Advertisement
ಪಡೀಲ್ ಆರೋಗ್ಯ ಕೇಂದ್ರದಲ್ಲಿ ನಡೆದ ಜಿಲ್ಲಾಮಟ್ಟದ ಕಾರ್ಯಕ್ರಮ ದಲ್ಲಿ ಸ್ಥಳೀಯ ಕಾರ್ಪೋರೆಟರ್ ರೂಪಶ್ರೀ ಪೂಜಾರಿ ಕ್ಲಿನಿಕ್ ಉದ್ಘಾಟಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಕಿಶೋರ್ ಕುಮಾರ್ ಮತ್ತು ಆರೋಗ್ಯ ಇಲಾಖೆ ಇತರ ಅಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು. ಬಿಜೈ, ಬಂದರು, ಸುರತ್ಕಲ್‌ನ ಕ್ಲಿನಿಕ್‌ಗಳನ್ನೂ ಸ್ಥಳೀಯವಾಗಿಯೇ ಜನಪ್ರತಿನಿಧಿಗಳು ಉದ್ಘಾಟಿಸಿದರು.
ನಗರದ ಎಲ್ಲ ಆಯುಷ್ಮತಿ ಕ್ಲಿನಿಕ್‌ಗಳು ಮಂಗಳವಾರದಿಂದ ಅಧಿಕೃತವಾಗಿ ಕಾರ್ಯಾಚರಣೆ ಆರಂಭಿಸಲಿವೆ. ಪಡೀಲ್‌ನಲ್ಲಿ ಎ.ಜೆ. ಆಸ್ಪತ್ರೆ, ಬಂದರ್‌ನಲ್ಲಿ ಫಾದರ್ ಮುಲ್ಲರ್, ಬಿಜೈನಲ್ಲಿ ಕೆ.ಎಂ.ಸಿ. ಮತ್ತು ಸುರತ್ಕಲ್‌ನಲ್ಲಿ ಶ್ರೀನಿವಾಸ ಆಸ್ಪತ್ರೆಗೆ ಕ್ಲಿನಿಕ್ ಉಸ್ತುವಾರಿ ವಹಿಸಲಾಗಿದ್ದು, ತಲಾ ಇಬ್ಬರಂತೆ ತಜ್ಞ ವೈದ್ಯರು ಪ್ರತಿದಿನ ಕ್ಲಿನಿಕ್‌ನಲ್ಲಿ ಇರುತ್ತಾರೆ. ಎಲ್ಲ ಕ್ಲಿನಿಕ್‌ಗಳು ಬೆಳಗ್ಗೆ 9ರಿಂದ ಮಧ್ಯಾಹ್ನ 1ರ ವರೆಗೆ ಕಾರ್ಯಾಚರಿಸಲಿವೆ. ಸೋಮವಾರ- ಶುಕ್ರವಾರದ ವರೆಗೆ
ಆಯುಷ್ಮತಿ ಕ್ಲಿನಿಕ್‌ಗಳು ಸೋಮವಾರದಿಂದ -ಶುಕ್ರವಾರದ ವರೆಗೆ ಕಾರ್ಯಾಚರಿಸಲಿವೆ. ಸೋಮವಾರ ವೈದ್ಯಕೀಯ ತಜ್ಞರು ಮತ್ತು ಚರ್ಮರೋಗ ತಜ್ಞರು, ಮಂಗಳವಾರ ಶಸ್ತ್ರಚಿಕಿತ್ಸಾ ತಜ್ಞರು ಮತ್ತು ಕಿವಿ, ಮೂಗು, ಗಂಟಲು ತಜ್ಞರು, ಬುಧವಾರ ಮೂಳೆ ಮತ್ತು ಕೀಲು ಹಾಗೂ ನೇತ್ರ ತಜ್ಞರು, ಗುರುವಾರ ಸ್ತ್ರೀರೋಗ ಮತ್ತು ಮಕ್ಕಳ ತಜ್ಞರು, ಶುಕ್ರವಾರ ಮಾನಸಿಕ ರೋಗ ಮತ್ತು ದಂತ ತಜ್ಞರು ಲಭ್ಯರಿರುತ್ತಾರೆ. ಪ್ರಯೋಗಾಲಯ ಸೇವೆ, ಉಚಿತ ತಪಾಸಣೆ, ಔಷಧ, ಆಪ್ತ ಸಮಾಲೋಚನೆ, ರೆಫರಲ್ ಸೇವೆ ದೊರೆಯುತ್ತದೆ.
Related Articles
ಉಡುಪಿ: ನಗರದ ಅಲಂಕಾರ್ ಚಿತ್ರಮಂದಿರದ ಬಳಿಯ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೋಮವಾರ ಆಯುಷ್ಮತಿ ಕ್ಲಿನಿಕ್ ಉದ್ಘಾಟನೆಗೊಂಡಿತು.
Advertisement
ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್ ಉದ್ಘಾಟಿಸಿದರು. ನಗರಸಭಾ ಸದಸ್ಯೆ ರಶ್ಮಿ ಚಿತ್ತರಂಜನ್, ಉಡುಪಿ ತಾ| ಆರೋಗ್ಯಾಧಿಕಾರಿ ಡಾ| ವಾಸುದೇವ ಉಪಾಧ್ಯಾಯ ಮತ್ತಿತರರು ಉಪಸ್ಥಿತರಿದ್ದರು.
ಮಡಿಕೇರಿಯಲ್ಲೂ ಚಾಲನೆಮಡಿಕೇರಿ: ಕೊಡಗು ಜಿಲ್ಲಾಡಳಿತ, ಜಿ.ಪಂ., ರಾಷ್ಟ್ರೀಯ ಆರೋಗ್ಯ ಅಭಿಯಾನ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಆಯುಷ್ಮತಿ ಕ್ಲಿನಿಕ್‌ಗೆ ಜಿಲ್ಲಾಧಿಕಾರಿ ಡಾ| ಬಿ.ಸಿ. ಸತೀಶ ಮತ್ತು ನಗರಸಭೆ ಅಧ್ಯಕ್ಷರಾದ ಅನಿತಾ ಪೂವಯ್ಯ ಸೋಮವಾರ ಚಾಲನೆ ನೀಡಿದರು. ಕ್ಲಿನಿಕ್ ನಗರದ ಮಹದೇವ ಪೇಟೆಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತೆರೆಯಲಾಗಿದೆ.