Advertisement

ಕಫ‌ದ ಮುಕ್ತಿಗೆ ಆಯುರ್ವೇದ ಮದ್ದು

10:50 PM Nov 18, 2019 | mahesh |

ಹವಾಮಾನದ ವೈಪರೀತ್ಯದಿಂದಾಗಿ ಆರೋಗ್ಯ ಹದಗೆಡೆವುದು ಖಂಡಿತ. ಪರಿಣಾಮ ಕೆಮ್ಮು, ಕಫ‌, ಅಸ್ತಮಾ, ಶೀತ-ಜ್ವರ ಹೀಗೆ ಹಲವಾರು ಸಮಸ್ಯೆಗಳಿಂದ ಬಳಲುತ್ತಲಿರುತ್ತೇವೆ. ಮಧ್ಯರಾತ್ರಿಯಲ್ಲಿ ಕಾಡದೇ ನಮ್ಮನ್ನು ಅರ್ಧ ಶಮನ ಮಾಡುವ ಈ ಕೆಮ್ಮು ಮತ್ತು ಕಫ‌ದ ಕಾಟ ನಿದ್ರಾಭಂಗಕ್ಕೆ ಕಾರಣವೆನ್ನಬಹುದು. ಮೆಡಿಸಿನ್‌ ಹುಡುಕಿ ತಡಕಾಡಿದಾಗ ಖಾಲಿ ಆದದ್ದು ನೆನಪಿಗೆ ಬಂದು ವಿಧಿಕಾಣದೆ ಬೆಳಗಾಗುವವರೆಗೆ ಮೆಡಿಸಿನ್‌ಗಾಗಿ ಕಾಯುತ್ತಾರೆ. ಆದರೆ ನಿಮ್ಮ ಅಡುಗೆ ಮನೆಯಲ್ಲಿಯೇ ಇದಕ್ಕೆ ಪರಿಹಾರವಿದೆ ಎಂಬ ಪುಟ್ಟ ಅಂಶ ಮರೆತು ಬಿಡುತ್ತೀರಿ. ಈ ಬಗ್ಗೆ ಮಾಹಿತಿ ಇಲ್ಲಿದೆ.

Advertisement

ಲಿಂಬೆರಸ
ಲಿಂಬೆರಸ ದೇಹದಲ್ಲಿ ಆಯಾಸವನ್ನು ಕಡಿಮೆ ಮಾಡಲು ಮತ್ತು ಪಿತ್ತ ಸಮಸ್ಯೆಗೆ ಜ್ಯೂಸ್‌ ಮಾಡಿ ಸೇವಿಸುತ್ತಾರೆ. ಇದರೊಂದಿಗೆ ಗಂಟಲ ಕಿರಿಕಿರಿ ಉಪಶಮನ ಮಾಡಲೂ ಇದೊಂದು ಮನೆಮದ್ದಾಗಿದೆ. ಬೆಚ್ಚನೆಯ ನೀರಿಗೆ ಚಿಟಿಕೆ ಉಪ್ಪು ಬೆರೆಸಿ ಸೇವಿಸುವುದರಿಂದ ಕೆಮ್ಮು ಕಡಿಮೆ ಆಗುತ್ತದೆ. ಅದ ರೊಂದಿಗೆ ಲಿಂಬೆರಸಕ್ಕೆ ಸಕ್ಕರೆ ಬೆರೆಸಿ ಸೇವಿಸುವುದರಿಂದ ಕಫ‌ ನಿವಾರಿಸಲು ಸಾಧ್ಯವಾಗುತ್ತದೆ.

ಶುಂಠಿ ಕಷಾಯ
ಶುಂಠಿ, ಕಾಳುಮೆಣಸು ಸ್ವಲ್ಪ ಬೆಲ್ಲ ಹಾಕಿಕಷಾಯಮಾಡಿ ದಿನಕ್ಕೆ 3ರಿಂದ ನಾಲ್ಕು ಬಾರಿ ಸೇವಿಸುವುದರಿಂದ ಗಂಟಲಿನ ಕಫ‌ ಕರಗುತ್ತದೆ.

