Advertisement
ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿದ್ದ ಸಭೆಯಲ್ಲಿ ಸಿದ್ದರಾಮಯ್ಯಗೆ ಬಾದಾಮಿ ಮತಕ್ಷೇತ್ರ ಬಿಟ್ಟುಕೊಟ್ಟಿದ್ದ ಮಾಜಿ ಸಚಿವ ಚಿಮ್ಮನಕಟ್ಟಿ ಅವರು ಮಾತನಾಡಿ,ಸಿದ್ದರಾಮಯ್ಯ ವರುಣಾ ಬಿಟ್ಟು ಬಾದಾಮಿಗೆ ಬಂದು ಸ್ಪಧೆ೯ ಮಾಡಿರುವ ಬಗ್ಗೆ ಪ್ರಸ್ತಾಪಿಸಿ ಗೊಂದಲಕ್ಕೆ ಕಾರಣವಾಯಿತು.
Related Articles
Advertisement
ಚಿಮ್ಮನಕಟ್ಟಿ ಹೇಳಿದ್ದೇನು ?
‘ಸಿದ್ದರಾಮಯ್ಯಗೆ ಕ್ಷೇತ್ರ ತ್ಯಾಗ ಮಾಡಿದ್ದು ನಾನು’ ಎಂದರು. ಈ ವೇಳೆ ‘ಹೌದು ಹುಲಿಯಾ’ ಎಂದ ಅಭಿಮಾನಿಗಳು. ಅಭಿಮಾನಿಗಳ ಕೂಗಿಗೆ ಭಾವುಕರಾದ ಚಿಮ್ಮನಕಟ್ಟಿ, ‘ನಾನು ಹುಲಿಯಾನೇ, ಆದರೆ ಈಗ ಇಲಿ ಆಗಿದ್ದೇನೆ.ನೀವು ಮಾಡಿದರೆ ಹುಲಿಯಾನೂ ಆಗ್ತೀನಿ.. ಮಂತ್ರಿನೂ ಆಗ್ತೀನಿ, ಮುಖ್ಯಮಂತ್ರಿನೂ ಆಗ್ತೀನಿ..ನೀವು ಮಾಡಿದ್ರೆ ಎಲ್ಲ ಆಗುತ್ತೆ.. ‘ಎಂದರು.
‘ಮೈಸೂರಿನ ವರುಣಾ ಮತ್ತು ಚಾಮುಂಡೇಶ್ವರಿ ಎರಡು ಕ್ಷೇತ್ರದಲ್ಲಿ ಅವರಿಗೆ ಅವಕಾಶ ಇದೆ’ ಎಂದು ಸಿದ್ದರಾಮಯ್ಯ ಹೆಸರು ಹೇಳದೆ ಅಸಮಾಧಾನ ವ್ಯಕ್ತಪಡಿಸಿದರು.’ನನಗೆ ಈ ಕ್ಷೇತ್ರ ಬಿಟ್ಟರೆ ಯಾವುದೇ ಅವಕಾಶ ಇಲ್ಲ. ಅವರಿಗಾಗಿ ನಾನು ಕ್ಷೇತ್ರ ತ್ಯಾಗ ಮಾಡಿದ್ದೀನಿ.ಅವರ ಕ್ಷೇತ್ರದಲ್ಲಿ ಅವರು ಗೆದ್ದರೆ ಅವರಿಗೆ ಯೋಗ್ಯತೆ ಇರುತ್ತದೆ’ ಎಂದು, ಪರೋಕ್ಷವಾಗಿ ಸಿದ್ದರಾಮಯ್ಯ ಸ್ಪರ್ಧೆಗೆ ವಿರೋಧ ವ್ಯಕ್ತಪಡಿಸಿದರು.
ಈ ವೇಳೆ ಕೆಲ ಮುಖಂಡರು ಚಿಮ್ಮನಕಟ್ಟಿ ಭಾಷಣ ನಿಲ್ಲಿಸಲು ಮುಂದಾದರು. ಕೆಲ ಸಮಯ ಮೈಕ್ ಬಂದ್ ಮಾಡಿ ಚಿಮ್ಮನಕಟ್ಟಿಗೆ ಮನವಿ ಮಾಡಿದರು.