ಮುಂಬಯಿ: ಭಾಯಂದರ್ ಪಶ್ಚಿಮದ ಸ್ಟೇಷನ್ ರೋಡ್‌ನ ಸ್ಟಾರ್ ಪ್ಯಾಲೇಸ್ ಬಿಲ್ಡಿಂಗ್‌ನ ನಂಬರ್-13, ಸಂತೋಷ್ ಟಾಕೀಸ್ ಸಮೀಪದಲ್ಲಿರುವ ತ್ರಿಮೂರ್ತಿ ಹೊಟೇಲ್ ಮಾಲಕರಾದ ದಿ| ಸೋಮಪ್ಪ ಕೋಟ್ಯಾನ್ ಅವರ ಹಸ್ತದಿಂದ ಸ್ಥಾಪಿಸಲ್ಪಟ್ಟ ಶ್ರೀ ಸ್ವಾಮಿ ಶರಣಂ ಅಯ್ಯಪ್ಪ ಭಕ್ತವೃಂದ ಚಾರಿಟೆಬಲ್ ಟ್ರಸ್ಟ್ ಇದರ 24ನೇ ವಾರ್ಷಿಕ ಶ್ರೀ ಅಯ್ಯಪ್ಪ ಮಹಾಪೂಜೆಯು ಡಿ. 30ರಂದು ವಿವಿಧ ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ನಡೆಯಿತು.
ಮೂಡುಬಿದಿರೆ ಶ್ರೀ ಮಣಿಕಂಠ ಕ್ಷೇತ್ರದ ಗುರುಸ್ವಾಮಿಗಳಾದ ಶಿವಾನಂದ ಶಾಂತಿ ಹಾಗೂ ಶಿಬಿರದ ಶ್ರೀನಿವಾಸ ಗುರುಸ್ವಾಮಿಗಳ ಪೌರೋಹಿತ್ಯದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ನೆರವೇರಿದವು. ಧಾರ್ಮಿಕ ಕಾರ್ಯಕ್ರಮವಾಗಿ ಬೆಳಗ್ಗೆ 7 ರಿಂದ ರಮೇಶ್ ಶಾಂತಿ ಗುರುಸ್ವಾಮಿ ಅವರ ನೇತೃತ್ವದಲ್ಲಿ ಗಣಹೋಮ, ಬೆಳಗ್ಗೆ 9.30ರಿಂದ ಶಿಬಿರದ ಮಹಿಳಾ ವಿಭಾಗ ಮತ್ತು ಚಿಣ್ಣರ ಬಿಂಬದ ಮಕ್ಕಳಿಂದ ಭಜನೆ, ಬೆಳಗ್ಗೆ 11ರಿಂದ ಲಕ್ಷ್ಮೀನಾರಾಯಣ ಭಜನ ಸಮಿತಿ ಮೀರಾರೋಡ್ ಇವರಿಂದ ಭಜನ ಸಂಕೀರ್ತನೆ ನಡೆಯಿತು.
ಮಧ್ಯಾಹ್ನ 12.30ರಿಂದ ಶರಣು ಘೋಷ, ಪಡಿಪೂಜೆ, ಪುಷ್ಪಾಂಜಲಿ, ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಿತು. ಮಧ್ಯಾಹ್ನ 1 ರಿಂದ ಅನ್ನಸಂತರ್ಪಣೆಯನ್ನು ಆಯೋಜಿಸ ಲಾಗಿತ್ತು. ಅನ್ನಸಂತರ್ಪಣೆಯಲ್ಲಿ ಸಾವಿರಾರು ಭಕ್ತಾದಿಗಳು ಆಗಮಿಸಿ ಪ್ರಸಾದ ಸ್ವೀಕರಿಸಿದರು. ಮಹಾಪೂಜೆಗೆ ಸಹಕರಿಸಿದ ಸರ್ವ ದಾನಿಗಳನ್ನು ಹಾಗೂ ಗಣ್ಯರುಗಳನ್ನು ಮತ್ತು ವಿವಿಧ ಸಂಘಟನೆಗಳನ್ನು ಅಧ್ಯಕ್ಷ ಸಚಿನ್ ಕೋಟ್ಯಾನ್, ಕಾರ್ಯದರ್ಶಿ ಸುಧೀರ್ ಪುತ್ರನ್ ಅವರು ಶಾಲು ಹೊದೆಸಿ, ಮಹಾಪ್ರಸಾದವನ್ನಿತ್ತು ಗೌರವಿಸಿದರು.
ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸ್ಥಳೀಯ ಮಕ್ಕಳಿಂದ ಭಕ್ತಿಮಯ ನೃತ್ಯ ವೈವಿಧ್ಯ ನಡೆಯಿತು. ಅಯ್ಯಪ್ಪ ವ್ರತಧಾರಿಗಳಿಂದ ಅಪ್ಪಸೇವೆ, ದೀಪಾರಾಧನೆ, ಮಹಾ ಮಂಗಳಾರತಿ, ಪ್ರಸಾದ ವಿತರಣೆ, ಅನ್ನದಾನ ನಡೆಯಿತು. ತುಳು-ಕನ್ನಡಿಗ ಭಕ್ತಾದಿಗಳು, ಶಿಬಿರದ ಅಯ್ಯಪ್ಪ ವ್ರತಧಾರಿಗಳು, ನಗರದ ವಿವಿಧೆಡೆಗಳ ಅಯ್ಯಪ್ಪ ಸ್ವಾಮಿ
ವ್ರತದಾರಿಗಳು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ದಾನಿಗಳು, ಸ್ಥಳೀಯ ಉದ್ಯಮಿಗಳು ಉಪಸ್ಥಿತರಿದ್ದು ಪ್ರಸಾದ ಸ್ವೀಕರಿಸಿದರು.
ಈ ಕಾರ್ಯಕ್ರಮವು ಸಂಪೂರ್ಣ ಯಶಸ್ವಿಯಾಗು ವಲ್ಲಿ ಸಲಹೆಗಾರರಾದ ಶಿವರಾಮ ಶೆಟ್ಟಿ, ಅಧ್ಯಕ್ಷ ಸಚಿನ್ ಕೋಟ್ಯಾನ್, ಉಪಾಧ್ಯಕ್ಷ ರಮೇಶ್ ಶೆಟ್ಟಿ, ಕಾರ್ಯದರ್ಶಿ ಸುಧೀರ್ ಪುತ್ರನ್, ಜತೆ ಕಾರ್ಯದರ್ಶಿ ವಿವೇಕಾನಂದ ಹೆಗ್ಡೆ, ಕೋಶಾಧಿಕಾರಿ ಸುಂದರ ಶೆಟ್ಟಿ, ಜತೆ ಕೋಶಾಧಿಕಾರಿ ಕರುಣಾಕರ ಶೆಟ್ಟಿ, ರಮೇಶ್ ಸಾಮಿ, ಗುರುಸ್ವಾಮಿಗಳು, ಸಮಿತಿಯ ಸದಸ್ಯರು, ಯುವ ವಿಭಾಗದವರು, ಸದಸ್ಯರು, ಮಹಿಳಾ ಸದಸ್ಯೆಯರು, ಸರ್ವ ಸದಸ್ಯರು ಸಹಕರಿಸಿದರು. ಕಾರ್ಯದರ್ಶಿ ಸುಧೀರ್ ಪುತ್ರನ್ ವಂದಿಸಿದರು.