈಗ ಪುನಃ ಡಿ.13ರವರೆಗೆ ತಡೆಯನ್ನು ವಿಸ್ತರಿಸಿದೆ.
ನ.21ರಂದು ವಿಚಾರಣೆಗೆ ಹಾಜರಾಗುವಂತೆ ಬಿ.ಎಲ್.ಸಂತೋಷ್ ಅವರಿಗೆ ಎಸ್‌ಐಟಿ ನೋಟಿಸ್ ನೀಡಿತ್ತು. ಆದರೆ ಅಂದು ಅವರು ವಿಚಾರಣೆಗೆ ಹಾಜರಾಗಿರಲಿಲ್ಲ. ನಂತರ ನ.26 ಅಥವಾ 28ರಂದು ವಿಚಾರಣೆಗೆ ಹಾಜರಾಗುವಂತೆ ಪುನಃ ಎಸ್‌ಐಟಿ ನೋಟಿಸ್ ಜಾರಿಗೊಳಿಸಿತ್ತು.
ಈವರೆಗಿನ ತನಿಖೆಯ ಆಧಾರದ ಮೇಲೆ ಎಸ್‌ಐಟಿ, ಹೈದರಾಬಾದ್‌ನ ವಿಶೇಷ ಎಸಿಬಿ ನ್ಯಾಯಾಲಯಕ್ಕೆ ಮೆಮೊ ಸಲ್ಲಿಸಿದ್ದು, ಪ್ರಕರಣದಲ್ಲಿ ಸಂತೋಷ್, ಜಗ್ಗು ಸ್ವಾಮಿ, ತುಷಾರ್ ವೆಲ್ಲಪಲ್ಲಿ ಹಾಗೂ ನ್ಯಾಯವಾದಿ ಬಿ.ಶ್ರೀನಿವಾಸ್ ಅವರನ್ನು ಆರೋಪಿಗಳೆಂದು ಹೆಸರಿಸಿದೆ.
ಇದನ್ನೂ ಓದಿ: ರಾವಲ್ಪಿಂಡಿ ಟೆಸ್ಟ್ : ಪಾಕ್ ವಿರುದ್ಧ ಇಂಗ್ಲೆಂಡ್‌ಗೆ 74 ರನ್ ಗೆಲುವು