ಈರುಳ್ಳಿ
ಈರುಳ್ಳಿಯನ್ನು ಕತ್ತರಿಸಿ ಅದಕ್ಕೆ ಸಕ್ಕರೆ ಬೆರೆಸಿ ಸುಮಾರು 5 ನಿಮಿಷಗಳ ವರೆಗೂ ಬಿಡಬೇಕು ಬಳಿಕ ದಿನಕ್ಕೆ ಮೂರು ಬಾರಿ ಸೇವಿಸುವುದರಿಂದಾಗಿ ಕಫ‌ ಕಡಿಮೆಯಾಗುತ್ತದೆ.

ಉಪ್ಪು ನೀರು
ಉಗುರು ಬೆಚ್ಚಗಿನ ನೀರಿನಲ್ಲಿ ಉಪ್ಪನ್ನು ಬೆರೆಸಿ ಅದರಿಂದ ಗಂಟಲನ್ನು ಗುಳು ಗುಳು (ಬಾಯಿ ಮುಖಳಿಸುವುದು)ಮಾಡಿದರೆ ಗಂಟಲು ನೋವು ಕಡಿಮೆಯಾಗುವುದರೊಂದಿಗೆ ಕಟ್ಟಿದ ಕಫ‌ವನ್ನು ಹೊರಹಾಕಲು ಸಹಕಾರಿ.

Advertisement

ತುಳಸಿ ರಸ
ತುಳಸಿ ಹಲವು ರೋಗಗಳಿಗೆ ಉಪಯುಕ್ತವಾದ ನೈಸರ್ಗಿಕ ಅಂಶವನ್ನು ಹೊಂದಿದ್ದು ಇದು ದೇಹಕ್ಕೆ ಹೊಸ ಚೈತನ್ಯ ಒದಗಿಸಲು ಸಹಕಾರಿ.
ಇದನ್ನು ನುಣ್ಣಗೆ ಪೆಸ್ಟ್‌ ಮಾಡಿ ಅದರ ರಸದೊಂದಿಗೆ ಕಲ್ಲು ಸಕ್ಕರೆ ಬೆರೆಸಿ ಸೇವಿಸಬೇಕು ಹೀಗೆ ಮಾಡುವುದರಿಂದ ಗಂಟಲಿನ ಕಿರಿಕಿರಿಗೆ ಮುಕ್ತಿ ದೊರೆಯುವುದಲ್ಲದೆ ಕಫ‌ ನಿವಾರಣೆಗೂ ಸಹಕಾರಿಯಾಗಿದೆ.

ಹಬೆ
ಬಿಸಿ ನೀರಿನ ಹಬೆಯಲ್ಲಿ ಮುಖ ಒಡ್ಡಿ ಟವಲ್‌ ಮುಚ್ಚಿಕೊಳ್ಳಬೇಕು ಹೀಗೆ ಮಾಡುವುದರಿಂದದರ ಹಬೆಯೂ ಶ್ವಾಸ ಕೋಶದಲ್ಲಿ ಸೇರಿ ಬೆವರು ಉತ್ಪತ್ತಿ ಮಾಡುತ್ತದೆ. 2ರಿಂದ ಮೂರು ಬಾರಿ ಹೀಗೆ ಮಾಡುವುದರಿಂದ ಕಟ್ಟಿದ ಮೂಗು ಮತ್ತು ಕಫ‌ ಸಮಸ್ಯೆಯಿಂದಾಗಿ ಪರಿಹಾರ ಕಂಡುಕೊಳ್ಳಬಹುದು. ಒಟ್ಟಾರೆ ಮನೆಯಲ್ಲಿಯೇ ಇಷ್ಟೇಲ್ಲ ಮದ್ದು ಅಡಗಿರುವಾಗ ಅದರ ಅರಿವು ನಮಗಿಲ್ಲದಿದ್ದರೆ ಸಮಸ್ಯೆ ಬಂದಾಗ ಅನಗತ್ಯ ತೊಂದರೆಗೆ ಒಳಡುತ್ತೇವೆ.

 -ರಾಧಿಕಾ ಕುಂದಾಪುರ

Advertisement

Udayavani is now on Telegram. Click here to join our channel and stay updated with the latest news.

Next