Advertisement

ಸಂಕ್ರಾಂತಿಗೆ ಜಾಗತಿಕ ಸೂರ್ಯ ನಮಸ್ಕಾರ !

08:59 PM Jan 09, 2022 | Team Udayavani |

ನವದೆಹಲಿ: ಕೇಂದ್ರ ಆಯುಷ್‌ ಸಚಿವಾಲಯವು ಮಕರ ಸಂಕ್ರಾಂತಿಯ ದಿನವಾದ ಜ.14ರಂದು ಜಾಗತಿಕ ಸೂರ್ಯ ನಮಸ್ಕಾರ ಕಾರ್ಯಕ್ರಮ ಹಮ್ಮಿಕೊಂಡಿದೆ.

Advertisement

ವಿಶ್ವದೆಲ್ಲೆಡೆಯಿಂದ ಒಟ್ಟು 75 ಲಕ್ಷ ಮಂದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಪ್ರತಿ ಜೀವಿಯನ್ನು ಪೋಷಿಸುವ ಸೂರ್ಯನಿಗೆ ಪ್ರತಿ ವರ್ಷ ಮಕರ ಸಂಕ್ರಾಂತಿಯ ದಿನದಂದು ಸೂರ್ಯನಮಸ್ಕಾರದ ಮೂಲಕ ಕೃತಜ್ಞತೆ ಅರ್ಪಿಸಲಾಗುತ್ತದೆ.

ಹಾಗೆಯೇ ಈ ಸೂರ್ಯನಮಸ್ಕಾರದಿಂದ ಮನುಷ್ಯನ ದೇಹದಲ್ಲಿ ಪ್ರತಿಕಾಯ ಶಕ್ತಿ ಹೆಚ್ಚುತ್ತದೆ ಎಂದು ಸಚಿವಾಲಯ ತಿಳಿಸಿದೆ. ಈ ಕಾರ್ಯಕ್ರಮ ಜಾಗತಿಕ ಹವಾಮಾನ ಬದಲಾವಣೆಯ ಬಗ್ಗೆಯೂ ಸಂದೇಶ ಹೊತ್ತಿದೆ.

ಇದನ್ನೂ ಓದಿ:ಕುಷ್ಟಗಿ ನಿಡಶೇಸಿ ಕೆರೆಯಲ್ಲಿ ಚಳಿಗಾಲದ ಅತಿಥಿ : ಪಟ್ಟೆ ತಲೆಯ ಹೆಬ್ಬಾತುಗಳ ಆಗಮನ

ಸೌರ ಶಕ್ತಿ ಬಳಸಿ ವಿಶ್ವವನ್ನು ಉಳಿಸುವಂತೆ ತಿಳಿಸುತ್ತದೆ. ಹಾಗೆಯೇ ಭಾರತೀಯ ಹಬ್ಬದ ಸಂಸ್ಕೃತಿ, ಸಂಸ್ಕಾರವನ್ನೂ ಬಿಂಬಿಸುತ್ತದೆ ಎಂದು ಸಚಿವಾಲಯ ತಿಳಿಸಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next