Advertisement

ರಾಮನಗರದಲ್ಲಿ 22ರಂದು ‘ಆಜಾದಿ ಕಾ ಅಮೃತ ಮಹೋತ್ಸವ’; ವಿದೇಶಾಂಗ ಸಚಿವ ಜೈಶಂಕರ್ ಮುಖ್ಯ ಅತಿಥಿ

07:17 PM Jul 18, 2022 | Team Udayavani |

ರಾಮನಗರ : ರಾಮನಗರ ಜಿಲ್ಲಾ ಕೇಂದ್ರದಲ್ಲಿ ಇದೇ 22ರಂದು ‘ಆಜಾದಿ ಕಾ ಅಮೃತ್ ಮಹೋತ್ಸವ’ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ವಿದೇಶಾಂಗ ಸಚಿವ ಎಸ್.ಜೈಶಂಕರ್ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ಹೇಳಿದ್ದಾರೆ.

Advertisement

ಈ ಸಂಬಂಧ ಅಧಿಕಾರಿಗಳೊಂದಿಗೆ ಸೋಮವಾರ ಸಭೆ ನಡೆಸಿದ ಅವರು, ಈ ವಿಚಾರ ತಿಳಿಸಿದ್ದಾರೆ.

ಅಂದು ಜಿಲ್ಲೆಯ ಎಲ್ಲ ಕಾಲೇಜು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಜತೆಗೆ, ಅರ್ಥಪೂರ್ಣ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಅವರು ಮಾಹಿತಿ ನೀಡಿದರು.

ಕಾರ್ಯಕ್ರಮ ಬೃಹತ್ ಸ್ವರೂಪದಲ್ಲಿ ನಡೆಯಲಿದ್ದು, ಅಪಾರ ಸಂಖ್ಯೆಯ ಜನ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದ ಜಾಗವನ್ನು ತ್ವರಿತವಾಗಿ ನಿರ್ಧರಿಸಲಾಗುವುದು ಎಂದು ಅವರು ನುಡಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್, ಜಿಪಂ ಸಿಇಒ ದಿಗ್ವಿಜಯ್ ಬೋಡ್ಕೆ, ಎಸ್ಪಿ ಸಂತೋಷ್ ಬಾಬು ಅವರು ರಾಮನಗರದಿಂದ ವರ್ಚುಯಲ್ ನಲ್ಲಿ ಭಾಗವಹಿಸಿದ್ದರು. ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ, ಬೆಂಗಳೂರು ವಿವಿ ಕುಲಪತಿ ಡಾ.ಜಯಕರ್, ಕಲಾವಿದೆ ವೀಣಾಮೂರ್ತಿ ಇದ್ದರು. ಬೆಂಗಳೂರು ವಿವಿಗೆ ಕಾರ್ಯ ಆಯೋಜನೆಯ ಉಸ್ತುವಾರಿ ನೀಡಲಾಗಿದೆ. ರಾಮನಗರ ಪಿಜಿ‌ ಸೆಂಟರ್ ನಿರ್ದೇಶಕ ರಾಮಕೃಷ್ಣ ಕೂಡ ಇದ್ದರು.

Advertisement

ಇದನ್ನೂ ಓದಿ : ನೀಟ್‌ ಪರೀಕ್ಷೆ: 100 ವಿದ್ಯಾರ್ಥಿನಿಯರ ಒಳಉಡುಪನ್ನೂ ತೆಗೆಸಿದರು! ಪೋಷಕರ ದೂರು

Advertisement

Udayavani is now on Telegram. Click here to join our channel and stay updated with the latest news.

Next