Advertisement

ಆಯುರ್ವೇದ ಆಸ್ಪತ್ರೆಗಳು ಆಯುಷ್ಮಾನ್‌ ವ್ಯಾಪ್ತಿಗೆ: ಶ್ರೀಪಾದ

01:01 AM Jan 09, 2021 | Team Udayavani |

ಹಾಸನ, ಜ. 8: ಶತಮಾನಗಳ ಹಿಂದೆ ರಚನೆಯಾಗಿರುವ ಆಯುರ್ವೇದ ಗ್ರಂಥಗಳ  ಮರು ರಚನೆ ಸಹಿತ ಆಯುಷ್‌ ವೈದ್ಯಕೀಯ ವಿಭಾಗದ ಪುನಶ್ಚೇತನಕ್ಕೆ ಕೇಂದ್ರ ಸರಕಾರ ಅಗತ್ಯ ಕ್ರಮ ಕೈಗೊಂಡಿದೆ ಎಂದು  ಕೇಂದ್ರ ಆಯುಷ್‌ ಇಲಾಖೆ ಸಚಿವ  ಶ್ರೀಪಾದ ಯೆಸೊÕà ನಾಯಕ್‌  ಹೇಳಿದರು.

Advertisement

ನಗರದ  ತಣ್ಣೀರುಹಳ್ಳದಲ್ಲಿರವ  ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ  (ಎಸ್‌ಡಿಎಂ) ಆಯುರ್ವೇದ  ಕಾಲೇಜಿನ  ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರಾಷ್ಟ್ರಮಟ್ಟದ ವಿಚಾರ ಸಂಕಿರಣ “ಶರಾಯು’ ಸಮಾರೋಪ ಸಮಾರಂಭದಲ್ಲಿ ಶಾರಂಗಧರ ಸಂಹಿತೆ ಗ್ರಂಥದ ಇಂಗ್ಲಿಷ್‌ ಭಾಷಾಂತರ ಕೃತಿ “ಶರಾಯು’ವನ್ನು ಬಿಡುಗಡೆ ಮಾಡಿ  ಮಾತನಾಡಿದರು.

ಆಯುಷ್‌ ಇಲಾಖೆ ದೇಶೀಯ ವೈದ್ಯಕೀಯ ಶಿಕ್ಷಣದ ಸುಧಾರಣೆ ಹಾಗೂ ಸಂಶೋಧನೆಗಳಿಗೆ ಹೆಚ್ಚು ಒತ್ತು ನೀಡಿದೆ. ಆಯುಷ್ಮಾನ್‌ ಭಾರತ್‌ ಯೋಜನೆ ವ್ಯಾಪ್ತಿಗೆ ದೇಶದ 2,500 ಆಯುರ್ವೇದ ಆಸ್ಪತ್ರೆಗಳನ್ನು ಸೇರಿಸಲಾಗಿದ್ದು, ದೇಶೀಯ ವೈದ್ಯಪದ್ಧತಿಯೊಂದಿಗೆ  ಸಾರ್ವಜನಿಕ ಆರೋಗ್ಯ ಕ್ಷೇತ್ರವನ್ನು ಬಲಗೊಳಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.

ಬೆಂಗಳೂರಿನ ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯದ ಕುಲಪತಿ ಎಸ್‌. ಸಚ್ಚಿದಾನಂದ ಅವರು ಮಾತನಾಡಿ,  ಆಯುಷ್‌ ಚಿಕಿತ್ಸಾ ಪದ್ಧತಿಗಳನ್ನು ಜನಸಾಮಾನ್ಯರಿಗೆ ದೊರಕಿಸುವಲ್ಲಿ ಎಸ್‌ಡಿಎಂ ಸಂಸ್ಥೆ ಪ್ರಮುಖ ಪಾತ್ರವಹಿಸುವ ಮೂಲಕ ತನ್ನದೇ  ಬ್ರ್ಯಾಂಡ್‌ ಸೃಷ್ಟಿಸಿದೆ ಎಂದರು.

ಶಾಸಕ ಪ್ರೀತಂ ಜೆ. ಗೌಡ, ಆಯುರ್ವೇದ ತಜ್ಞ, ಲೇಖಕ ಡಾ| ಶ್ರೀರಾಮ್‌ ಎಸ್‌. ಸಾವ್ರಿಕರ್‌,  ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಯೋಜನ ನಿರ್ದೇಶಕ ಡಿ. ಶ್ರೇಯಸ್‌ ಕುಮಾರ್‌, ಎಸ್‌ಡಿಎಂ ಆಯುರ್ವೇದ ಕಾಲೇಜು ಪ್ರಾಂಶುಪಾಲ ಡಾ| ಪ್ರಸನ್ನ ಎನ್‌. ರಾವ್‌ ಮತಿತ್ತರರು  ಉಪಸ್ಥಿತರಿದ್ದರು.

Advertisement

ಅಲೋಪಥಿ ವೈದ್ಯರ ಧೋರಣೆಗೆ ಡಾ| ಹೆಗ್ಗಡೆ ಆಕ್ಷೇಪ :

ಆಯುರ್ವೇದ ವೈದ್ಯ ಪದ್ಧತಿಯ ವೈದ್ಯರಿಗೆ ಶಸ್ತ್ರಚಿಕಿತ್ಸೆ ನಡೆಸಲು ಕೇಂದ್ರ ಸರಕಾರ ಅನುಮತಿ ನೀಡಿರುವುದನ್ನು ಅಲೋಪಥಿ ವೈದ್ಯರು ವಿರೋಧಿಸುತ್ತಿರುವುದು ಬೇಸರದ ಸಂಗತಿ ಎಂದು  ಶ್ರೀ ಕ್ಷೇತ್ರ ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ಅವರು ಹೇಳಿದರು.  ಆಯುರ್ವೇದ ಪದ್ಧತಿಯಲ್ಲಿ “ಶಲ್ಯತಂತ್ರ’ ಎಂಬ ಪ್ರತ್ಯೇಕ ವಿಭಾಗವಿದೆ. ಅಲ್ಲಿ ಅಧ್ಯಯನ ಮಾಡಿ, ತರಬೇತಿ ಪಡೆದ ಆಯುರ್ವೇದ ವೈದ್ಯರು, ಅದೇ ಪದ್ಧತಿಯಲ್ಲಿ ಶಸ್ತ್ರಚಿಕಿತ್ಸೆ ನಡೆಸುವುದಕ್ಕೆ ಸರಕಾರ ಅನುಮತಿ ನೀಡಿರುವುದು ಸಮಂಜಸವಾಗಿದೆ ಎಂದು  ಸಮರ್ಥಿಸಿದರು.  ಆಯುರ್ವೇದ ತಜ್ಞರು ಶಸ್ತ್ರಚಿಕಿತ್ಸೆ ನಡೆಸುವ ಜ್ಞಾನವನ್ನು ಬೇರೆ ಕಡೆಯಿಂದ ಪಡೆದುಕೊಂಡಿಲ್ಲ. ಅದು  ದೇಶೀಯ ವೈದ್ಯ ಪರಂಪರೆಯಲ್ಲಿಯೇ ಇದೆ ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next