ಈ ನಾಯಕರಲ್ಲಿ ಬಹುತೇಕರು ಬಿಜೆಪಿಯಲ್ಲಿದ್ದರೆ, ಹಲವರು ಜೆಡಿಎಸ್‌ನಲ್ಲಿದ್ದರು. ಅವರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ಬರಮಾಡಿಕೊಂಡರು.
Advertisement
ಈ ಸಂದರ್ಭ ಡಿ.ಕೆ.ಶಿವಕುಮಾರ್ ಮಾತನಾಡಿ, ಪ್ರಭಾವಿ ನಾಯಕ ಹಾಗೂ ರಾಜ್ಯಾದ್ಯಂತ ಅಭಿಮಾನಿ ಬಳಗವನ್ನು ಹೊಂದಿರುವ ಮಾಜಿ ಸಚಿವ ಬಿ. ಸೋಮಶೇಖರ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಅವರ ಆಗಮನದಿಂದ ಪಕ್ಷಕ್ಕೆ ಬಲ ಬಂದಿದೆ. ಅವರು ಬರೀ ಮಳವಳ್ಳಿಗೆ ನಾಯಕರಲ್ಲ; ಅವರಿಗೆ ರಾಜ್ಯದ ಉದ್ದಗಲದಲ್ಲೂ ಅಭಿಮಾನಿಗಳಿರುವುದರಿಂದ ಪಕ್ಷಕ್ಕೆ ನೆರವಾಗಲಿದೆ. ವಕ್ಫ್ ಮಂಡಳಿ ಅಧ್ಯಕ್ಷರಾಗಿದ್ದ ಆಸಿಫ್ ಸೇs… ಕೂಡ ನಮ್ಮ ಪಕ್ಷವನ್ನು ಸೇರಿದ್ದಾರೆ. ಅವರ ಜತೆಗೆ ಅನೇಕ ಅಲ್ಪಸಂಖ್ಯಾಕ ನಾಯಕರು ಮತ್ತು ಬೆಂಬಲಿಗರು ನಮ್ಮ ಕಡೆಗೆ ಬಂದಿದ್ದಾರೆ. ಇದು ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಅಲೆಗೆ ಸಾಕ್ಷಿಯಾಗಿದೆ ಎಂದು ಹೇಳಿದರು.
ಇದೇ ವೇಳೆ ಮಾತನಾಡಿದ ಇಂದೂಧರ ಹೊನ್ನಾಪುರ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಿಜೆಪಿ ಆಡಳಿತದಲ್ಲಿ ಕೈಗೊಂಡ ಗೋಹತ್ಯೆ ನಿಷೇಧ, ಮತಾಂತರ ನಿಷೇಧ, ರೈತ ವಿರೋಧಿ ಕಾನೂನು ಸಹಿತ ಕೆಲವು ಸಂವಿಧಾನ ವಿರೋಧಿ ಕಾಯ್ದೆ-ಕಾನೂನುಗಳನ್ನು ಹಿಂಪಡೆಯಬೇಕು ಎಂಬ ಷರತ್ತಿನೊಂದಿಗೆ ರಾಜ್ಯದ ಎಲ್ಲ 224 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಬೆಂಬಲ ಘೋಷಿಸಿದೆ ಎಂದು ತಿಳಿಸಿದರು.