ಕಾಗವಾಡ: ಪ್ರಾಚೀನ ಕಾಲದಿಂದ ಸಾಧು-ಸಂತರು, ಹಿರಿಯರು ಆಯುರ್ವೇದಿಕ್ ಚಿಕಿತ್ಸಾ ಪದ್ಧತಿ ಅಳವಡಿಸುತ್ತಿದ್ದರು. ಈಗಲೂ ಆಯುರ್ವೇದಿಕ್ ಉಪಚಾರ ಪದ್ಧತಿ ಯಶಸ್ವಿಯಾಗಿದೆ. ಯೋಗ ಪದ್ಧತಿ ಪ್ರಾರಂಭಿಸಿದ ದೇಶ ಹಾಗೂ ವಿಶ್ವದಲ್ಲಿ ಯೋಗ ದಿನ ಆಚರಿಸುತ್ತಿರುವುದು ಹೆಮ್ಮೆಯ ವಿಷಯ ಎಂದು ಶ್ರೀ ಗೊಮ್ಮಟೇಶ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಡಾ| ಎನ್.ಎ. ಮಗದುಮ್ಮ ಹೇಳಿದರು.
ಶಿರಗುಪ್ಪಿ ಗ್ರಾಮದ ಹಿರಿಯ ಸಮಾಜಸೇವಕರಾದ ದಿ. ಬಂಡಾ ಚೌಗುಲೆ ಅವರ ಪ್ರಥಮ ಪುಣ್ಯಸ್ಮರಣೆ ನಿಮಿತ್ತ ನಿಮಿತ್ತ ಅಂಕಲಿ ಗೊಮ್ಮಟೇಶ ಶಿಕ್ಷಣ ಸಂಸ್ಥೆಯ ಆಯುರ್ವೇದಿಕ್ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ವೈದ್ಯರು ಶಿರಗುಪ್ಪಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರದಲ್ಲಿ ಅವರು ಮಾತನಾಡಿದರು.
ಶಿಬಿರದಲ್ಲಿ ಕಾಮಾಲೆ, ಪಾರ್ಶ್ವವಾಯು, ನರರೋಗ, ಚರ್ಮರೋಗ, ಸಕ್ಕರೆ ಕಾಯಿಲೆ, ರಕ್ತದೊತ್ತಡ, ನೇತ್ರ ಚಿಕಿತ್ಸೆ ಸೇರಿದಂತೆ ಹಲವಾರು ಕಾಯಿಲೆಗಳ ಮೇಲೆ ಉಚಿತ ಉಪಚಾರ ನೀಡಲಾಗಿದ್ದು, ಇದರ ಲಾಭ ಅನೇಕರು ಪಡೆದಿದ್ದಾರೆ. ಹೀಗೆಯೇ ಪ್ರತಿವರ್ಷ ಶಿಬಿರ ಆಯೋಜಿಸಲಾಗುವುದು ಎಂದರು.
ಶಿರಗುಪ್ಪಿ ಹಿರಿಯ ವೈದ್ಯರು ಡಾ|ಬಿ.ಬಿ. ಪಾಟೀಲ್ ಆಸ್ಪತ್ರೆಯಲ್ಲಿ ಶಿಬಿರ ಏರ್ಪಡಿಸಲಾಗಿತ್ತು. ತಜ್ಞ ವೈದ್ಯರಾದ ಅಶೋಕ ಶೆಟ್ಟಿ, ಬಸವರಾಜ ಗಂಟಿ, ಸುನೀಲ್ ಹೊನ್ನವರ್, ಡಾ| ಮೋಹನ್ ಭೋಮಾಜ್, ಡಾ| ಸಚಿನ್ ಶಿಂಧೆ, ವಿವೇಕ್ ಸೋಲಾಪುರಕರ್, ಪ್ರದೀಪ್ ಡವಳೆ, ಅಭಿಜಿತ್ ಪಾಟೀಲ್, ಸೇರಿದಂತೆ ಮಹಿಳಾ ವೈದ್ಯರು ಉಪಚಾರ ನೀಡಿದರು.
ಈ ವೇಳೆ ಶಿರಗುಪ್ಪಿ ಗ್ರಾಪಂ ಅಧ್ಯಕ್ಷೆ ಗೀತಾಂಜಲಿ, ಅಭಯಕುಮಾರ್ ಆಕಿವಾಟೆ, ವಿಜಯಕುಮಾರ್ ಅಕ್ಕಿವಾಟೆ, ಡಾ| ಜೀತೇಂದ್ರ ಖೋತ್, ಭೀಮು ಭೋಲೆ, ಭೀಮು ಆಕಿವಾಟೆ, ಬೊಮ್ಮನ ಚೌಗುಲೆ, ಸುರೇಶ ಚೌಗುಲೆ ಸೇರಿದಂತೆ ಇತರರಿದ್ದರು.