Advertisement
ಅಯ್ಯಪ್ಪ ವ್ರತಾಚರಣೆಯ ನಿಯಮಗಳು*ಶಬರಿಮಲೆಗೆ ಹೋಗುವ ಮುನ್ನ 41 ದಿನ ಕಠಿಣ ವ್ರತ ಪಾಲಿಸಬೇಕು.
*ಮುಂಜಾನೆ ಎದ್ದು ತಣ್ಣೀರಿನಲ್ಲಿ ಮಿಂದು ಮಡಿಯನ್ನುಟ್ಟು ಅಯ್ಯಪ್ಪ ನಾಮ ಜಪಿಸುತ್ತಾ ಅಯ್ಯಪ್ಪನಿಗೆ ಪೂಜೆ ಸಲ್ಲಿಸಬೇಕು, ಅಯ್ಯಪ್ಪನಿಗೆ ಪ್ರಾತಃಪೂಜೆ ಮತ್ತು ಸಂಧ್ಯಾಪೂಜೆ ಮಾಡಿ ನೈವೇದ್ಯ ಅರ್ಪಿಸಬೇಕು.
*ಅಯ್ಯಪ್ಪ ಮಾಲೆ ಧರಿಸಿದವರು ದಿನ 24 ಗಂಟೆಯೂ ಅಯ್ಯಪ್ಪನ ಜಪ ಮಾಡಬೇಕು. ಈ ಸಂದರ್ಭದಲ್ಲಿ ಯಾವುದೇ ಕೆಟ್ಟ ಯೋಚನೆ ಮಾಡಬಾರದು.
* ಸ್ವತಃ ಅಥವಾ ಅಯ್ಯಪ್ಪ ಮಾಲಾಧಾರಿ ತಯಾರಿಸಿದ ಆಹಾರ ಮಾತ್ರ ಸೇವಿಸಬೇಕು, ಅದು ಒಂದು ಹೊತ್ತು ಮಾತ್ರ ಊಟ ಮಾಡಬೇಕು. ಬೆಳಗ್ಗೆ ಹಾಗೂ ಸಾಯಂಕಾಲ ಅಲ್ಪಾಹಾರ ಸೇವಿಸಬೇಕು.
*ವೃತಾವಧಿಯಲ್ಲಿ ಮಾಂಸಾಹಾರ ಸೇವನೆ, ಮದ್ಯಪಾನ, ತಂಬಾಕು ಸೇವನೆ ಮಾಡಬಾರದು.
* ತಲೆಕೂದಲು ಹಾಗೂ ಉಗುರುಗಳನ್ನು ಕತ್ತರಿಸಬಾರದು
* ದಿನದಲ್ಲಿ ಎರಡು ಬಾರಿ ಸ್ನಾನ ಮಾಡಿ, ಸ್ಥಳೀಯ ದೇವಸ್ಥಾನಕ್ಕೆ ಹೋಗಿ ಬರಬೇಕು.
* ಕಪ್ಪು ಬಣ್ಣದ ಅಥವಾ ಕಾವಿ ಬಟ್ಟೆ ಧರಿಸಬೇಕು.
* ವ್ರತಧಾರಿಯು ತುಳಸಿ ಮಾಲೆ ಮತ್ತು ರುದ್ರಾಕ್ಷಿಯನ್ನು ಧರಿಸಿರಬೇಕು
* ಮನೆಯಿಂದ ದೂರವಿದ್ದು ಪ್ರತ್ಯೇಕವಾಗಿ ಅಥವಾ ದೇವಸ್ಥಾನದ ಬಳಿ ವಾಸಿಸಬೇಕು.
* ಹಿರಿಯರನ್ನಾಗಲಿ, ಕಿರಿಯರನ್ನಾಗಲಿ ಇತರರನ್ನು ಕೂಡ ‘ಅಯ್ಯಪ್ಪ’ ಎಂದೇ ಸಂಬೋಧಿಸಬೇಕು.
* ಹೆಂಗಸರನ್ನು, ಹೆಂಡತಿಯನ್ನು ‘ಮಾತಾ / ಅಮ್ಮ’ ಎಂದು ಕರೆಯಬೇಕು
* ಚಪ್ಪಲಿಯನ್ನು ಧರಿಸಬಾರದು, ಕಾಲುನಡಿಗೆಯಲ್ಲಿ ತೆರಳಬೇಕು
* ಅಯ್ಯಪ್ಪ ಮಾಲೆ ಧರಿಸಿದವರೆಲ್ಲರಿಗೂ ವಯೋಮಾನದ ಭೇದವಿಲ್ಲದೆ ಕಾಲಿಗೆ ನಮಸ್ಕರಿಸಬೇಕು
*ಅಯ್ಯಪ್ಪ ದೀಕ್ಷೆ ಪಡೆದವರು ನೆಲದ ಮೇಲೆ ಮಲಗಬೇಕು
* ಮಾಂಸಾಹಾರ, ಮದ್ಯಪಾನ, ಧೂಮಪಾನವನ್ನು ತ್ಯಜಿಸುವುದರಿಂದ ದೇಹದ ಆರೋಗ್ಯ ವೃದ್ಧಿಯಾಗುವುದು. ಜೊತೆಗೆ ಒಳ್ಳೆಯ ಚಿಂತನೆಗಳು ನಮ್ಮ ಆರೋಗ್ಯವನ್ನು ಹೆಚ್ಚಿಸಲು ಸಹಕಾರಿ.
*ಕೇಶಮುಂಡನ ಮಾಡದಿರುವುದು, ಉಗುರು ಕತ್ತರಿಸದಿರುವುದು ನಮ್ಮನ್ನು ಬಾಹ್ಯ ಸೌಂದರ್ಯ ಹಾಗೂ ಲೌಕಿಕ ಆಕರ್ಷಣೆಯಿಂದ ದೂರವಿಡುತ್ತದೆ.
*ವೃತಧಾರಿಗಳು ಧರಿಸುವಂತಹ ಕಪ್ಪು ಬಟ್ಟೆಯು ಎಲ್ಲಾ ಲೌಕಿಕ ಸುಖ, ಆಕರ್ಷಣೆಗಳನ್ನು ಬಿಟ್ಟು ದೇವರಿಗೆ ಶರಣಾಗಿದ್ದೇವೆ ಎನ್ನುವುದರ ಸಂಕೇತವಾಗಿದೆ. ಅಲ್ಲದೇ ಅಯ್ಯಪ್ಪನ ಮುಂದೆ ಎಲ್ಲರೂ ಸಮಾನರು ಎಂಬ ಅರ್ಥವನ್ನು ನೀಡುತ್ತದೆ.
* ಅಯ್ಯಪ್ಪ ಭಕ್ತರು 41 ದಿನ ಬ್ರಹ್ಮಚರ್ಯವನ್ನು ಪಾಲಿಸುವುದರಿಂದ ಕಾಮ, ಕ್ರೋಧ, ಮೋಹದಿಂದ ದೂರವಿದ್ದರೆ ಮನಸ್ಸು ಹಾಗೂ ದೇಹ ಶುದ್ಧವಾಗುವುದು. ಪ್ರವೀಣ್ ಚೆನ್ನಾವರ