Advertisement

ಅಜ್ಲಾನ್‌ ಶಾ ಹಾಕಿ: ಮಲೇಷ್ಯಾ ವಿರುದ್ಧ ಭಾರತಕ್ಕೆ ಸೋಲು

03:54 PM May 06, 2017 | |

ಇಪೋ (ಮಲೇಷ್ಯಾ): ಪಂದ್ಯ ಅಂತ್ಯಗೊಳ್ಳಲು ಕೆಲವೇ ನಿಮಿಷ ಬಾಕಿ ಇರುವಂತೆ 1 ಗೋಲು ಬಿಟ್ಟುಕೊಟ್ಟ ಭಾರತ ತಂಡ ಅಜ್ಲಾನ್‌ ಶಾ ಹಾಕಿ ಟೂರ್ನಿಯಲ್ಲಿ ಮಲೇಷ್ಯಾ ವಿರುದ್ಧ ಆಘಾತ ಆನುಭವಿಸಿದೆ. ಈ ಆಘಾತದಿಂದ ಭಾರತ ಫೈನಲ್‌ ತಲುಪುವ ಅವಕಾಶವನ್ನು ಕಳೆದುಕೊಂಡಿದೆ.

Advertisement

ಮಲೇಷ್ಯಾ ತಂಡದ ಪರ ಶಹರಿಲ್‌ ಸಾಬಾ (51ನೇ ನಿಮಿಷ) ಏಕೈಕ ಗೋಲು ದಾಖಲಿಸಿದರೆ, ಭಾರತದ ಪರ ಯಾವುದೇ ಗೋಲು ದಾಖಲಾಗಲಿಲ್ಲ. ಹೀಗಾಗಿ ಮಲೇಷ್ಯಾ 1-0 ಗೋಲಿನಿಂದ ಜಯ ಸಾಧಿಸಿತು. ಪಂದ್ಯದ ಆರಂಭದಿಂದ ಎರಡೂ ತಂಡಗಳು ರಕ್ಷಣೆಗೆ ಒತ್ತು ನೀಡಿದವು. ಹೀಗಾಗಿ ಮೊದಲ ಅವಧಿಯಲ್ಲಿ ಯಾವುದೇ ಗೋಲು ದಾಖಲಾಗದೇ ಅಂತ್ಯವಾಯಿತು. 2ನೇ ಅವಧಿಯಲ್ಲಿ ಎರಡೂ ತಂಡಗಳು ಆಕ್ರಮಣಕಾರಿ ಆಟಕ್ಕೆ ಮುಂದಾದರೂ ನಿರೀಕ್ಷಿತ ಯಶಸ್ಸು ಸಾಧಿಸಲಿಲ್ಲ. 51ನೇ ನಿಮಿಷದಲ್ಲಿ ಮಲೇಷ್ಯಾಗೆ ಸಿಕ್ಕ ಪೆನಾಲ್ಟಿಯಲ್ಲಿ ಚೆಂಡನ್ನು ಶಹರಿಲ್‌ ಗೋಲಾಗಿಸಿದರು. ಇದೇ ಮುನ್ನಡೆಯನ್ನು ಮಲೇಷ್ಯಾ ಕಾಯ್ದುಕೊಂಡು ಜಯಸಾಧಿಸಿತು.

ತಪ್ಪಿದ ಫೈನಲ್‌ ಅವಕಾಶ: ಅಂತಿಮ ಪಂದ್ಯಕ್ಕೂ ಮುನ್ನ ಆಸ್ಟ್ರೇಲಿಯಾ 10 ಅಂಕ ಸಂಪಾದಿಸಿ ಅಗ್ರ ಸ್ಥಾನದಲ್ಲಿದ್ದರೆ,
ಭಾರತ, ಬ್ರಿಟನ್‌, ನ್ಯೂಜಿಲೆಂಡ್‌ ತಲಾ 7 ಅಂಕ ಸಂಪಾದಿಸಿ ನಂತರದ ಸ್ಥಾನದಲ್ಲಿದ್ದವು. ಹೀಗಾಗಿ ಆಸ್ಟ್ರೇಲಿಯಾ ಫೈನಲ್‌
ತಲುಪಿತ್ತು. ಮತ್ತೂಂದು ಸ್ಥಾನಕ್ಕಾಗಿ ಭಾರತ, ಬ್ರಿಟನ್‌ ಮತ್ತು ನ್ಯೂಜಿಲೆಂಡ್‌ ನಡುವ ಸ್ಪರ್ಧೆಯಿತ್ತು. ಆದರೆ ಭಾರತ
ಮಲೇಷ್ಯಾ ವಿರುದಟಛಿ ಸೋತು ನಿರಾಸೆ ಅನುಭವಿಸಿತು. ಅತ್ತ ಬ್ರಿಟನ್‌ 3-2ರಿಂದ ನ್ಯೂಜಿಲೆಂಡ್‌ ವಿರುದ್ಧ ಜಯಸಾಧಿಸಿತು.

ಹೀಗಾಗಿ ಬ್ರಿಟನ್‌ ಕೂಡ 10 ಅಂಕ ಸಂಪಾದಿಸಿ ಫೈನಲ್‌ಗೆ ಲಗ್ಗೆ ಹಾಕಿತು. ಭಾರತ ಶನಿವಾರ ಕಂಚಿನ ಪದಕಕ್ಕಾಗಿ ನ್ಯೂಜಿಲೆಂಡ್‌ ಎದುರಿಸಲಿದೆ. 5 ಮತ್ತು 6ನೇ ಸ್ಥಾನಕ್ಕೆ ಜಪಾನ್‌ ಮತ್ತು ಮಲೇಷ್ಯಾ ನಡುವೆ ಸ್ಪರ್ಧೆ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next