Advertisement
ಸದ್ಯ ಹೇಗಿದೆ ಪರಿಸ್ಥಿತಿ?ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಈಗಾಗಲೇ ಹಿಂದಿನ ಸರಕಾರಗಳು ಸೇರಿದಂತೆ ಎಲ್ಲ ಸರಕಾರಗಳು ಹಲವಾರು ಯೋಜನೆಗಳನ್ನು ಜಾರಿಗೆ ತಂದಿವೆ. ಆದರೂ ಇನ್ನೂ ಸ್ಥಿತಿ ಮಾತ್ರ ಸುಧಾರಿಸಿಲ್ಲ. ಸರಕಾರಿ ದಾಖಲೆಗಳ ಪ್ರಕಾರವೇ ಪ್ರತೀ ಸಾವಿರ ಮಂದಿಗೆ 1.4 ಹಾಸಿಗೆಗಳ ಸೌಲಭ್ಯವಿದೆ. 1,445 ಮಂದಿಗೆ ಒಬ್ಬ ವೈದ್ಯರು ಹಾಗೂ 1,000 ಮಂದಿಗೆ 17 ಮಂದಿ ನರ್ಸ್ ಗಳಿದ್ದಾರೆ.
ಕಳೆದ ಎರಡು ವರ್ಷಗಳಿಂದ ಕಾಡಿದ ಕೊರೊನಾ ದೇಶದ ಆರೋಗ್ಯ ಸ್ಥಿತಿಯನ್ನು ಬಹಿರಂಗಪಡಿಸಿತು. ಅಲ್ಲದೆ ಆರೋಗ್ಯ ವ್ಯವಸ್ಥೆಯಲ್ಲಿನ ಎಲ್ಲ ಲೋಪಗಳೂ ಇದೇ ಸಂದರ್ಭದಲ್ಲಿ ಬಹಿರಂಗವಾದವು. ಹೀಗಾಗಿಯೇ ಈಗ ಕೇಂದ್ರ ಸರಕಾರ ಕಡೇ ಪಕ್ಷ ಜಿಲ್ಲೆಗೊಂದು ವೈದ್ಯಕೀಯ ಕಾಲೇಜು ಇರಬೇಕು ಎಂಬ ನಿಟ್ಟಿನಲ್ಲಿ ಕಾಲೇಜುಗಳ ಸ್ಥಾಪನೆ ಮಾಡುತ್ತಿದೆ. ಉತ್ಕೃಷ್ಟ ರೀತಿಯ, ಅಂದರೆ ಏಮ್ಸ್ ರೀತಿಯ ಆಸ್ಪತ್ರೆಗಳ ಸ್ಥಾಪನೆಗೂ ಕೈಹಾಕಿದೆ. ಏನಿದು ಪಿಎಂಎಎಸ್ ಬಿವೈ ಯೋಜನೆ?
ದೇಶದಲ್ಲಿ ಪ್ರಾಥಮಿಕ, ದ್ವಿತೀಯ ಮತ್ತು ತೃತೀಯ ಹಂತದಲ್ಲಿ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸುವುದೇ ಈ ಯೋಜನೆಯ ಪ್ರಮುಖ ಉದ್ದೇಶ. ಪ್ರಮುಖವಾಗಿ ಗ್ರಾಮೀಣ ಪ್ರದೇಶದ ಮೇಲೆ ಗಮನ ಇರಿಸುವುದು. ಅಂದರೆ, ಈ ಹಂತದ ವ್ಯವಸ್ಥೆಯನ್ನು ಗಟ್ಟಿಗೊಳಿಸಿ, ಮುಂದಿನ ದಿನಗಳಲ್ಲಿ ಕೊರೊನಾ ರೀತಿಯ ಯಾವುದೇ ಸಾಂಕ್ರಾಮಿಕ ರೋಗಗಳು ಬಂದರೂ ಅದನ್ನು ಪ್ರಬಲವಾಗಿ ಎದುರಿಸಲು ಈಗಿನಿಂದಲೇ ಸಜ್ಜಾಗುವುದು. ಈ ಯೋಜನೆಗಾಗಿ ಮುಂದಿನ ಆರು ವರ್ಷಗಳ ಲೆಕ್ಕಾಚಾರ ಇರಿಸಿಕೊಂಡು 64 ಸಾವಿರ ಕೋಟಿ ರೂ. ತೆಗೆದಿರಿಸಲಾಗಿದೆ. ಜತೆಗೆ ವೈದ್ಯಕೀಯ ವ್ಯವಸ್ಥೆಯಲ್ಲಿ ಇರುವ ಕೊರತೆಗಳನ್ನು ನೀಗಿಸುವುದು ಇದರ ಉದ್ದೇಶವಾಗಿದೆ. ಇದನ್ನೂ ಓದಿ:ಗೆಲುವಿನ ಓಟ ಮುಂದುವರಿಸಿದ ಪಾಕಿಸ್ಥಾನ
Advertisement
ಹೊಸ ಯೋಜನೆಯಿಂದ ಪ್ರಯೋಜನವೇನು?ಆರೋಗ್ಯ ಕ್ಷೇತ್ರದಲ್ಲಿ ಈಗ ಸೃಷ್ಟಿಯಾಗಿರುವ ಅತೀ ದೊಡ್ಡ ಗ್ಯಾಪ್ ಅನ್ನು ಸರಿದೂಗಿಸುವ ಸಲುವಾಗಿ ಈಗ ದೊಡ್ಡ ಮಟ್ಟದಲ್ಲಿ ವೆಚ್ಚ ಮಾಡಲು ಕೇಂದ್ರ ಸರಕಾರ ಸಿದ್ಧವಾಗಿದೆ. ಈಗ ಮೂರು ವಿಚಾರಗಳನ್ನು ಆದ್ಯತೆಗಳಾಗಿ ಪರಿಗಣಿಸಲಾಗಿದೆ. ಮೊದಲಿಗೆ ಗ್ರಾಮಾಂತರ ಮತ್ತು ಪುಟ್ಟ ನಗರಗಳ ವ್ಯಾಪ್ತಿಯಲ್ಲಿ ಡಯಾಗ್ನೊಸಿಕ್ಸ್ ಮತ್ತು ಚಿಕಿತ್ಸಾ ವ್ಯವಸ್ಥೆ ರೂಪಿಸುವುದು, ಈ ಮೂಲಕ ಆರಂಭದಲ್ಲೇ ರೋಗದ ಮೂಲ ಪತ್ತೆ ಮಾಡುವುದು. ಎರಡನೆಯದು, ಈಗಿರುವ ಪರೀಕ್ಷಾ ಕೇಂದ್ರಗಳು ಮತ್ತು ಡಯಾಗ್ನೊಸ್ಟಿಕ್ಸ್ ನ ಸಂಖ್ಯೆ ಹೆಚ್ಚಿಸುವುದು. ಅಂದರೆ ದೇಶದ 730 ಜಿಲ್ಲೆಗಳಲ್ಲೂ ಸಮಗ್ರ ಸಾರ್ವಜನಿಕ ಆರೋಗ್ಯ ಲ್ಯಾಬ್‌ಗಳನ್ನು ರಚಿಸುವುದು. ಮೂರನೆಯದು, ಈಗಿರುವ ಸಂಶೋಧನ ಸಂಸ್ಥೆಗಳನ್ನು ಮತ್ತಷ್ಟು ಬಲವರ್ಧನೆ ಮಾಡುವುದು.