Advertisement

1.5ಲಕ್ಷ ಮಂದಿಗೆ ಅನುಕೂಲ

08:40 AM Oct 31, 2018 | Karthik A |

ಕಾಜಿರಂಗ: ಕೇಂದ್ರ ಸರಕಾರದ ಆರೋಗ್ಯ ವಿಮೆ ಯೋಜನೆ ಆಯುಷ್ಮಾನ್‌ ಭಾರತ ಆರಂಭಿಸಿ ಒಂದು ತಿಂಗಳಲ್ಲಿ 1.5 ಲಕ್ಷ ಜನರು ಅನುಕೂಲ ಪಡೆದಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಹೇಳಿದ್ದಾರೆ. ಈ ಅವಧಿಯಲ್ಲಿ 190 ಕೋಟಿ ರೂ. ಮೌಲ್ಯದ ಬಿಲ್‌ ಮಾಡಲಾಗಿದೆ ಎಂದಿದ್ದಾರೆ. ಸಾರ್ವಜನಿಕ ಆರೋಗ್ಯ ಸೇವೆ ವ್ಯವಸ್ಥೆಯಲ್ಲಿ ಹಮ್ಮಿಕೊಂಡಿರುವ ಉತ್ತಮ ಯೋಜನೆಗಳ ಬಗೆಗಿನ ಸಮಾವೇಶದಲ್ಲಿ ನಡ್ಡಾ ಈ ವಿವರಣೆ ನೀಡಿದ್ದಾರೆ. ಸೆ.23ರಂದು ಪ್ರಧಾನಿ ಮೋದಿ ಈ ಯೋಜನೆ ಉದ್ಘಾಟಿಸಿದ್ದರು. ಪ್ರತಿ ಕುಟುಂಬಕ್ಕೆ 5 ಲಕ್ಷ ರೂ. ವಾರ್ಷಿಕ ಆರೋಗ್ಯ ವಿಮೆಯನ್ನು ಇದು ಒದಗಿಸುತ್ತದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next